Advertisment

VIDEO: ಆಟೋ ರಿಕ್ಷಾ ಮತ್ತು ಬೈಕ್ ನಡುವೆ ಭೀಕರ ಅಪಘಾತ.. 19 ವರ್ಷದ ಯುವಕ ಸಾವು

author-image
AS Harshith
Updated On
VIDEO: ಆಟೋ ರಿಕ್ಷಾ ಮತ್ತು ಬೈಕ್ ನಡುವೆ ಭೀಕರ ಅಪಘಾತ.. 19 ವರ್ಷದ ಯುವಕ ಸಾವು
Advertisment
  • ಆಟೋ ರಿಕ್ಷಾ ಮತ್ತು ಬೈಕ್ ಮುಖಾಮುಖಿ ಡಿಕ್ಕಿ
  • ಡಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಆಟೋ ಪ್ರಯಾಣಿಕ
  • ಸಿಸಿಟಿವಿಯಲ್ಲಿ ಭೀಕರ ರಸ್ತೆ ಅಪಘಾತದ ದೃಶ್ಯ ಸೆರೆ

ಮಂಗಳೂರು: ಆಟೋ ರಿಕ್ಷಾ ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನಲ್ಲಿ ನಡೆದಿದೆ. ಅಪಘಾತದಲ್ಲಿ 19 ವರ್ಷದ ವಯಸ್ಸಿನ ಮಹಮ್ಮದ್ ಅಲ್ತಾಫ್ ಎಂಬಾತ ಸಾವನ್ನಪ್ಪಿದ್ದಾನೆ.

Advertisment

ಡಿಕ್ಕಿ‌ ರಭಸಕ್ಕೆ ಆಟೋದಲ್ಲಿದ್ದ  ಪ್ರಯಾಣಿಕ ಮಹಮ್ಮದ್ ಅಲ್ತಾಫ್ ರಸ್ತೆಗೆ ಎಸೆಯಲ್ಪಟ್ಟಿದ್ದಾನೆ. ಗಂಭೀರ ಗಾಯಗೊಂಡ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ  ಮಹಮ್ಮದ್ ಅಲ್ತಾಫ್ ಕೊನೆಯುಸಿರೆಳೆದಿದ್ದಾನೆ.


">May 21, 2024

ಇದನ್ನೂ ಓದಿ: ಇನೋವಾ ಹಾಗೂ ಕಂಟೇನರ್ ನಡುವೆ ಭೀಕರ ಅಪಘಾತ; ತಾಯಿ, ಮಗ ಸ್ಥಳದಲ್ಲೇ ಸಾವು, ನಾಲ್ವರು ಗಂಭೀರ

Advertisment

ಆಟೋ ಸಜಿಪ ಕಡೆಯಿಂದ ಬಿಸಿರೋಡ್ ಕಡೆ ತೆರಳುತ್ತಿತ್ತು. ಬೈಕ್​ ಸವಾರರು ಬಿಸಿರೋಡ್ ನಿಂದ ಪಾಣೆಮಂಗಳೂರು ಕಡೆ ಬರುತ್ತಿದ್ದರು. ಈ ವೇಳೆ ಬೈಕ್​ ಸವಾರ ನೇರವಾಗಿ ಆಟೋಗೆ ಗುದ್ದಿದ್ದಾನೆ. ಗುದ್ದಿದ ರಭಸಕ್ಕೆ ಆಟೋ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇನ್ನು ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment