/newsfirstlive-kannada/media/post_attachments/wp-content/uploads/2025/05/Suhas-shetty-father.jpg)
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಓಲೈಕೆಯಿಂದಾಗಿ ನನ್ನ ಮಗ ಜೀವಬಿಟ್ಟಿದ್ದಾನೆ ಎಂದು ಸುಹಾಸ್ ತಂದೆ ಮೋಹನ್ ಶೆಟ್ಟಿ ಆರೋಪಿಸಿದ್ದಾರೆ.
ಮಗನ ವಿಚಾರ ತಿಳಿದು ಕಣ್ಣೀರು ಇಡುತ್ತ ಮಾತನಾಡಿರುವ ಮೋಹನ್ ಶೆಟ್ಟಿ, ಹೀಗೆ ಆಗುತ್ತೆ ಅನ್ನೋ ಆತಂಕ ನಮಗೆ ಇತ್ತು. ಜೀವ ಬೆದರಿಕೆ ಸಂಬಂಧ ಅನೇಕ ಬಾರಿ ಹೇಳಿದ್ದ. ಶತ್ರುಗಳು ಫಾಲೋ ಮಾಡಿಕೊಂಡು ಬಂದಿರುವ ಬಗ್ಗೆ ತಿಳಿಸಿದ್ದ. ಅದಕ್ಕೆ ಸ್ವಲ್ಪ ಹುಷಾರಾಗಿರು. ಮನೆಗೆ ಬೇಗ ಬಾ ಮಗನೇ ಎನ್ನುತ್ತಿದ್ದೆ.
ಇದನ್ನೂ ಓದಿ: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಹಿಂದೆ ಪ್ರವೀಣ್​ ನೆಟ್ಟಾರು ಪ್ರಕರಣ ಲಿಂಕ್..?
/newsfirstlive-kannada/media/post_attachments/wp-content/uploads/2025/05/Suhas-shetty.jpg)
ಬೆದರಿಕೆ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆ ಮನಸ್ಸು ಮಾಡಿದ್ರೆ ಮಗನ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿತ್ತು. ಇದಕ್ಕೆಲ್ಲ ಕಾರಣ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಾರಣ. ಅವರ ಸರ್ಕಾರ ಸಂಪೂರ್ಣ ಅಲ್ಪ ಸಂಖ್ಯಾತರ ಪರ ಇದೆ.
ಇತ್ತೀಚೆಗಿನ ದಿನಗಳಲ್ಲಿ ಆತ ಬದಲಾಗಿದ್ದ. ನಮಗೂ ಖುಷಿ ಆಗಿತ್ತು. ಮನೆಗೆ ಆಧಾರ ಸ್ಥಂಭವಾಗಿದ್ದ. ಮನೆಯಲ್ಲಿ ಒಂದು ಲಾರಿ ಇತ್ತು. ಅದನ್ನು ಬಾಡಿಗೆ ಕೊಟ್ಟಿದ್ದ. ಕೊನೆಯದಾಗಿ ಆತ ಏಪ್ರಿಲ್ 30 ರಂದು ಬಂದಿದ್ದ. ತಮ್ಮನ ಮಗಳ ಮದುವೆ ಇತ್ತು. ಆಗ ಬಂದವ ಮಾತನಾಡಿದ್ದ. ಎಲ್ಲರೂ ಒಟ್ಟಿಗೆ ಊಟ ಮಾಡಿದ್ವಿ.
ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು. ನನಗೆ ಸಿದ್ದರಾಮಯ್ಯ ಸರ್ಕಾರದ ತನಿಖೆ ಮೇಲೆ ನಂಬಿಕೆ ಇಲ್ಲ. ಅವರು ಅಲ್ಪಸಂಖ್ಯಾತರ ಓಲೈಕೆಯಲ್ಲಿದ್ದಾರೆ. ಹೀಗಾಗಿ ಸರಿಯಾದ ತನಿಖೆ ಆಗುತ್ತದೆ ಅನ್ನೋ ವಿಶ್ವಾಸ ಇಲ್ಲ. ಮಗನ ಸಾವಿಗೆ ನ್ಯಾಯ ಸಿಗಲಿ ಎಂದು ಕಣ್ಣೀರು ಇಟ್ಟಿದ್ದಾರೆ.
ಇದನ್ನೂ ಓದಿ: ವಿಳಂಬ ನ್ಯಾಯದಾನ, ಸರ್ಕಾರದ ನೀತಿಯಿಂದ ಜನ ವಿಶ್ವಾಸ ಕಳೆದುಕೊಂಡಿದ್ದಾರೆ – ಪೇಜಾವರ ಶ್ರೀ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us