/newsfirstlive-kannada/media/post_attachments/wp-content/uploads/2024/12/swamy-ayyappa.jpg)
ದಕ್ಷಿಣ ಕನ್ನಡ: ಈ ಜಗತ್ತಲ್ಲಿ ನಾವು-ನೀವು ನೋಡದೇ ಇರುವ ಶಕ್ತಿಯೊಂದು ಇದೆ. ಅದರ ಅನುಭವ ಅಗತ್ಯವಿದ್ದಾಗ ಆಗುತ್ತದೆ. ಅದೇ ರೀತಿ ಇಲ್ಲೊಬ್ಬ ಬಾಲಕನಿಗೆ 17 ವರ್ಷಗಳಿಂದ ಮಾತನಾಡಲು ಬರ್ತಿರಲಿಲ್ಲ. ಆದ್ರೆ ಪವಾಡ ಎಂಬಂತೆ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಮಾಡಿದ ಬಳಿಕ ಮಾತು ಶುರುಮಾಡಿದ್ದಾನೆ. ಇದಕ್ಕೆ ಕಾರಣ ಕೋಟಿ ಕೋಟಿ ಭಕ್ತರ ಪಾಲಿನ ಆರಾಧ್ಯ ದೈವ ಅಯ್ಯಪ್ಪ ಸ್ವಾಮಿಯೇ ಅಂತ ಭಕ್ತರು ನಂಬಿದ್ದಾರೆ.
ಸ್ವಾಮಿಯೇ ಶರಣಂ ಅಯ್ಯಪ್ಪ. ಕೇರಳದ ಪಶ್ಚಿಮ ಘಟ್ಟದ ತಪ್ಪಲಲ್ಲಿ 18 ಗಿರಿಗಳ ನಡುವೆ ಕುಕ್ಕುರಗಾಲಲ್ಲಿ ವಿರಾಜಮಾನವಾಗಿರುವ ಸ್ವಾಮಿ. ಕಲ್ಲು-ಮುಳ್ಳುಗಳ ದಾರಿಯಲ್ಲಿ ಬರಿಗಾಲಲ್ಲಿ ನಡೆದು ಬರುವ ಕೋಟಿ ಕೋಟಿ ಭಕ್ತರ ಸಂಕಷ್ಟಗಳನ್ನು ಪರಿಹರಿಸುವ ದೇವ. ಸದ್ಯ ಶಬರಿಮಲೆ ಯಾತ್ರೆಯ ಸಡಗರ ಆರಂಭವಾಗಿದೆ. 48 ದಿನಗಳ ವ್ರತ ಪಾಲಿಸುವ ಭಕ್ತರು, ಅಯ್ಯಪ್ಪನ ದರುಶನವಾಗುವವರೆಗೆ, ಪರಿಶುದ್ಧರಾಗಿ ಕಪ್ಪು ಬಟ್ಟೆ ಧರಿಸಿ ಅಯ್ಯಪ್ಪ ಸ್ವಾಮಿಯನ್ನು ಜಪಿಸುತ್ತಿದ್ದಾರೆ. ಇದೇ ರೀತಿ ಸ್ವಾಮಿಯ ದರ್ಶನ ಮಾಡಿದ ಬಾಲಕನ ಬಾಳಲ್ಲಿ ಯಾರೂ ಉಹಿಸದ ರೀತಿಯಲ್ಲಿ ಪವಾಡ ನಡೆದುಹೋಗಿದೆ.
ಮಾತೇ ಬಾರದ ಬಾಲಕನಿಗೆ ಶಬರಿಮಲೆ ಏರಿ ಬಂದ್ಮೇಲೆ ಮಾತು
ಮಾತೇ ಬಾರದ ಬಾಲಕ ಈಗ ತೊದಲು ಮಾತನಾಡಲು ಶುರುಮಾಡಿದ್ದಾನೆ. ಅದು ಕೂಡ ಶಬರಿಮಲೆ ಏರಿ ಬಂದ ಬಳಿಕ ಈ ಪವಾಡ ನಡೆದಿದೆ ಅಂತ ಭಕ್ತರು ನಂಬಿದ್ದಾರೆ. ಅಂದಾಗೆ ಈ ಬಾಲಕನ ಹೆಸರು ಪ್ರಸನ್ನ. ವಯಸ್ಸು 17. ಮಂಗಳೂರಿನ ಪುತ್ತೂರಿನ ಸಾಮೆತ್ತಡ್ಕ ನಿವಾಸಿ. ಒಂದು ವರ್ಷದ ಹಿಂದೆ ಶಬರಿಮಲೆ ಏರಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದ. ಈ ಬಾರಿ ಮತ್ತೆ ಶಬರಿಮಲೆಗೆ ಹೋಗಲು ಮಾಲೆ ಧರಿಸಿದ್ದ. ಆದ್ರೆ ಅದಕ್ಕೂ ಮೊದಲೇ ಪವಾಡವೆಂಬಂತೆ ಬಾಲಕ ಮಾತನಾಡಲು ಶುರುಮಾಡಿದ್ದಾನೆ. 17 ವರ್ಷಗಳ ಕಾಲ ಮಾತನಾಡದ ಪ್ರಸನ್ನ ಶಬರಿಮಲೆಗೆ ಹೋಗಿ ಬಂದ ಬಾಳಿಕ ಮಾತನಾಡಲು ಆರಂಭಿಸಿದ್ದು ಭಕ್ತರನ್ನು ಅಚ್ಚರಿಗೊಳಿಸಿದ್ದು ಮಾತ್ರವಲ್ಲದೇ ಅವರ ಭಕ್ತಿಯನ್ನು ಇಮ್ಮಡಿಗೊಳಿಸಿದೆ.
ಬಾಲಕನಿಗೆ ಬಂತು ಮಾತು
ಪುತ್ತೂರು ಮಹಾಲಿಂಗೇಶ್ವರ ITIನಲ್ಲಿ ಪ್ರಸನ್ನ 2ನೇ ವರ್ಷದ ಸಿವಿಲ್ ಡಿಪ್ಲೊಮಾ ಮಾಡುತ್ತಿದ್ದಾನೆ. ಕಳೆದ ವರ್ಷ ಕರುಣಾಮಯಿ ಅಯ್ಯಪ್ಪ ಭಕ್ತವೃಂದದಲ್ಲಿ ಪ್ರಸನ್ನ ಮಾಲೆ ಧರಿಸಿದ್ದ. 48 ದಿನಗಳ ಕಾಲ ಕಠಿಣ ವೃತಾಚರಣೆ ಮಾಡಿ ಶಬರಿಮಲೆಗೆ ತೆರಳಿ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿದ್ದ. ಆ ಬಳಿಕ ಮಾತು ಆರಂಭಿಸಿದ್ದು ಅಯ್ಯಪ್ಪ ಸ್ವಾಮಿ ಶರಣು ಅಂತ ಹೇಳೋಕೆ ಶುರು ಮಾಡಿದ್ದಾನೆ. ಈ ಬಾರಿಯೂ ಮಲೆ ಏರಿದ್ರೆ ಇನ್ನಷ್ಟು ಸ್ಪಷ್ಟ ಮಾತಾಡುವ ವಿಶ್ವಾಸವಿದೆ.
ಒಟ್ಟಾರೆ ಒಂದು ಶಬ್ದವನ್ನೂ ಮಾತನಾಡದ 17 ವರ್ಷದ ಬಾಲಕನೋರ್ವ ಶಬರಿಮಲೆ ಏರಿಬಂದ ಬಳಿಕ ಮಾತನಾಡಲು ಆರಂಭಿಸಿದ್ದಾನೆ. ಇದು ಸದ್ಯ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದ್ದು ಮಾತ್ರವಲ್ಲದೇ ಭಕ್ತವೃಂದದಲ್ಲಿ ಅದೇನೋ ಹೊಸ ಉತ್ಸಾಹ ಮೂಡಿದಂತಾಗಿದೆ.
ಇದನ್ನೂ ಓದಿ: ನಂದಿನಿ ಹಾಲು ಖರೀದಿ ಮಾಡೋ ಗ್ರಾಹಕರಿಗೆ ಬಿಗ್ ಶಾಕ್; ಲೀಟರ್ಗೆ 5 ರೂ. ಏರಿಕೆಗೆ ಚಿಂತನೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ