newsfirstkannada.com

12 ವರ್ಷಗಳ ಬಳಿಕ ಬಾಹುಬಲಿಗೆ ಮಹಾಮಜ್ಜನದ ವೈಭವ.. ಶತಮಾನದ 3ನೇ ಮಹಾ ಮಸ್ತಕಾಭಿಷೇಕ

Share :

Published February 23, 2024 at 8:21am

    ವಿಶಿಷ್ಟ ದೀಪಾಲಂಕಾರದಿಂದ, ಭಕ್ತರಿಂದ ಪ್ರಜ್ವಲಿಸ್ತಿರುವ ವೇಣೂರು

    ಹಳದಿ ಹುಡಿ ಬಾಹುಬಲಿಗೆ ಎರಚಿದಾಗ ಚಿನ್ನದ ಕಾಂತಿ ಮೂಡಿತು

    ಭಗವಾನ್ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕದ ಸಂಭ್ರಮ

ನೀರು, ಎಳನೀರು, ಕಬ್ಬಿನ ಹಾಲು, ಹಾಲು, ಅಕ್ಕಿಹುಡಿ, ಕಷಾಯ ಧಾರೆ ಧಾರೆಯಾಗಿ ನೆತ್ತಿಯಿಂದ ಪಾದದತ್ತ ಇಳಿಯುತ್ತಿದ್ದಂತೆ, ಅರಿಷಡ್ವರ್ಗಗಳ ಗೆದ್ದ ವಿರಾಗಿಯ ಮೋಹಕ ಮೂರ್ತಿಯ ಮೊಗದಲ್ಲಿ ಮುಗುಳುನಗೆ. ಈ ಮುಗುಳು ನಗೆ ಸೇರಿದ್ದ ಜೈನ ಭಕ್ತಸಮೂಹವನ್ನ ಸಮ್ಮೊಹನಗೊಳಿಸಿತು. ಇದು‌ ಮಂಗಳದ್ರವ್ಯಗಳಲ್ಲಿ ಮಿಂದೆದ್ದ ವೇಣೂರಿನ ಬಾಹುಬಲಿ ಸ್ವಾಮಿ ಮಹಾಮಜ್ಜನದ ವೈಭವ.

ವೇಣೂರಿನ ದಿಬ್ಬದ ಮೇಲೆ ವಿರಾಜಮಾನವಾಗಿರುವ ಬಾಹುಬಲಿ. ಬಾಹುಬಲಿಯ ಬಿಂಬದಲ್ಲಿ ಮೂಡುವ ಮಂದಹಾಸದ ಚಂದ. ಈ ವೈರಾಗಿಗೆ 12 ವರ್ಷಗಳ ಬಳಿಕ ಜಳಕದ ಪುಳಕ. ವಿಶಿಷ್ಟ ದೀಪಾಲಂಕಾರದಿಂದ ಪ್ರಜ್ವಲಿಸ್ತಿರುವ ವೇಣೂರು. ಈ ದೃಶ್ಯ ಕಾವ್ಯ ಕಣ್ತುಂಬಿಕೊಂಡ ಭಕ್ತ ಸಮೂಹ.

ವಿರಾಟ್ ವಿರಾಗಿ ಬಾಹುಬಲಿಗೆ ಮಹಾಮಜ್ಜನ!

ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ. ಇದು ಭಗವಾನ್​​​ ಬಾಹುಬಲಿಯ ಸಂದೇಶ. ಅಂದ್ಹಾಗೆ, ವೇಣೂರು ಭಗವಾನ್ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕದ ಸಂಭ್ರಮ. ಜಗತ್ತಿನ ಏಕೈಕ ಮಂದಸ್ಮಿತ ಏಕಶಿಲಾ ಬಾಹುಬಲಿ ಸ್ವಾಮಿಯ ಮಸ್ತಕಾಭಿಷೇಕ ವೈಭವ ಆರಂಭವಾಗಿದೆ. ವೈರಾಗಿಗೆ ಮಾಹಾಮಜ್ಜನ ಇನ್ನು 8 ದಿನ ನಡೆಯಲಿದೆ.

ಶುದ್ಧಾತ್ಮರಾಗಲು ಪ್ರಯತ್ನಿಸಿದ್ದಾರೆ

ಸೇವಕರು ಬಹಳ ಭಕ್ತಿಯಿಂದ ಬಂದು ಉತ್ಸಾಹಿಗಳಾಗಿದ್ದಾರೆ. ತಮ್ಮ ಪಾಪ, ಕರ್ಮಗಳನ್ನ ಕರಗಿಸಿಕೊಳ್ಳುವುದು ಎಂದು ಜೈನ ಧರ್ಮದಲ್ಲಿ ಹೇಳಿದ್ದಾರೆ. ಈ ಪಾಪಗಳನ್ನು ಕರಗಿಸಿಕೊಳ್ಳುವುದಕ್ಕೆ ಭಗಂವತನಿಗೆ ಮಾಡುವ ಒಂದೊಂದು ಅಭಿಷೇಕವನ್ನ ದರ್ಶನ ಮಾಡಬೇಕು. ಕರ್ಮಗಳನ್ನ ನಾಶ ಮಾಡಿ ಶುದ್ಧಾತ್ಮರಾಗಲು ಪ್ರಯತ್ನಿಸುತ್ತಿದ್ದಾರೆ.

ವೀರೇಂದ್ರ ಹೆಗ್ಗಡೆ, ಧರ್ಮಸ್ಥಳದ ಧರ್ಮಾಧಿಕಾರಿ

ಆರಂಭದಲ್ಲಿ ನೀರಿನ ಸ್ನಾನದ ಬಳಿಕ, ಬಾಹುಬಲಿಯ ಮೈಯನ್ನು ಎಳನೀರ ಧಾರೆ ಆವರಿಸಿತು. ಕಬ್ಬಿನ ಹಾಲಿನ ಅಭಿಷೇಕದ ವೇಳೆ ನಸುಕಂದು ಬಣ್ಣದಿಂದ‌ಕಂಗೊಳಿಸಿದ ಮೂರ್ತಿ ಹಾಲಿನ ಅಭಿಷೇಕದ ವೇಳೆ ಶುಭ್ರ ಶುದ್ಧ ಬಿಳಿ ಬಣ್ಣಕ್ಕೆ ತಿರುಗಿತು. ಸೇವಾಕರ್ತರು ಅಕ್ಕಿ ಹುಡಿ ಎರಚಿದಾಗ ಮೋಡದ ನಡುವೆ ಎದ್ದುಬಂದಂತೆ ಕಾಣಿಸಿದ ಮೂರ್ತಿ, ಹಳದಿ ಹುಡಿ ಎರಚಿದಾಗ ಚಿನ್ನದ ಕಾಂತಿಯಿಂದ ಕಂಗೊಳಿಸ್ತು.. ಕಲ್ಪಚೂರ್ಣದ ಧಾರೆ ಹರಿವಾಗ ಮೂರ್ತಿಯಲ್ಲಿ ಮೈದಳೆದ ಹಳದಿ ಬಿಳಿ ರಂಗಿನೋಕುಳಿ ಅವ್ಯಕ್ತ ಆನಂದವನ್ಜು ಕಟ್ಡಿಕೊಟ್ಟಿತು.. ಅರಶಿನದ ಆಭಿಷೇಕದ ವೇಳೆ ಗಾಢ ಹಳದಿ ಬಣ್ಣಕ್ಕೆ ತಿರುಗಿದ ಬಾಹುಬಲಿಯ ಚಹರೆ ಕಣ್ಣಿಗೆ ಹಬ್ಬವನ್ನುಂಟುಮಾಡಿತು. ಕಷಾಯ ಅಭಿಷೇಕದ ವೇಳೆ ಕಂದು ಬಣ್ಣಕ್ಕೆ ತಿರುಗಿತು.

ಈ ಬಾರಿ 50 ಅಡಿ ಎತ್ತರದ ಕಬ್ಬಿಣದ ಅಟ್ಟಳಿಗೆ ಸಿದ್ಧವಾಗಿದ್ದು, 5 ಅಂತಸ್ತಿನಲ್ಲಿದೆ. ಪ್ರತಿ ಅಂತಸ್ತಿನಲ್ಲಿ 100 ಮಂದಿ ನಿಲ್ಲಲು ಸ್ಥಳಾವಕಾಶ ಇದೆ. ವಿದ್ಯುದ್ದೀಪಗಳಿಂದ ಅಲಂಕೃತವಾದ ಅಟ್ಟಳಿಗೆಯ ಮೇಲೇರಿ ಸೇವಾಕರ್ತರು ಒಂದೊಂದೇ ಮಂಗಳ ದ್ರವ್ಯಗಳನ್ನು ಸರ್ವಸಂಗ ಪರಿತ್ಯಾಗಿಯ ಮೂರದತಿಯ ನೆತ್ತಿಗೆ ಸುರಿಯುತ್ತಿದ್ದಂತೆ ಬಾಹುಬಲಿ ಮುಖಭಾವವೂ ಬದಲಾಯಿತು.

ಮಂತ್ರಘೋಷ, ಕೊಂಬು, ಕಹಳೆ ಮೊದಲಾದ ಮಂಗಳವಾದ್ಯ, ಜಿನಗುಣಗಾನ, ಜೈಕಾರಗಳ ನಡುವೆ ಮಹಾಮಜ್ಜನ ಭಕ್ತರಿಗೆ ಅಲೌಕಿಕ ಅನುಭವಕ್ಕೆ ಕರೆದೊಯ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

12 ವರ್ಷಗಳ ಬಳಿಕ ಬಾಹುಬಲಿಗೆ ಮಹಾಮಜ್ಜನದ ವೈಭವ.. ಶತಮಾನದ 3ನೇ ಮಹಾ ಮಸ್ತಕಾಭಿಷೇಕ

https://newsfirstlive.com/wp-content/uploads/2024/02/BAHUBALI-4.jpg

Load More