newsfirstkannada.com

‘ಮುಸ್ಲಿಂರಿಗೆ ದೇಶದ ಸಂಪತ್ತು’- ಕಾಂಗ್ರೆಸ್, BJP ಮಧ್ಯೆ ಮಂಗಳಸೂತ್ರ ಫೈಟ್; ಪ್ರಧಾನಿ ಮೋದಿ ಹೇಳಿದ್ದೇನು?

Share :

Published April 22, 2024 at 3:12pm

    ತಾಯಂದಿರೇ, ಸೋದರಿಯರೇ ನಿಮ್ಮ ಮಂಗಳಸೂತ್ರವು ಉಳಿಯಲ್ಲ..

    ದೇಶದ ಸಂಪತ್ತನ್ನು ಹೆಚ್ಚು ಮಕ್ಕಳಿರುವವರಿಗೆ ನೀಡುತ್ತಾರೆ ಎಂದ ಮೋದಿ

    ಪ್ರಧಾನಿ ಮೋದಿ ಅವರ ಭಾಷಣಕ್ಕೆ ಕಾಂಗ್ರೆಸ್ ನಾಯಕರು ಕೆಂಡಾಮಂಡಲ

ನವದೆಹಲಿ: ದೇಶದ ಸಂಪತ್ತಿನ ಮೇಲೆ ಮೊದಲ ಅಧಿಕಾರ ಮುಸ್ಲಿಂರಿಗೆ ಇದೆ ಎನ್ನುವ ಭರವಸೆ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಅತಿ ದೊಡ್ಡ ಸಂಚಲನ ಸೃಷ್ಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಮತಾನಾಡಿದ್ದು, ರಾಷ್ಟ್ರ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದೆ. ಕಾಂಗ್ರೆಸ್, ಬಿಜೆಪಿ ನಾಯಕರ ಮಧ್ಯೆ ಮಂಗಳಸೂತ್ರ ಮೆಗಾ ಫೈಟ್ ರಂಗೇರಿದೆ.

ರಾಜಸ್ಥಾನದ ಬನಸವಾರದಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ. ಈ ವೇಳೆ ದೇಶದ ಸಂಪತ್ತಿನ ಮೇಲೆ ಮೊದಲ ಅಧಿಕಾರ ಮುಸ್ಲಿಂರಿಗೆ ಇದೆ ಎಂದು ಕಾಂಗ್ರೆಸ್ ಹೇಳಿತ್ತು. ಈ ಸಂಪತ್ತು ಒಗ್ಗೂಡಿಸಿ ಯಾರಿಗೆ ನೀಡ್ತಾರೆ? ಹೆಚ್ಚು ಮಕ್ಕಳಿರುವವರಿಗೆ ನೀಡ್ತಾರೆ. ನಿಮ್ಮ ಸಂಪತ್ತು ಅನ್ನು ದೇಶಕ್ಕೆ ಒಳ ನುಸುಳುಕೋರರಿಗೆ ನೀಡಬೇಕೇ? ಎಂದು ಪ್ರಧಾನಿ ಮೋದಿ ಅವರು ಜನರನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಭಾರೀ ಸದ್ದು ಮಾಡ್ತಿದೆ ಚೊಂಬು ಪಾಲಿಟಿಕ್ಸ್.. HD ದೇವೇಗೌಡ-ಸಿಎಂ ಸಿದ್ದರಾಮಯ್ಯ ನಡುವೆ ವಾಕ್ಸಮರ

ಪ್ರಧಾನಿ ನರೇಂದ್ರ ಮೋದಿ ಅವರ ಈ ಹೇಳಿಕೆ ದೇಶದಲ್ಲಿ ಹೊಸ ವಿವಾದ ಸೃಷ್ಟಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಮೋದಿ ಅವರು ಮಾಡಿರೋ ಭಾಷಣದ ವಿಡಿಯೋ ವೈರಲ್‌ ಆಗಿದೆ. ಇದಕ್ಕೆ ಬಿಜೆಪಿ ನಾಯಕರು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಮಾತನಾಡಿರುವ 10 ವರ್ಷ ಹಿಂದಿನ ಭಾಷಣದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಸಂಪತ್ತಿನ ಸವಾಲಿಗೆ ಕಾಂಗ್ರೆಸ್ ನಾಯಕರು ಕೂಡ ತಿರುಗೇಟು ನೀಡುತ್ತಿದ್ದಾರೆ.

ಪ್ರಧಾನಿ ಮೋದಿ ಹೇಳಿದ್ದೇನು?
ರಾಜಸ್ಥಾನದಲ್ಲಿ ಚುನಾವಣಾ ಭಾಷಣ ಮಾಡಿರುವ ಪ್ರಧಾನಿ ಮೋದಿ ಅವರು ದೇಶದ ಸಂಪತ್ತಿನ ಮೇಲೆ ಮೊದಲ ಅಧಿಕಾರ ಮುಸ್ಲಿಂರಿಗೆ ಇದೆ ಎಂದು ಕಾಂಗ್ರೆಸ್ ಹೇಳಿತ್ತು. ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ದೇಶದ ತಾಯಿ, ಸಹೋದರಿಯರ ಚಿನ್ನದ ಲೆಕ್ಕ ಹಾಕುತ್ತೇವೆ. ಆ ಚಿನ್ನವನ್ನ ಹಂಚುತ್ತೇವೆ ಎಂದಿದ್ದಾರೆ.

ತಾಯಂದಿರೇ, ಸೋದರಿಯರೇ ನಿಮ್ಮ ಮಂಗಳಸೂತ್ರವು ಉಳಿಯಲ್ಲ. ಕಾಂಗ್ರೆಸ್ ಪಕ್ಷ ಈಗ ಆರ್ಬನ್ ನಕ್ಸಲ್ ಮೈಂಡ್‌ ಸೆಟ್‌ನಲ್ಲಿದೆ. ಕಾಂಗ್ರೆಸ್ ಈಗ ವಾಮಪಂಥೀಯರ ಹಿಡಿತದಲ್ಲಿದೆ. ಅದಕ್ಕೆ ಸಾಕ್ಷಿಯೇ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ. ಕಾಂಗ್ರೆಸ್ ತನ್ನ ಚುನಾವಣಾ ಪ್ರನಾಳಿಕೆಯಲ್ಲಿ ಹೇಳಿರುವುದು ಗಂಭೀರವಾದ ವಿಷಯ ಎಂದು ಮೋದಿ ಹೇಳಿದ್ದಾರೆ.

ಇದೇ ವೇಳೆ ಮಾವೋವಾದಿ ಚಿಂತನೆಯನ್ನು ದೇಶದಲ್ಲಿ ಜಾರಿಗೊಳಿಸಲು ಯತ್ನಿಸಲಾಗುತ್ತಿದೆ. ಒಂದು ವೇಳೆ ಕಾಂಗ್ರೆಸ್ ಸರ್ಕಾರ ಬಂದರೆ ಪ್ರತಿಯೊಬ್ಬರ ಆಸ್ತಿಯ ಸರ್ವೇ ಮಾಡಲಾಗುತ್ತೆ. ನಮ್ಮ ತಾಯಂದಿರ ಬಳಿ ಎಷ್ಟು ಚಿನ್ನ ಇದೆ ಎಂದು ಲೆಕ್ಕ ಹಾಕಿ ಸರ್ವೇ ಮಾಡಲಾಗುತ್ತೆ. ತಾಯಂದಿರು, ಸೋದರಿಯರ ಬಳಿ ಇರುವ ಚಿನ್ನವನ್ನು ಎಲ್ಲರಿಗೂ ಸಮಾನವಾಗಿ ಹಂಚುತ್ತೇವೆ ಎಂದಿದ್ದಾರೆ. ತಾಯಂದಿರೇ ಆರ್ಬನ್ ನಕ್ಸಲ್ ಆಲೋಚನೆ ನಿಮ್ಮ ಮಂಗಳಸೂತ್ರವನ್ನು ಉಳಿಸಲ್ಲ. ಇದಕ್ಕೆ ನಿಮ್ಮ ಒಪ್ಪಿಗೆ ಇದೆಯೇ ಎಂದು ಪ್ರಧಾನಿ ಮೋದಿ ಜನರನ್ನು ಪ್ರಶ್ನಿಸಿದ್ದಾರೆ.

ನಿಮ್ಮ ಸಂಪತ್ತಿನ ಮೇಲೆ ಕೈ ಹಾಕುವ ಅಧಿಕಾರ ಸರ್ಕಾರಕ್ಕೆ ಇದೆಯೇ? ತಾಯಂದಿರ ಚಿನ್ನ ಬರೀ ಶೋ ಮಾಡುವುದಕ್ಕಾಗಿ ಅಲ್ಲ, ಅದು ತಾಯಂದಿರ ಸ್ವಾಭಿಮಾನಕ್ಕೆ ಸಂಬಂಧಿಸಿದ್ದು. ಮಂಗಳಸೂತ್ರ ಬರೀ ಚಿನ್ನದ್ದಲ್ಲ, ಜೀವನದ ಕನಸಿನೊಂದಿಗೆ ಸಂಬಂಧ ಇದೆ. ಇದನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಕಿತ್ತುಕೊಳ್ಳುವ ಮಾತನಾಡಿದೆ. ಚಿನ್ನ ತೆಗೆದುಕೊಂಡು ಎಲ್ಲರಿಗೂ ಹಂಚುವುದಾಗಿ ಹೇಳಿದೆ. ಈ ಮೊದಲು ಇದ್ದ ಕಾಂಗ್ರೆಸ್ ಸರ್ಕಾರ ದೇಶದ ಸಂಪತ್ತಿನ ಮೇಲೆ ಮೊದಲ ಅಧಿಕಾರ ಮುಸಲ್ಮಾನರಿಗೆ ಇದೆ ಎಂದಿತ್ತು. ಈ ಸಂಪತ್ತು ಅನ್ನು ತೆಗೆದುಕೊಂಡು ಯಾರಿಗೆ ಹಂಚುತ್ತಾರೆ? ಹೆಚ್ಚು ಮಕ್ಕಳಿರುವವರಿಗೆ ಸಂಪತ್ತು ಹಂಚುತ್ತಾರೆ. ಮನಮೋಹನ್ ಸಿಂಗ್ ಸರ್ಕಾರ ಈ ದೇಶದ ಸಂಪತ್ತಿನ ಮೇಲೆ ಮೊದಲ ಅಧಿಕಾರ ಮುಸಲ್ಮಾನರಿಗೆ ಎಂದು ಹೇಳಿತ್ತು ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಮುಸ್ಲಿಂರಿಗೆ ದೇಶದ ಸಂಪತ್ತು’- ಕಾಂಗ್ರೆಸ್, BJP ಮಧ್ಯೆ ಮಂಗಳಸೂತ್ರ ಫೈಟ್; ಪ್ರಧಾನಿ ಮೋದಿ ಹೇಳಿದ್ದೇನು?

https://newsfirstlive.com/wp-content/uploads/2024/04/Modi-On-Indian-Muslim.jpg

Load More