ಬಗೆದಷ್ಟು ಬಯಲಾಗ್ತಿದೆ ರೋಹನ್ ಮಾಯಾಜಾಲ.. ತನಿಖೆ ವೇಳೆ ಅಚ್ಚರಿ ವಿಚಾರ ಬಹಿರಂಗ!

author-image
Veena Gangani
Updated On
ಬಗೆದಷ್ಟು ಬಯಲಾಗ್ತಿದೆ ರೋಹನ್ ಮಾಯಾಜಾಲ.. ತನಿಖೆ ವೇಳೆ ಅಚ್ಚರಿ ವಿಚಾರ ಬಹಿರಂಗ!
Advertisment
  • ಆರೋಪಿ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು​
  • ದುಡ್ಡಿರೋ ದೊಡ್ಡ ಕುಳಗಳೇ ಈತನ ಟಾರ್ಗೆಟ್​?
  • ವಂಚನೆ ಜಾಲ ಕಂಡು ಪೊಲೀಸರೇ ಫುಲ್ ಶಾಕ್

ಮಂಗಳೂರು: ಸಾಲ ಕೊಡುವ ನೆಪದಲ್ಲಿ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರೋಹನ್‌ ಸಲ್ದಾನಾ ವಿಚಾರಣೆ ವೇಳೆ ಪೊಲೀಸರೇ ದಂಗಾಗಿದ್ದಾರೆ. ರೋಹನ್ ಸಲ್ದಾನಾ ಹೆಣೆದಿರುವ ವಂಚನೆಯ ಮಾಯಾಜಾಲ ಕಂಡು ದಂಗಾಗಿರುವ ಮಂಗಳೂರು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಕಿಪ್ಪಿ ಕೀರ್ತಿಗಾಗಿ ಕೋಬ್ರಾ VS ಕಪ್ಪೆ ಕಿತ್ತಾಟ.. ಪೊಲೀಸ್​ ಠಾಣೆ ಮೆಟ್ಟಿಲೇರಿದ ಲವ್​ ಸ್ಟೋರಿ..!

publive-image

ರೋಹನ್​ ವಿರುದ್ಧ ಇನ್ನೂ ಹಲವು ಉದ್ಯಮಿಗಳು ಸೆನ್​ ಠಾಣೆಗಳಲ್ಲಿ ದೂರು ದಾಖಲಿಸುತ್ತಿದ್ದಾರೆ. ಅದರಂತೆ ಮಹಾರಾಷ್ಟ್ರದ ಉದ್ಯಮಿಗೆ 5 ಕೋಟಿ ಹಾಗೂ ಅಸ್ಸಾಂನ ಉದ್ಯಮಿಗೆ 20 ಲಕ್ಷ ರೂಪಾಯಿ ವಂಚಿಸಿರುವುದಾಗಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಬ್ಯಾಂಕ್​ಗಳನ್ನ ಸಂಪರ್ಕಿಸಿ ಮಹಾರಾಷ್ಟ್ರದ ಉದ್ಯಮಿಗೆ ಸಂಬಂಧಿಸಿದ 3.5 ಕೋಟಿ ಹಣ ಹಾಗೂ ಅಸ್ಸಾಂ ರಾಜ್ಯದ ವ್ಯಕ್ತಿಗೆ ಸಂಬಂಧಿಸಿದ ರೂ 20 ಲಕ್ಷ ಹಣವನ್ನು ಫ್ರೀಜ್ ಮಾಡಿಸಿದ್ದಾರೆ.

publive-image

ಯಾರು ಈ ರೋಹನ್ ಸಲ್ದಾನಾ..?

ಮೊದ ಮೊದಲು ರೋಹನ್ ಕಷ್ಟದ ಜೀವನ ನಡೆಸುತ್ತಿದ್ದ. ದಿನ ಕಳೆದಂತೆ ವಂಚನೆ ಮಾಡೋದಕ್ಕೆ ಶುರು ಮಾಡಿಕೊಂಡಿದ್ದ. ಇನ್ನೂ ವಂಚನೆ ಜಾಲಕ್ಕೂ ಮುನ್ನ ರೋಹನ್ ಮುಂಬೈಯಲ್ಲಿ ಕೆಲಸ ಮಾಡಿಕೊಂಡಿದ್ದನಂತೆ. ಸ್ಟೋನ್, ಹಣದ ವ್ಯವಹಾರವನ್ನೂ ಮಾಡುತ್ತಿದ್ದ. ಸಾಕಷ್ಟು ಜನಕ್ಕೆ ತನಗೆ ಪ್ರಸಿದ್ಧ ಉದ್ಯಮಿಗಳ ಪರಿಚಯ ಇದೆ ಅಂತಾ ಹೇಳಿಕೊಳ್ಳುತ್ತಿದ್ದನಂತೆ. 2016ರ ಬಳಿಕ ವಂಚನೆಯ ಜಾಲಕ್ಕೆ ಕೈ ಹಾಕಿದ್ದ. ಹಣದಾಸೆಯಿಂದ ವಂಚನೆಯ ಜಾಲವನ್ನು ವಿಸ್ತಾರ ಮಾಡಿಕೊಂಡಿದ್ದ. ಇದೇ ವರ್ಷದ ಜನವರಿಯಲ್ಲಿ ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಆ ಬಳಿಕ ಕೋಟಿ ರೂಪಾಯಿ ವಂಚನೆಗೆ ಕೈ ಕಳೆದ ಮೂರು ತಿಂಗಳ ಅವಧಿಯಲ್ಲಿ 40 ಕೋಟಿ ರೂಪಾಯಿ ವ್ಯವಹಾರ ಮಾಡಿದ್ದ. ರೋಹನ್ ಬ್ಯಾಂಕ್ ಅಕೌಂಟ್​ನಲ್ಲಿ 40 ಕೋಟಿ ರೂಪಾಯಿ ಇರುವುದು ಪತ್ತೆಯಾಗಿದೆ. ಹೀಗೆ ಕಳೆದ ತಿಂಗಳು 10 ಕೋಟಿ ರೂಪಾಯಿ ಮೌಲ್ಯದ ಫಿಶಿಂಗ್ ಬೋಟ್ ತಯಾರು ಮಾಡಲು ಹೂಡಿಕೆ ಮಾಡಿದ್ದ. ತನ್ನ ಐಷಾರಾಮಿ ಬಂಗಲೆಗೆ ಕರೆಸಿ ರಾಜಾತಿಥ್ಯ ನೀಡಿ ಡೀಲ್‌ ಕುದುರಿಸುತ್ತಿದ್ದ. ಉದ್ಯಮಿಗಳಿಗೆ ತಾನು‌ ಆಗರ್ಭ ಶ್ರೀಮಂತ ಎಂಬಂತೆ ಪೋಸ್ ಕೊಡುತ್ತಿದ್ದ. ನೂರು ಕೋಟಿ ಸಾಲವನ್ನು ಕೇವಲ 3ರಿಂದ ನಾಲ್ಕು ಪರ್ಸೆಂಟ್ ಬಡ್ಡಿಗೆ ಕೊಡುವುದಾಗಿ ಹೇಳಿ ಡೀಲ್ ಕುದುರಿಸುತ್ತಿದ್ದ. ಅಲ್ಲದೇ ಅಗ್ರಿಮೆಂಟ್ ಮಾಡೋದಕ್ಕೆ ಸ್ಟಾಂಪ್ ಪೇಪರ್ ಮೊತ್ತ ಕೇಳುತಿದ್ದ. ನೂರು ಕೋಟಿಗೆ ಸ್ಟಾಂಪ್ ಪೇಪರ್ ಮೊತ್ತ ಎಂದು‌ 4 ಕೋಟಿ ರೂಪಾಯಿ ಕ್ಯಾಶ್ ಪಡೆದುಕೊಳ್ಳುತ್ತಿದ್ದ. ಇದಾದ ಬಳಿಕ ಫೋನ್ ಆಫ್ ಮಾಡಿ ತಲೆ ಮರೆಸಿಕೊಳ್ಳುತ್ತಿದ್ದನಂತೆ. ಅಷ್ಟೇ ಅಲ್ಲದೇ ಮನೆಯಲ್ಲೇ ಅವಿತುಕೊಳ್ಳಲು ಸೀಕ್ರೆಟ್ ಚೇಂಬರ್ ಮಾಡಿಕೊಂಡಿದ್ದನಂತೆ. ಹೀಗಾಗಿಯೇ ಬೆಡ್ ರೂಮ್​ನ ವಾರ್ಡ್ರೋಪ್ ಹಿಂದೆ ರಹಸ್ಯ ಕೋಣೆ ಮಾಡಿಕೊಂಡಿದ್ದನಂತೆ. ಪೊಲೀಸರು ರೈಡ್ ಮಾಡಿದರೂ ಯಾರಿಗೂ ತಿಳಿಯದ ರೀತಿ ಒಳಗಡೆಯೇ ಅಡಗುತಾಣಗಳನ್ನು ಮಾಡಿಕೊಂಡಿದ್ದನಂತೆ.

ಹೆಚ್ಚಿನ ವಿವರಕ್ಕಾಗಿ ಇದನ್ನೂ ಓದಿ:ಐಷಾರಾಮಿ ಮನೆ, ಫಾರಿನ್ ಎಣ್ಣೆ.. 10 ವರ್ಷದಲ್ಲಿ ₹200 ಕೋಟಿ ದೋಖಾ.. ನಯವಂಚಕ ಸಿಕ್ಕಿದ್ದೇ ರೋಚಕ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
Advertisment