ಭಾರೀ ಮಳೆ.. ಕರ್ನಾಟಕದ ಈ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ..

author-image
Ganesh
Updated On
ಇಡೀ ದಿನ ಮಳೆ ಸಾಧ್ಯತೆ; ನಾಳೆ ಬೆಂಗಳೂರು ನಗರದಾದ್ಯಂತ ಶಾಲೆಗಳಿಗೆ ರಜೆ ಘೋಷಣೆ
Advertisment
  • ಚಂಡಮಾರುತದ ಎಚ್ಚರಿಕೆ ಬೆನ್ನಲ್ಲೇ ಕಡಲು ಅಕ್ಷರಶಃ ಪ್ರಕ್ಷುಬ್ಧ
  • ಸಮುದ್ರದ ರೌದ್ರಾವತಾರ ಕಂಡು ಬೆಚ್ಚಿಬಿದ್ದ ಕಡಲ ಮಕ್ಕಳು
  • ಕಳೆದ ಮೂರು ವಾರಗಳಿಂದ ಸುರಿಯುತ್ತಿರುವ ಭರ್ಜರಿ ಮಳೆ

ಕರಾವಳಿ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆ ಘೊಷಣೆ ಮಾಡಲಾಗಿದೆ.

ಅಂಗನವಾಡಿಯಿಂದ ಫ್ರೌಡಶಾಲೆಯವರೆಗೆ ರಜೆ ಘೋಷಣೆ ಮಾಡಲಾಗಿದೆ. ನಿನ್ನೆ ರಾತ್ರಿ ಇಡೀ ಭಾರೀ ಮಳೆ ಸುರಿದಿದೆ. ಮಂಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾರೀ ಮಳೆ ಆಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ.

ಇದನ್ನೂ ಓದಿ: NHM ವೈದ್ಯರಿಗೆ, ನರ್ಸ್​ಗಳಿಗೆ ಭರ್ಜರಿ ಗುಡ್​ನ್ಯೂಸ್​.. ಕೊರೊನಾ ಉಲ್ಬಣ ಬೆನ್ನಲ್ಲೇ ವೇತನ ಹೆಚ್ಚಳ..!

ಇನ್ನು, ಉಡುಪಿ ಜಿಲ್ಲೆಯಲ್ಲಿ ಕಡಲು ಅಬ್ಬರಿಸಿ ಬೊಬ್ಬಿಡುತ್ತಿದೆ. ಅರಬ್ಬಿ ಸಮುದ್ರ ಅಕ್ಷರಶಃ ಪ್ರಕ್ಷುಬದ್ಧವಾಗಿದ್ದು ಮತ್ತೊಂದು ದೊಡ್ಡ ಚಂಡಮಾರುತದ ಎಚ್ಚರಿಕೆಯನ್ನ ಹವಾಮಾನ ಇಲಾಖೆ‌ ನೀಡಿದೆ. ಈ ನಡುವೆ ಪ್ರವಾಸಿಗರ ದಂಡು ಕಡಲತಡಿಗೆ ಹರಿದುಬರುತ್ತಿದ್ದು ಕಡಲಿಗೆ ಇಳಿಯದಂತೆ ಒಂದು ಹಗ್ಗವನ್ನ ಕಟ್ಟಿ ಬೆರಳೆಣಿಕೆಯ ಲೈಫ್​ ಗಾರ್ಡ್​ಗಳನ್ನು ನಿಯೋಜ‌ನೆ ಮಾಡಲಾಗಿದೆ.

ಚಂಡಮಾರುತದ ಎಚ್ಚರಿಕೆ ಇರುವುದರಿಂದ ಜಿಲ್ಲಾಡಳಿತ ಇನ್ನಷ್ಟು ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಅನ್ನೋದು ಸ್ಥಳೀಯರು ಹಾಗೂ ಮೀನುಗಾರರ ಒತ್ತಾಯ ಮಾಡಿದ್ದಾರೆ. ಅಲ್ಲದೇ ಉಡುಪಿ ಜಿಲ್ಲಾಡಳಿತ ಇಡೀ ಜಿಲ್ಲೆಗೆ ರೆಡ್​ ಅಲರ್ಟ್ ಘೋಷಣೆ ಮಾಡಿದೆ.

ಇದನ್ನೂ ಓದಿ: ಫೈನಲ್​ಗೆ ಎಂಟ್ರಿ ಕೊಟ್ಟ ಆರ್​ಸಿಬಿ.. ಕರ್ನಾಟಕದಲ್ಲಿ ಸಂಭ್ರಮ ಹೇಗಿತ್ತು..? Photos

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment