ಮಂಗಳೂರಲ್ಲಿ ಮನೆ ಮಾಲೀಕರೊಬ್ಬರಿಗೆ ಕರೆಂಟ್ ಬಿಲ್ ಶಾಕ್
ಒಂದೇ ತಿಂಗಳು 7 ಲಕ್ಷ ರೂಪಾಯಿಯ ಬಿಲ್ ನೋಡಿ ಅಚ್ಚರಿಗೊಂಡ ಮನೆ ಮಾಲೀಕ
ದೊಡ್ಡ ಮೊತ್ತದ ಬಿಲ್ ನೋಡಿ ಮೆಸ್ಕಾಂ ಕಚೇರಿಗೆ ದೂರು ಕೊಟ್ಟ ಮಾಲೀಕ
ಮಂಗಳೂರು: ಶಕ್ತಿ ಯೋಜನೆ ಜಾರಿಯಾದ ಬೆನ್ನಲ್ಲೇ ಕರೆಂಟ್ ಬಿಲ್ ಹೆಚ್ಚಳವಾಗಿದೆ. ಇದೇ ವಿಚಾರವಾಗಿ ಅಲ್ಲೊಂದು ಇಲ್ಲೊಂದು ಸುದ್ದಿಗಳು ಮುನ್ನಲೆಗೆ ಬರುತ್ತಿರುತ್ತವೆ. ಆದರೀಗ ಮನೆ ಮಾಲೀಕನೋರ್ವನಿಗೆ ಬರೋಬ್ಬರಿ 7 ಲಕ್ಷ ರೂಪಾಯಿ ಕರೆಂಟ್ ಬಿಲ್ ಬಂದಿರುವ ಘಟನೆ ಗೊತ್ತಾ? ಈ ಸ್ಟೋರಿ ಓದಿ
ಮಂಗಳೂರಿನ ಉಳ್ಳಾಲ ಮೂಲದ ವ್ಯಕ್ತಿಗೆ ಬರೋಬ್ಬರಿ 7 ಲಕ್ಷ ವಿದ್ಯುತ್ ಬಿಲ್ ಬಂದಿದೆ. ಆದರೆ ಇಷ್ಟೊಂದು ದೊಡ್ಡ ಮೊತ್ತದ ಕರೆಂಟ್ ಬಿಲ್ ಕಂಡು ಮನೆ ಮಾಲೀಕ ಶಾಕ್ ಆಗಿದ್ದಾನೆ.
ಉಳ್ಳಾಲಬೈಲಿನ ನಿವಾಸಿ ಸದಾಶಿವ ಆಚಾರ್ಯ ಕರೆಂಟ್ ಬಿಲ್ ಕಂಡು ಅಚ್ಚರಿಗೊಂಡಿದ್ದಾರೆ. ಇಷ್ಟೊಂದು ಬಿಲ್ ಯಾಕೆಂದು ಕೇಳಿದ್ದಕ್ಕೆ ಮೆಸ್ಕಾಂ ಕಚೇರಿಗೆ ಕೇಳಿ ಎಂದ ರೀಡರ್ ಹೇಳಿದ್ದಾನೆ.
ಮನೆ ಮಾಲೀಕ ಸದಾಶಿವ ಆಚಾರ್ಯ ಬಿಲ್ ರೀಡರ್ ಎಡವಟ್ಟಿನಿಂದ ಮನೆಯ ವಿದ್ಯುತ್ ಬಿಲ್ 7,71,072 ರೂಪಾಯಿ ಬಂದಿದೆ ಎಂದು ಹೇಳಿದ್ದಾರೆ. ರೀಡರ್ 99,338 ಯೂನಿಟ್ ಖರ್ಚಾಗಿದೆ ಎಂದು ಬಿಲ್ ನಮೂದಿಸಿದ್ದಾನೆ ಎಂದು ಮನೆ ಮಾಲೀಕ ತಿಳಿಸಿದ್ದಾರೆ.
ಇನ್ನು ಸದಾಶಿವ ಆಚಾರ್ಯ ಅವರಿಗೆ ಪ್ರತಿ ತಿಂಗಳು ಮೂರು ಸಾವಿರದಷ್ಟು ಬಿಲ್ ಬರುತ್ತಿದ್ದು, ಆದರೆ ಒಂದೇ ಬಾರಿ 7 ಲಕ್ಷ ರೂಪಾಯಿ ಬಿಲ್ ಬಂದಿದ್ದನ್ನು ಕಂಡು ಶಾಕ್ ಆಗಿದ್ದಾನೆ. ಕೊನೆಗೆ ಮೆಸ್ಕಾಂ ಕಚೇರಿಗೆ ದೂರು ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ