ಶಿವಮೊಗ್ಗ: ಮಂಗಳದ ಪ್ರಸಿದ್ಧ ನಾಟಿ ವೈದ್ಯ ಎಂ ಬಿ ಶಿವಣ್ಣಗೌಡ ನಿಧನ

author-image
Ganesh
Updated On
ಶಿವಮೊಗ್ಗ: ಮಂಗಳದ ಪ್ರಸಿದ್ಧ ನಾಟಿ ವೈದ್ಯ ಎಂ ಬಿ ಶಿವಣ್ಣಗೌಡ ನಿಧನ
Advertisment
  • ಜನಪದ ವೈದ್ಯರತ್ನ ಎಂದೇ ಖ್ಯಾತಿ ಪಡೆದಿದ್ದರು
  • ದೇಶ, ವಿದೇಶಗಳಿಂದ ಔಷಧಿಗಾಗಿ ಜನ ಬರುತ್ತಿದ್ದರು
  • ಅನೇಕ ಗಣ್ಯರು ಗುಣಪಡಿಸಿದ್ದ ಹೆಗ್ಗಳಿಕೆ ಇವರದ್ದಾಗಿತ್ತು

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಮೀಪದ ಮಂಗಳ ಗ್ರಾಮದ ಪ್ರಸಿದ್ಧ ನಾಟಿ ವೈದ್ಯ ಎಂ.ಬಿ ಶಿವಣ್ಣಗೌಡ ನಿಧನರಾಗಿದ್ದಾರೆ.

publive-image

ಜನಪದ ವೈದ್ಯರತ್ನ, ನಾಟಿ ವೈದ್ಯ ಎಂದೇ ಖ್ಯಾತಿ ಪಡೆದಿದ್ದ ಎಂ.ಬಿ.ಶಿವಣ್ಣಗೌಡ ಇಂದು ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶಿವಣ್ಣಗೌಡ ಇಂದು ಮುಂಜಾನೆ 4.45ಕ್ಕೆ ದೈವಾಧೀನರಾಗಿದ್ದಾರೆ. ಕಳೆದ ನಾಲ್ಕೈದು ದಶಕಗಳಿಂದ ಪಾರಂಪರಿಕ ನಾಟಿ ವೈದ್ಯ ವೃತ್ತಿಯಲ್ಲಿ ಯಾವುದೇ ಪ್ರಚಾರವಿಲ್ಲದೇ ಯಶಸ್ಸು ಕಂಡಿದ್ದರು.

ಇದನ್ನೂ ಓದಿ: ಪುರುಷರೇ ಎಚ್ಚರ.. ಗಂಡ ಕಲರ್ ಕಲರ್ ಬಿಂದಿ ಕೊಡಿಸಲಿಲ್ಲ ಅಂತ ಮುದ್ದಾದ ಹೆಂಡತಿ ಮಾಡಿದ್ದೇನು?

publive-image

ಪಾರಂಪರಿಕ ನಾಟಿ ಔಷಧಿ ನೀಡುತ್ತ ಸಾವಿರಾರು ಜನರ ಬದುಕಿಗೆ ಆಶಾಕಿರಣರಾಗಿದ್ದ ಶಿವಣ್ಣ ಗೌಡರಿಂದ ಅನೇಕ ದೊಡ್ಡ ದೊಡ್ಡ ವ್ಯಕ್ತಿಗಳು ಅನುಕೂಲ ಪಡೆದುಕೊಂಡಿದ್ದಾರೆ. ಮಾಜಿ ಸಚಿವೆ ಮನೋರಮ ಮದ್ವರಾಜ್, ಪತ್ರಕರ್ತೆ ಗೌರಿ ಲಂಕೇಶ್, ಸಾಹಿತಿ ಚಂದ್ರಶೇಖರ್ ಕಂಬಾರ್, ಮಾಜಿ ಸಚಿವ ಈಶ್ವರಪ್ಪ ಹಾಗೂ ಹೊರರಾಜ್ಯಗಳ ಹಾಗೂ ಹೊರರಾಷ್ಟ್ರದ ಅನೇಕರು ಇವರಿಂದ ಔಷಧಿ ಪಡೆದಿದ್ದರು.

publive-image

ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು, ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಇವರ ಸೇವೆಯನ್ನು ಮೆಚ್ಚಿದ್ದರು. ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್​ನಿಂದ ಜಾನಪದ ವೈದ್ಯರತ್ನ ಪ್ರಶಸ್ತಿ ಪಡೆದುಕೊಂಡಿದ್ದರು.

ಇದನ್ನೂ ಓದಿ: ₹2, ₹10, ₹20 ನಾಣ್ಯಗಳನ್ನೇ ನುಂಗಿ ಬದುಕಿದ್ದ ಭೂಪ; ಆಪರೇಷನ್ ಮಾಡಿದ ಡಾಕ್ಟರ್‌ಗೆ ಬಿಗ್ ಶಾಕ್‌!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment