newsfirstkannada.com

ಆಸ್ಪತ್ರೆಯಲ್ಲಿ ಹೆಂಡತಿಗೆ ಹೃದಯಾಘಾತ, ಸಾವು.. ಸುದ್ದಿ ತಿಳಿದು ಜೀವ ತೆಗೆದುಕೊಂಡ ಗಂಡ

Share :

Published March 1, 2024 at 9:33am

  ಕೆಲ ತಿಂಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ್ದರು

  ಹೆಂಡತಿ ಮೃತಪಟ್ಟಿರುವುದನ್ನ ಅರಗಿಸಿಕೊಳ್ಳದ ಗಂಡ, ಆತ್ಮಹತ್ಯೆ

  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದಿದ್ದ ಹೆಂಡತಿ

ಮಂಗಳೂರು: ಹೃದಯಾಘಾತದಿಂದ ಪತ್ನಿ ಮೃತಪಟ್ಟಿರುವುದನ್ನ ಅರಗಿಸಿಕೊಳ್ಳದ ಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ಹೊರವಲಯದ ಕೊಣಾಜೆಯಲ್ಲಿ‌ ನಡೆದಿದೆ.

ಕೊಣಾಜೆ ಗ್ರಾಮ ಚಾವಡಿ ನಿವಾಸಿಗಳಾದ ಸೇಸಪ್ಪ ಪೂಜಾರಿ (60) ಆತ್ಮಹತ್ಯೆ ಮಾಡಿಕೊಂಡವರು. ಪತ್ನಿ ಮೀನಾಕ್ಷಿ (55) ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆದು ಎಲ್ಲ ಗುಣಮುಖರಾಗಿದ್ದರು. ಆದರೆ ಎರಡು ದಿನಗಳ ಹಿಂದೆ ಮತ್ತೆ ಹೃದಯಾಘಾತ ಆಗಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ತೀವ್ರ ಗಂಭೀರವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದ ಕಾರಣ ಪತ್ನಿ ಸಾವನ್ನಪ್ಪಿದ್ದರು.

ಪತ್ನಿ ಸಾವನ್ನಪ್ಪಿರುವ ವಿಷಯ ತಿಳಿಯುತ್ತಿದ್ದಂತೆ ನೋವಿಗೆ ಒಳಗಾದ ಗಂಡ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಖಾಸಗಿ ಶಾಲಾ ಬಸ್​ ಡ್ರೈವರ್​ ಆಗಿದ್ದ ಈತನಿಗೆ ಮಕ್ಕಳಿರಲಿಲ್ಲ. ಈ ಕೊರಗು ಅನೇಕ ವರ್ಷಗಳಿಂದ ದಂಪತಿಯನ್ನು ಹೆಚ್ಚು ಕಾಡಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಸ್ಪತ್ರೆಯಲ್ಲಿ ಹೆಂಡತಿಗೆ ಹೃದಯಾಘಾತ, ಸಾವು.. ಸುದ್ದಿ ತಿಳಿದು ಜೀವ ತೆಗೆದುಕೊಂಡ ಗಂಡ

https://newsfirstlive.com/wp-content/uploads/2024/03/MNG_WIFE_HUSBAND.jpg

Load More