/newsfirstlive-kannada/media/post_attachments/wp-content/uploads/2025/01/Mangalore-Bank-Robbery-1.jpg)
ಕೋಟೆಕಾರು ಸಹಕಾರ ಬ್ಯಾಂಕ್‌ನ 12 ಕೋಟಿ ದರೋಡೆ ಪ್ರಕರಣವನ್ನ ಮಂಗಳೂರು ಪೊಲೀಸರು ಬೇಧಿಸಿದ್ದಾರೆ. ಈ ನಟೋರಿಯಸ್ ಗ್ಯಾಂಗ್‌ನ ಸ್ಫೋಟಕ ಮಾಹಿತಿಗಳು ಬಗೆದಷ್ಟು ಬಯಲಾಗುತ್ತಿದೆ. ಬ್ಯಾಂಕ್ ರಾಬರಿಗೂ ಮೊದಲೇ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಮಂಗಳೂರಲ್ಲಿ ರಾಬರಿ ಮಾಡಿದ್ದು ಮುಂಬೈ ಧಾರಾವಿಯ ಮುರುಗನ್ ಗ್ಯಾಂಗ್ ಅನ್ನೋ ಮಾಹಿತಿ ಪಕ್ಕಾ ಆಗಿದೆ.
ಮಂಗಳೂರಲ್ಲಿ ಬ್ಯಾಂಕ್ ದರೋಡೆ ಮಾಡಿದ ನಟೋರಿಯಸ್ ಗ್ಯಾಂಗ್‌ನ ಸ್ಟೋರಿ ಬಗೆದಷ್ಟು ಬಯಲಾಗುತ್ತಿದೆ. ಫಿಯೆಟ್ ಕಾರಿನಲ್ಲಿ ಎಸ್ಕೇಪ್ ಆದ ದರೋಡೆಕೋರರು ಕದ್ದ ಹಣ, ಚಿನ್ನದ ಸಹಿತ 700 ಕಿಲೋ ಮೀಟರ್ ಪ್ರಯಾಣ ಮಾಡಿದ್ದಾರೆ.
ಇದನ್ನೂ ಓದಿ: ದರ್ಶನ್ಗೆ ಮತ್ತೊಂದು ಶಾಕ್ ಕೊಟ್ಟ ಬೆಂಗಳೂರು ಪೊಲೀಸರು; ತಾತ್ಕಾಲಿಕವಾಗಿ ಗನ್ ಲೈಸನ್ಸ್ ಅಮಾನತು
ತಮಿಳುನಾಡಿನ ಮಧುರೈ ಬಳಿಕ ತಿರುನಲ್ವೇಲಿಗೆ ದರೋಡೆಕೋರರು ಪ್ರಯಾಣ ಮಾಡಿದ್ದಾರೆ. ಅಲ್ಲಿಂದ ಅಜ್ಞಾತ ಸ್ಥಳದಲ್ಲಿ ಕಾರು ಬಿಟ್ಟು ಚಿನ್ನ ಬಚ್ಚಿಟ್ಟು ಎಸ್ಕೇಪ್ ಆಗಿದ್ದರು. ರಾಜ್ಯ ಗುಪ್ತಚರ ಇಲಾಖೆ ದರೋಡೆಕೋರರ ಬಗ್ಗೆ ಮಾಹಿತಿ ಕಲೆ ಹಾಕಿದ್ದು ಶೋಧಕ್ಕಿಳಿದ ಪೊಲೀಸರಿಗೆ ತಮಿಳುನಾಡಲ್ಲಿ ಕಾರು ಪತ್ತೆಯಾಗಿದೆ.
ರಾಜ್ಯ ಗುಪ್ತಚರ ಇಲಾಖೆ ಮಾಹಿತಿ ಆಧರಿಸಿದ ಶೋಧ ಕಾರ್ಯ ನಡೆಸಿದ ಮಂಗಳೂರು ಪೊಲೀಸರು ಸ್ಫೋಟಕ ಮಾಹಿತಿಗಳು ಗೊತ್ತಾಗಿದೆ. ಮೊದಲು ಕಾರಿನ ನಂಬರ್ ಆಧಾರದಲ್ಲಿ ಕಾರಿನ ಮಾಲೀಕರನ್ನ ಪತ್ತೆ ಮಾಡಲಾಯಿತು. ಫಿಯೆಟ್ ಕಾರು ಮಹಾರಾಷ್ಟ್ರ ಮೂಲದ್ದು ಅನ್ನೋದು ಖಚಿತವಾಗಿತ್ತು.
ದರೋಡೆ ಮಾಡಿದ್ದು ಮುಂಬೈ & ತಮಿಳುನಾಡು ಮೂಲದ ನಟೋರಿಯಸ್ ತಂಡ ಎನ್ನಲಾಗಿತ್ತು. ತಮಿಳುನಾಡಿನ ತಿರುನಲ್ವೇಲಿ ಬಳಿ ಪೊಲೀಸರು ಮೂವರು ದರೋಡೆಕೋರರನ್ನ ಅರೆಸ್ಟ್ ಮಾಡಿದ್ದಾರೆ. ಆರೋಪಿಗಳಾದ ಡಿ.ಮುರುಗನ್ ದೇವರ್, ಯೋಶುವಾ ರಾಜೇಂದ್ರನ್ ಬಂಧಿಸಲಾಗಿದೆ.
ಬ್ಯಾಂಕ್ ದರೋಡೆಕೋರರು
01. ಮುರುಗನ್ ಡಿ. ದೇವರ್ 35 ವರ್ಷ
02. ಯೋಶುವಾ ರಾಜೇಂದ್ರನ್ 36 ವರ್ಷ
03. ಕಣ್ಣನ್ ಮಣಿ 36 ವರ್ಷ
2 ತಿಂಗಳ ಹಿಂದೆ ಪ್ಲಾನ್ ದರೋಡೆ!
ದರೋಡೆ ಗ್ಯಾಂಗ್‌ನ ಕಿಂಗ್ ಪಿನ್ ಮುರುಗನ್ ಕಳೆದ 2 ತಿಂಗಳ ಹಿಂದೆ ಮಂಗಳೂರಿಗೆ ಬಂದಿದ್ದ. ಕೋಟೆಕಾರು ಬ್ಯಾಂಕ್ ಅಕ್ಕ-ಪಕ್ಕ ಸುತ್ತಾಡಿ ಮಾಹಿತಿ ಕಲೆ ಹಾಕಿದ್ದ. ಬಳಿಕ ನಿಖರವಾದ ಮಾಹಿತಿ ಆಧರಿಸಿ ಸ್ಕೆಚ್ ತಯಾರಿಸಿ ಮತ್ತೆ ತಮಿಳುನಾಡು ತೆರಳಿದ್ದ.
ಮುರುಗನ್ ಗ್ಯಾಂಗ್ ಬ್ಯಾಂಕ್ ದರೋಡೆಗೆ ಪಕ್ಕಾ ಪ್ಲಾನ್ ಮಾಡಿಕೊಂಡು ತಂಡದ ಜೊತೆ ಬಂದಿದ್ದ. ರಾಜೇಂದ್ರನ್, ಕಣ್ಣನ್ ಮಣಿ & ಇತರೆ 6 ಜನರ ಜೊತೆ ಫಿಯೆಟ್ ಕಾರಿನಲ್ಲಿ ಬಂದು ಬ್ಯಾಂಕ್ ದರೋಡೆ ಮಾಡಿದ್ದಾರೆ. ಇವರ ತಂಡದಲ್ಲಿ ಓರ್ವ ಬೇರೆ ಜಾಗದಲ್ಲಿ ನಿಂತು ದರೋಡೆಗೆ ನೆರವು ನೀಡಿದ್ದ.
ಧಾರಾವಿಯ ಮುರುಗನ್ ಗ್ಯಾಂಗ್ ಕುರಿತ ಸಂಪೂರ್ಣ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ಮಂಗಳೂರು ಬ್ಯಾಂಕ್ ದರೋಡೆಗೂ ಮೊದಲೇ ಮುಂಬೈ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಮುರುಗನ್ ಗ್ಯಾಂಗ್‌ನ ಪ್ಲಾನ್ ಬಗ್ಗೆ ಖಬರಿಗಳು ಮುಂಬೈ ಇಂಟೆಲಿಜೆನ್ಸ್ಗೆ ಮಾಹಿತಿ ರವಾನೆ ಮಾಡಿದ್ದರು. ರಾಬರಿ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಮುರುಗನ್ ಗ್ಯಾಂಗ್ ಮೇಲೆ ನಿಗಾ ಇಟ್ಟಿದ್ದರು ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ