ಕೋಟೆಕಾರು ಬ್ಯಾಂಕ್‌ ದರೋಡೆ ಕೇಸ್ ಬೇಧಿಸುವಲ್ಲಿ ಪೊಲೀಸರು ಯಶಸ್ವಿ.. ರಾಶಿ ರಾಶಿ ಚಿನ್ನ ಕಂಡು ಶಾಕ್

author-image
Bheemappa
Updated On
ಕೋಟೆಕಾರು ಬ್ಯಾಂಕ್‌ ದರೋಡೆ ಕೇಸ್ ಬೇಧಿಸುವಲ್ಲಿ ಪೊಲೀಸರು ಯಶಸ್ವಿ.. ರಾಶಿ ರಾಶಿ ಚಿನ್ನ ಕಂಡು ಶಾಕ್
Advertisment
  • ಖದೀಮರು 6 ತಿಂಗಳಿನಿಂದ ರೂಪಿಸಿದ್ದ ಖತರ್ನಾಕ್ ದರೋಡೆ ಪ್ಲಾನ್
  • ಸಹಕಾರಿ ಬ್ಯಾಂಕ್​ನಿಂದ 2,265 ಚಿನ್ನಾಭರಣ ದೋಚಿದ್ದ ಮುಂಬೈ ಗ್ಯಾಂಗ್
  • ರಾಷ್ಟ್ರ ಮಟ್ಟದಲ್ಲಿ ಸಂಚಲನ ಮೂಡಿಸಿದ್ದ ಕೋಟೆಕಾರು ಬ್ಯಾಂಕ್‌ ದರೋಡೆ

ಮಂಗಳೂರು: ರಾಜ್ಯದ ಅತಿ ದೊಡ್ಡ ದರೋಡೆ‌, ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್​ನ ದರೋಡೆ ಪ್ರಕರಣವನ್ನು ಬೇಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. 14 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್​ನ ದರೋಡೆ ರಾಷ್ಟ್ರಮಟ್ಟದಲ್ಲಿ ಸಂಚಲ ರೂಪಿಸಿತ್ತು. ಈ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಸಾಹಸ ಮೆಚ್ಚುವಂತಹದ್ದು ಆಗಿದೆ. 6 ತಿಂಗಳಿಂದ ದರೋಡೆಕೋರರು ಖತರ್ನಾಕ್ ಪ್ಲಾನ್ ರೂಪಿಸಿ ಸಹಕಾರಿ ಬ್ಯಾಂಕ್​ನಿಂದ 2,265 ಬಳೆ, ಓಲೆ, ಸರ ಸೇರಿ ಇತರೆ ಚಿನ್ನಾಭರಣಗಳನ್ನು ದೋಚಿದ್ದರು. ತನಿಖೆ ವೇಳೆ ದರೋಡೆ ಮಾಡಲಾದ ಚಿನ್ನದ ರಾಶಿಯನ್ನು ಕಂಡು ಪೊಲೀಸರು ನಿಂತಲ್ಲೇ ದಂಗಾಗಿ ಹೋಗಿದ್ದರು.

ಸದ್ಯ ದರೋಡೆಕೋರರು 4 ಬ್ಯಾಗ್​ನಲ್ಲಿ ಬಚ್ಚಿಟ್ಟಿದ್ದ 14 ಕೋಟಿ ಮೌಲ್ಯದ 18.314 ಕೆ.ಜಿಯ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಕೃತ್ಯಕ್ಕೆ ಬಳಸಿರುವ ಫಿಯಟ್ ಕಾರು, 2 ಮಚ್ಚುಗಳು, 2 ಪಿಸ್ತೂಲು, 3 ಜೀವಂತ ಗುಂಡು ವಶಕ್ಕೆ ಪಡೆಯಲಾಗಿದೆ. ಇನ್ನು ಬಂಧಿತರಿಂದ 3.80 ಲಕ್ಷ ನಗದು ವಶಕ್ಕೆ ತೆಗೆದುಕೊಂಡಿದ್ದಾರೆ.

publive-image

ಇದನ್ನೂ ಓದಿ:ಡಿ.ಕೆ ಸುರೇಶ್​ಗೆ ಮಹತ್ವದ ಹುದ್ದೆ? ಹೇಗಿದೆ DCM ಡಿ.ಕೆ ಶಿವಕುಮಾರ್ ಕಸರತ್ತು?

ಮಂಗಳೂರಿನ ಉಳ್ಳಾಲ ತಾಲೂಕಿನ ಕೆಸಿ. ರೋಡ್ ಜಂಕ್ಷನ್​ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಶಾಖೆಯಲ್ಲಿ ಜ.17ರಂದು ದರೋಡೆ ನಡೆದಿತ್ತು. ಈ ಪ್ರಕರಣ ಸಂಬಂಧ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಪದ್ಮನೇರಿ ಗ್ರಾಮದಲ್ಲಿ ಮುಂಬೈನ ಚೆಂಬೂರ್ ತಿಲಕ ನಗರದ ಕಣ್ಣನ್ ಮಣಿ (36), ಪದ್ಮನೇರಿ ಗ್ರಾಮದ ಮುರುಗುಂಡಿ ಥೇವರ್ (36), ಮುಂಬೈನ ದೊಂಬಿವಲಿ ವೆಸ್ಟ್‌ನ ಯೊಸುವಾ ರಾಜೇಂದ್ರನ್ (35), ಷಣ್ಣುಗ ಸುಂದರಂ ಎಂಬುವರನ್ನು ಬಂಧಿಸಲಾಗಿದೆ.
ರಾಜ್ಯದ ಅತ್ಯಂತ ದೊಡ್ಡ ಪ್ರಕರಣ ಬೇಧಿಸಿರುವುದರ ಕುರಿತು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾತನಾಡಿದ್ದಾರೆ. ಬಂಧಿತರಿಂದ

ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ ಹಾಗೂ ಪಿಸ್ತೂಲು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಮುಂಬೈಯ ಪದ್ಮನೇರಿ ಗ್ರಾಮದ ಮುರುಗುಂಡಿ ಥೇವರ್ (36), ದೊಂಬಿವಲಿ ವೆಸ್ಟ್‌ನ ಯೊಸುವಾ ರಾಜೇಂದ್ರನ್ (35), ಕಣ್ಣನ್ ಮಣಿ, ಷಣ್ಣುಗ ಸುಂದರಂ ಎಂಬುವರನ್ನು ಅರೆಸ್ಟ್ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಬ್ಯಾಂಕ್​ನಲ್ಲಿ ದರೋಡೆ ನಡೆಸಿದ ನಂತರ ಮುರುಗಂಡಿ ಥೇವರ್ ಹಾಗೂ ಯೊಸುವಾ ರಾಜೇಂದ್ರನ್ ಫಿಯಟ್ ಕಾರಿನಲ್ಲಿ ತಲಪಾಡಿ ಗೇಟಿನಿಂದ ಕೇರಳ ಕಡೆಗೆ ಕಡೆಗೆ ಪರಾರಿಯಾಗಿದ್ದರು. ಉಳಿದ 4 ಆರೋಪಿತರು ಮಂಗಳೂರು ರೈಲು ನಿಲ್ದಾಣಕ್ಕೆ ತೆರಳಿದ್ದರು. ಇವರಲ್ಲಿ ಮೂವರು ಆಟೋದಲ್ಲಿ ಮತ್ತು ಒಬ್ಬನು ಬಸ್ಸಿನಲ್ಲಿ ಪ್ರಯಾಣಿಸಿ ಎಸ್ಕೇಪ್ ಆಗಿದ್ದರು. ಮುರುಗಂಡಿ ಮತ್ತು ತಂಡ ತಮಿಳುನಾಡಿಗೆ ಪರಾರಿಯಾಗಲು ಯೋಜಿಸಿದ್ದರು. ಅಲ್ಲದೇ ಇಲ್ಲಿ ದೋಚಿದ್ದ ಬಂಗಾರದ ಆಭರಣಗಳನ್ನು ಮುಂಬೈನ ಕಪ್ಪು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ‌ ಪ್ಲಾನಲ್ಲಿ ಈ ಧಾರಾವಿ‌ ಗ್ಯಾಂಗ್ ಇತ್ತು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment