/newsfirstlive-kannada/media/post_attachments/wp-content/uploads/2025/05/MNG-SP.jpg)
ಮರಳು ಸಾಗಾಟಕ್ಕೆಂದು ಹೋದಾಗ ಅಬ್ದುಲ್ ರಹೀಮಾನ್ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ. ಆಸ್ಪತ್ರೆಗೆ ಕರೆದೊಯ್ದಾಗ ಅಬ್ದುಲ್ ನಿಧನರಾಗಿರೋದು ಗೊತ್ತಾಗಿದೆ. ಕೃತ್ಯಕ್ಕೆ ಕಾರಣ ಹಾಗೂ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದೇವೆ ಎಂದು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಯತೀಶ್.ಎನ್ ತಿಳಿಸಿದ್ದಾರೆ.
ಬಂಟ್ವಾಳ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದ್ದು, ಶಂಕಿತರನ್ನು ಕರೆದು ವಿಚಾರಣೆಯನ್ನು ಮಾಡುತ್ತಿದ್ದೇವೆ ಅಂತ ಎಸ್ಪಿ ಯತೀಶ್.ಎನ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಂಗಳೂರಲ್ಲಿ ಮತ್ತೆ ಹರಿದ ನೆತ್ತರು.. ತಲ್ವಾರ್ನಿಂದ ಕೊಚ್ಚಿ ಅಬ್ದುಲ್ ರಹಿಮಾನ್ನ ಭೀಕರ ಹತ್ಯೆ
ಏನಂದ್ರು ಅಧಿಕಾರಿ..?
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಧ್ಯಾಹ್ನ 3 ರಿಂದ 3.30ರ ಸುಮಾರಿಗೆ ಮಧ್ಯ ವಯಸ್ಕಿನ ಯುವಕ ಹಾಗೂ ಆತನ ಸ್ನೇಹಿತ ಒಂದು ಕಡೆ ಮರಳನ್ನು ಡಂಪ್ ಮಾಡಲು ಹೋದಾಗ ಅಟ್ಯಾಕ್ ಆಗಿದೆ. ಯಾರೋ ದುಷ್ಕರ್ಮಿಗಳು ಅವರ ಮೇಲೆ ಅಟ್ಯಾಕ್ ಮಾಡಿದ್ದಾರೆ. ದಾಳಿಯಲ್ಲಿ ಅಬ್ದುಲ್ ರಹೀಮಾನ್ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ಅಬ್ದುಲ್ ರಹಿಮಾನ್ನ ಬರ್ಬರ ಹತ್ಯೆ.. ಸದ್ಯ ಹೇಗಿದೆ ಮಂಗಳೂರು ಪರಿಸ್ಥಿತಿ..?
ಆತನ ಜೊತೆಯಲ್ಲಿದ್ದ ಸ್ನೇಹಿತನಿಗೂ ಸ್ವಲ್ಪ ಏಟಾಗಿದೆ. ಘಟನೆ ವೇಳೆ ಆತ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಗಾಯಗೊಂಡಿರುವ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದೇವೆ. ಬಂಟ್ವಾಳ ಡಿಎಸ್ಪಿ ನೇತೃತ್ವದಲ್ಲಿ ತನಿಖೆಗೆ ಎರಡು ತಂಡ ರಚನೆ ಮಾಡಿದ್ದೇವೆ. ಆರೋಪಿಗಳ ಗುರುತು ಪತ್ತೆ ಹಾಗೂ ಅರೆಸ್ಟ್ ಮಾಡೋದಕ್ಕೆ ತಂಡ ರಚನೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: RCB ಗೆಲುವಿನಲ್ಲಿ ಕಿಂಗ್ ಕೊಹ್ಲಿಯ ಮುತ್ತಿನಂತ ವರ್ಲ್ಡ್ರೆಕಾರ್ಡ್ಸ್.. ಏನೇನು ದಾಖಲೆ ಬರೆದರು ವಿರಾಟ್?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ