Advertisment

ಅಮೆಜಾನ್​ಗೆ 20 ಕೋಟಿಗೂ ಅಧಿಕ ಪಂಗನಾಮ.. ಮಂಗಳೂರು ಪೊಲೀಸರ ಕೈಗೆ ಸೆರೆಸಿಕ್ಕ ಖತರ್ನಾಕ್​ ಖದೀಮರು

author-image
AS Harshith
Updated On
ಅಮೆಜಾನ್​ಗೆ 20 ಕೋಟಿಗೂ ಅಧಿಕ ಪಂಗನಾಮ.. ಮಂಗಳೂರು ಪೊಲೀಸರ ಕೈಗೆ ಸೆರೆಸಿಕ್ಕ ಖತರ್ನಾಕ್​ ಖದೀಮರು
Advertisment
  • ಅಮೆಜಾನ್​ಗೆ ವಂಚಿಸಿದ ಖತರ್ನಾಕ್​ ಕಿಲಾಡಿಗಳು
  • ಡೆಲಿವರಿ ಬಾರ್​ ಕೋಡ್ ಮೂಲಕ ವಂಚಿಸುತ್ತಿದ್ದ ಖದೀಮರು
  • ಡೆಲಿವರಿ ವಸ್ತುಗಳನ್ನು ಖರೀದಿಸಲು ವಿಮಾನದಲ್ಲಿ ಬರುತ್ತಿದ್ದ ಇಬ್ಬರು

ಮಂಗಳೂರು: ಜಾಗತಿಕ ದೈತ್ಯ ಅಮೆಜಾನ್ ಕಂಪನಿಗೆ ಬರೋಬ್ಬರಿ 30 ಕೋಟಿ ಪಂಗನಾಮ ಹಾಕಿದ ಕಿರಾತಕರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರಾಜಸ್ಥಾನದ ಧೋಪುರ್ ಜಿಲ್ಲೆಯ ನಿವಾಸಿ ರಾಜ್ ಕುಮಾರ್ ಮೀನಾ (23), ಕರೌಲಿ ಜಿಲ್ಲೆಯ ಸುಭಾಸ್ ಗುರ್ಜರ್ (27) ಎಂದು ಗುರುತಿಸಲಾಗಿದೆ.

Advertisment

ರಾಜ್ ಕುಮಾರ್ ಮತ್ತು ಸುಭಾಸ್ ಗುರ್ಜರ್ ದಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ಸ್ ಆಗಿದ್ದು, ಅಮೆಜಾನ್ ಕಂಪನಿಯ ನಿಯಮಗಳನ್ನೇ ಬಂಡವಾಳ ಮಾಡಿಕೊಂಡು ವಂಚಿಸಿದ್ದಾರೆ. ಸದ್ಯ ರಾಜಸ್ಥಾನ ಮೂಲದ ಇಬ್ಬರು ಖದೀಮರನ್ನು ಮಂಗಳೂರು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

publive-image

ಇದನ್ನೂ ಓದಿ: ದಾವಣಗೆರೆಯಲ್ಲೊಂದು ವಿಚಿತ್ರ ಗ್ರಾಮ.. ಇವರು ದೀಪಾವಳಿ ವಿರೋಧಿಗಳಲ್ಲ.. ಆದ್ರೂ ಹಬ್ಬವನ್ನು ಆಚರಿಸಲ್ಲ! ಯಾಕೆ?

ಅಮೆಜಾನ್ ಕಂಪನಿಯ ಆನ್​ಲೈನ್ ಮೂಲಕ ವಿವಿಧ ರೀತಿಯ ಬೆಲೆಬಾಳುವ ಸಾಮಾಗ್ರಿಗಳನ್ನು ಖರೀದಿಸಿ ವಂಚಿಸುತ್ತಿದ್ದರು. ತಮಿಳುನಾಡು, ಕೇರಳ, ಅಸ್ಸಾಂ, ಕರ್ನಾಟಕ, ದೆಹಲಿ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ವಂಚನೆ ಮಾಡಿದ್ದಾರೆ.

Advertisment

ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಇಂದು ಕೊನೆ ದಿನ.. ನಾಳೆ ಬಾಗಿಲು ಮುಚ್ಚಲಿರುವ ಆಡಳಿತ ಮಂಡಳಿ

publive-image

ವಸ್ತುಗಳ ಡೆಲಿವರಿ ಪಡೆಯಲು ಟೈಯರ್ ಟು ಸಿಟಿ ಲೊಕೇಶನ್​ ಆಯ್ಕೆ ಮಾಡುತ್ತಿದ್ದರು. ಬುಕ್ ಮಾಡಿದ ವಸ್ತುಗಳನ್ನು ಡೆಲಿವರಿ ಪಡೆಯಲು ವಿಮಾನದಲ್ಲಿ ಬರುತ್ತಿದ್ದರು. ಐಟಂ ಬಾಕ್ಸಿನ ಟ್ರ್ಯಾಕಿಂಗ್ ಐಡಿಯನ್ನು ಅದಲು ಬದಲು ಮಾಡಿ ಅಮೆಜಾನ್ ಸಂಸ್ಥೆಗೆ ವಂಚಿಸುತಿದ್ದರು. ಹೀಗೆ 4-5 ವರ್ಷದಲ್ಲಿ ಇವರು ಅಮೆಜಾನ್​ನಿಂದ ಬರೊಬ್ಬರಿ 30 ಕೋಟಿ ದೋಚಿದ್ದಾರೆ.

ಮಂಗಳೂರಿನ ಉರ್ವಾ ಠಾಣೆಯಲ್ಲಿ ಸೆ.21ರಂದು ಪ್ರಕರಣ ದಾಖಲಿದೆ. ಅಮೆಜಾನ್ ಕಂಪನಿಯ ಡೆಲಿವರಿ ಪಾರ್ಟನ್​​ ಈ ಪ್ರಕರಣವನ್ನು ದಾಖಲಿಸಿದ್ದಾರೆ. ಖತರ್ನಾಕ್​ ಕ್ರಿಮಿನಲ್ಸ್​ ಹಿಡಿಯಲು ಬಲೆ ಬೀಸಿದ ಪೊಲೀಸರು ಕೊನೆ ಅವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment