/newsfirstlive-kannada/media/post_attachments/wp-content/uploads/2025/04/Kavyashree-Gowda.jpg)
ಮಂಗಳಗೌರಿ ಹೆಸರು ಕೇಳಿದ ತಕ್ಷಣ ನೆನಪಾಗೋದೇ ಮುದ್ದು ಮೊಗದ ಸುಂದರಿ ಕಾವ್ಯಶ್ರೀ. ಧಾರಾವಾಹಿ ಮುಗಿದು ವರ್ಷ ಉರಳಿದರೂ ನಟಿ ಯಾವುದೇ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಿಲ್ಲ. ಹಾಗಂತ ಕಂಪ್ಲೀಟ್ ದೂರ ಉಳಿದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ಒಂದಿಷ್ಟು ಬೋಲ್ಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ:ವಿಚಾರಣೆಯ ರಣವ್ಯೂಹದಲ್ಲಿ ಉಗ್ರ ರಾಣಾ.. ಭಾರತಕ್ಕೆ ಕರೆ ತರ್ತಿದ್ದಂತೆ ಏನೆಲ್ಲ ಆಯ್ತು..?
ಪುಟ್ಟಗೌರಿ ಮದುವೆ ನಂತರ ರಾಮ್ಜಿ ಸಂಸ್ಥೆಯಲ್ಲಿ ಮೂಡಿ ಬಂದ ಧಾರಾವಾಹಿ ಮಂಗಳಗೌರಿ ಮದುವೆ. ಕಿರುತೆರೆಯಲ್ಲಿ ಸಾಕಷ್ಟು ಸೌಂಡ್ ಮಾಡಿದ ಧಾರಾವಾಹಿ. ಅತಿ ಹೆಚ್ಚು ಟ್ರೋಲ್ ಆಗಿರೋ ಸೀರಿಯಲ್ ಕೂಡ ಹೌದು. ಕಾವ್ಯಶ್ರೀ ಹಾಗೂ ನಾಯಕ ನಟ ಗಗನ್ ಚಿನ್ನಪ್ಪ ಹಾಗೂ ವಿಲನ್ ಪಾತ್ರ ಮಾಡಿದ್ದ ಬೆಂಕಿ ತನಿಷಾಗೆ ಜನಪ್ರಿಯತೆ ತಂದು ಕೊಟ್ಟ ಸೀರಿಯಲ್ ಅಂದ್ರೆ ಅದು ಮಂಗಳಗೌರಿ.
ಟಿಆರ್ಪಿ ಲಿಸ್ಟ್ನಲ್ಲಿ ಟಾಪ್ ಸ್ಥಾನದಲ್ಲಿರೋವಾಗಲೇ ಧಾರಾವಾಹಿಯನ್ನ ಮುಕ್ತಾಯ ಮಾಡಿತ್ತು ತಂಡ. ಆದ್ರೆ ಮಂಗಳ ಗೌರಿಯ ಸಹಾಸ ದೃಶ್ಯಗಳು ಇಂದಿಗೂ ಸೋಷಿಯಲ್ ಮೀಡಿಯದಲ್ಲಿ ಹರಿದಾಡ್ತಾ ಇರುತ್ತೆ. ಸದ್ಯ ಗಗನ್ ಸೀತಾರಾಮದಲ್ಲಿ ಮಿಂಚ್ತಿದ್ದಾರೆ, ತನಿಷಾ ಬಿಗ್ಬಾಸ್ ಶೋ ನಂತರ ಟ್ರೆಂಡಿಂಗ್ನಲ್ಲಿದ್ದಾರೆ. ಕಾವ್ಯಾಶ್ರೀ ಕೂಡ ಬಿಗ್ ಬಾಸ್ನಲ್ಲಿ ಭಾಗಿಯಾಗಿದ್ರು. ತದನಂತರ ಯಾವುದೇ ಪ್ರಾಜೆಕ್ಟ್ ಮಾಡುತ್ತಿಲ್ಲ. ಫಿಟ್ನೆಸ್ ಕಡೆಗೆ ಹೆಚ್ಚು ಗಮನ ಕೊಟ್ಟಿದ್ದಾರೆ. ಹೊಸ ಹೊಸ ಫೋಟೋಶೂಟ್ಗಳನ್ನ ಮಾಡಿಸ್ತಿರ್ತಾರೆ.
ಹೆಚ್ಚಾಗಿ ಸಾಂಪ್ರದಾಯಕ ಉಡುಗೆಯಲ್ಲೇ ಕಾಣಿಸಿಕೊಳ್ಳುವ ನಟಿ, ಇತ್ತೀಚೆಗೆ ರಿವಾಲ್ವರ್ ಹಿಡಿದು ತುಂಡು ಬಟ್ಟೆಯಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದರು. ವೆಸ್ಟರ್ನ್ ಸ್ಟೈಲ್ನ ಮತ್ತೊಂದಿಷ್ಟು ವಿಡಿಯೋ, ಫೋಟೋಶೂಟ್ಗಳನ್ನು ನಟಿ ಶೇರ್ ಮಾಡಿಕೊಂಡಿದ್ದಾರೆ. ವಯಕ್ತಿಕವಾಗಿ ಕಾವ್ಯಶ್ರೀ ತುಂಬಾ ಜೋಯಿಲ್ ಹುಡುಗಿ. ಸದಾ ನಗ್ತಾ.. ನಗಸ್ತಾ ಇರ್ತಾರೆ. ಸ್ನೇಹಿತರ ಜೊತೆ ಜಾಲಿ ಟ್ರಿಪ್ ಮಾಡ್ತಿರೋ ನಟಿ ರೀಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಕಾವ್ಯಶ್ರೀ ಆದಷ್ಟು ಬೇಗ ಬಣ್ಣ ಹಚ್ಚಲಿ ಅನ್ನೋದು ಅಭಿಮಾನಿಗಳ ಆಶಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ