ಮಕ್ಕಳ ತಬ್ಬಿಕೊಂಡಿದ್ದ ತಾಯಿಗೆ ಗೊತ್ತೇ ಇಲ್ಲ.. ಕೈ ಅಲ್ಲಾಡಿಸುತ್ತಿದ್ದ ಮಗುವೂ ಬದುಕುಳಿಯಲಿಲ್ಲ..

author-image
Veena Gangani
Updated On
ಮಕ್ಕಳ ತಬ್ಬಿಕೊಂಡಿದ್ದ ತಾಯಿಗೆ ಗೊತ್ತೇ ಇಲ್ಲ.. ಕೈ ಅಲ್ಲಾಡಿಸುತ್ತಿದ್ದ ಮಗುವೂ ಬದುಕುಳಿಯಲಿಲ್ಲ..
Advertisment
  • ಮಂಗಳೂರಿನಲ್ಲಿ ಮಳೆಗೆ ಮನೆ ಮೇಲೆ ಕುಸಿದ ಗುಡ್ಡ
  • ಮನೆಯಲ್ಲಿದ್ದ ಐವರ ಪೈಕಿ ಓರ್ವ ಮೂವರು ಬಲಿ
  • ಮನೆಯಡಿ ಸಿಲುಕಿದ ಒಂದೇ ಕುಟುಂಬದ ಐದು ಜನ

ಮಂಗಳೂರು: ನಿರಂತರ ಸುರಿಯುತ್ತಿರುವ ಭಾರೀ ಮಳೆಯಿಂದ ಗುಡ್ಡ ಕುಸಿದು ಮಂಗಳೂರಲ್ಲಿ ಒಂದೇ ಕುಟುಂಬದ ಮೂವರು ಜೀವ ಬಿಟ್ಟಿದ್ದಾರೆ.

ಇದನ್ನೂ ಓದಿ: ಮಂಗಳೂರಲ್ಲಿ ಕರುಳು ಚುರ್ ಅನ್ನೋ ದೃಶ್ಯ.. ಗುಡ್ಡ ಕುಸಿತದಲ್ಲಿ ಸಿಲುಕಿ ಕೈ ಅಲ್ಲಾಡಿಸ್ತಿದೆ ಪುಟ್ಟ ಕಂದಮ್ಮ..

publive-image

ಹೌದು, ಉಳ್ಳಾಲದ ದೇರಳಕಟ್ಟೆ ಮೊಂಟೆದ ಪಂಬದ ಹಿತ್ಲುವಿನಲ್ಲಿ ಘೋರ ದುರಂತದಲ್ಲಿ ಮನೆ ಮೇಲೆ ಗುಡ್ಡ ಕುಸಿದ ಪರಿಣಾಮ ಐವರಲ್ಲಿ ಮೂವರು ಮೃತಪಟ್ಟಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

publive-image

ದುರಂತಕ್ಕೂ ಮುನ್ನ, ಸೀತಾರಾಮ ಪೂಜಾರಿ ಅವರು ಮನೆಯಿಂದ ಹೊರಬಂದು ತಮ್ಮನ್ನು ತಾವು ರಕ್ಷಣೆ ಮಾಡಿಕೊಂಡಿದ್ದಾರೆ. ಆದ್ರೆ ಈ ದುರಂತದಲ್ಲಿ ಕಾಂತಪ್ಪ ಪತ್ನಿ ಪ್ರೇಮಾ ಪೂಜಾರಿ, ಆರ್ಯನ್, ಆರುಷ್ ಮೃತಪಟ್ಟಿದ್ದಾರೆ. ಅಲ್ಲದೇ ಕಾಂತಪ್ಪ ಪೂಜಾರಿ ಅವರಿಗೆ ಕಾಲು ಕಟ್ ಆಗಿದ್ದು, ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ಸೀತಾರಾಮ ಪೂಜಾರಿ ಅಶ್ವಿನಿ ಪೂಜಾರಿ ಎರಡೂ ಕಾಲಿಗೆ ಗಾಯಗಳಾಗಿದ್ದು ಸದ್ಯ ಅವರು ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

publive-image

ಸತತವಾಗಿ 10 ಗಂಟೆಗಳ ಕಾಲ ಕಾರ್ಯಾಚರಣೆಯಲ್ಲಿ ಇಬ್ಬರು ಮಕ್ಕಳ ತಾಯಿ ಅಶ್ವಿನಿ ಹಾಗೂ ಕಾಂತಪ್ಪ ಪೂಜಾರಿ ಪಾರಾಗಿದ್ದಾರೆ. ಆದ್ರೆ ದುರದೃಷ್ಟವಶಾತ್ ಇಬ್ಬರು ಮುದ್ದಾದ ಮಕ್ಕಳು ಹಾಗೂ ಕಾಂತಪ್ಪ ಪತ್ನಿ ಪ್ರೇಮಾ ನಿಧನರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment