/newsfirstlive-kannada/media/post_attachments/wp-content/uploads/2025/05/Suhas-shetty-1.jpg)
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಪ್ರಕರಣದ ಹಿಂದೆ ಬಿದ್ದಿರುವ ಮಂಗಳೂರು ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ. ಫಾಜಿಲ್ ಕೇಸ್ನ ರಿವೇಂಜ್ಗಾಗಿ ಸುಹಾಸ್ ಶೆಟ್ಟಿಯನ್ನು ಮುಗಿಸಲಾಗಿದೆ ಎಂಬ ಮಾಹಿತಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಸುಹಾಸ್ ಪ್ರಕರಣದ ಮಾಸ್ಟರ್ ಮೈಂಡ್ ನೌಷಾದ್ ಅನ್ನೋದನ್ನು ಪೊಲೀಸರು ತಿಳಿದುಕೊಂಡಿದ್ದಾರೆ. ಈತನೇ ಫಾಜಿಲ್ ಹತ್ಯೆಗೆ ಪ್ರತೀಕಾರವಾಗಿ ಸುಹಾಸ್ ಶೆಟ್ಟಿಯನ್ನು ಮುಗಿಸಿದ್ದಾನೆ. ಈ ಪ್ರಕರಣದಲ್ಲಿ 9 ಜನರ ಗ್ಯಾಂಗ್ ಕೆಲಸ ಮಾಡಿದ್ದು, ಪೊಲೀಸರು ತನಿಖೆ ಆರಂಭಿಸ್ತಿದ್ದಂತೆಯೇ ನೌಷಾದ್ ತಲೆ ಮರೆಸಿಕೊಂಡಿದ್ದಾನೆ.
ಇದನ್ನೂ ಓದಿ: ಸುಹಾಸ್ ಶೆಟ್ಟಿ ಕೇಸ್ನಲ್ಲಿ 8 ಶಂಕಿತರು ವಶಕ್ಕೆ.. ಇವತ್ತು ಪರಮೇಶ್ವರ್ ಮಂಗಳೂರು ಭೇಟಿ
ದಾಳಿಯ ಕ್ಷಣ..
ಮೀನು ಸಾಗಿಸುವ ಮಿನಿ ಕಂಟೇನರ್ ಲಾರಿಯನ್ನು ನಟೋರಿಯಸ್ ಸಫ್ವಾನ್ ಚಲಾಯಿಸುತ್ತಿದ್ದ. ಈತ ಸುಹಾಸ್ ಶೆಟ್ಟಿ ಕಾರನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ. ಮಂಗಳೂರು ಹೊರವಲಯದ ಕಿನ್ನಿಪದವು ಬಳಿ ಬರ್ತಿದ್ದಂತೆಯೇ ಸುಹಾಸ್ ಶೆಟ್ಟಿ ಕಾರಿಗೆ ಅಪಘಾತ ಮಾಡಿದ್ದಾನೆ.
ಸಫ್ವಾನ್ ಚಲಾಯಿಸುತ್ತಿದ್ದ ಲಾರಿ ಹಿಂದೆ ಮುಝಂಬಿಲ್ ಮತ್ತು ನೌಷಾದ್ ಗ್ಯಾಂಗ್ ಸ್ವಿಫ್ಟ್ ಕಾರಿನಲ್ಲಿ ಬರುತ್ತಿತ್ತು. ಅಪಘಾತ ಆಗುತ್ತಿದ್ದಂತೆಯೇ ಕಾರಿನಿಂದ ಇಳಿದ ಗ್ಯಾಂಗ್, ಮನಸೋ ಇಚ್ಛೆ ದಾಳಿ ಮಾಡಿ ಮುಗಿಸಿ ಅಲ್ಲಿಂದ ಪರಾರಿ ಆಗಿದೆ.
ಇದನ್ನೂ ಓದಿ: ಪಹಲ್ಗಾಮ್ ದಾಳಿ ಬೆನ್ನಲ್ಲೇ ಮೈಸೂರಿಗೆ ಬೆದರಿಕೆ.. ಅರಮನೆ ನಗರಿಯಲ್ಲಿ ಆತಂಕದ ಪರಿಸ್ಥಿತಿ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ