ಮಕ್ಕಳಲ್ಲಿ ಕಾಡುವ ವೈರಲ್ ಫೀವರ್ಗಳ ಬಗ್ಗೆ ನ್ಯೂಸ್ಫಸ್ಟ್ನಲ್ಲಿ ವಿಶೇಷ ಸಂದರ್ಶನ
ಡೆಂಗ್ಯೂ ಪ್ರಕರಣಗಳ ಬಗ್ಗೆ ಡಾಕ್ಟರ್ ಭಾಸ್ಕರ್ ಶೆಣೈಯವರನ್ನು ಏನು ಹೇಳಿದ್ದಾರೆ ಕೇಳಿ
ಮಕ್ಕಳಿಗೆ ಡೆಂಗ್ಯೂ ಬಂದ್ರೆ ಈ ಔಷಧಿಯನ್ನು ಕೊಡಲೇ ಬಾರದು! ಯಾಕೆ ಗೊತ್ತಾ?
ಮಳೆಗಾಲದ ಸಮಯದಲ್ಲಿ ಮಕ್ಕಳಲ್ಲಿ ಕಾಣಿಸಿಕೊಳ್ಳುವ ವೈರಲ್ ಫೀವರ್ಗಳು ಮತ್ತು ಡೆಂಗ್ಯೂ ಪ್ರಕರಣಗಳ ಬಗ್ಗೆ ಹಿರಿಯ ಪತ್ರಕರ್ತೆಯಾದ ಅರ್ಚನಾ ರವಿಕುಮಾರ್ರವರು ಮಣಿಪಾಲ್ ಆಸ್ಪತ್ರೆಯ ಮಕ್ಕಳಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾಕ್ಟರ್ ಭಾಸ್ಕರ್ ಶೆಣೈಯವರನ್ನು ಸಂದರ್ಶನ ಮಾಡಿದ್ದಾರೆ.
ವಿಶೇಷ ಸಂದರ್ಶನದಲ್ಲಿ ಪೋಷಕರಿಗೆ ಡೆಂಗ್ಯೂ ತಡೆಗಟ್ಟಲು ಮುನ್ನಚ್ಚರಿಕೆ ಕ್ರಮವನ್ನು ಮತ್ತು ವೈರಲ್ ಫೀವರ್, ಡೆಂಗ್ಯೂ ಪ್ರಕರಣದ ಗೊಂದಲದ ಕುರಿತಾಗಿ ವಿಶೇಷ ಮಾಹಿತಿಯನ್ನು ಡಾ. ಭಾಸ್ಕರ್ ಶೆಣೈಯವರು ನೀಡಿದ್ದಾರೆ.
ದಿನಕ್ಕೆ ಎಷ್ಟು ಕೇಸ್ ಬರುತ್ತದೆ?
ಸಾಮಾನ್ಯವಾಗಿ ಈ ಸೀಸನ್ ಶುರುವಾದ ಮೇಲೆ ಪ್ರತಿ ದಿನ 25 ರಿಂದ 30 ಡೆಂಗ್ಯೂ ಕೇಸ್ ನೋಡ್ತ್ತೇನೆ. ಕೆಲವೊಮ್ಮೆ ಜಾಸ್ತಿ ಇರುತ್ತೆ, ಕೆಲವೊಮ್ಮೆ ಕಡಿಮೆ ಇರುತ್ತೆ. ಇದರಲ್ಲಿ 4 ರಿಂದ 5 ಪ್ರತಿಶತ ಕೇಸ್ ಅಡ್ಮಿಟ್ ಆಗುತ್ತಾರೆ.
ಇದನ್ನೂ ಓದಿ: ಕೇರಳ ಭೂಕುಸಿತದಲ್ಲಿ ಕರ್ನಾಟಕದ ನಾಲ್ವರ ದುರಂತ ಸಾವು.. ಇನ್ನೂ ಎಷ್ಟು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ..?
ಡೆಂಗ್ಯೂ ಲಕ್ಷಣಗಳು?
ಮೊದಲಿನ 4-5 ದಿನ ಜ್ವರ ಬರುತ್ತೆ. ಜ್ವರ ಬರುವ ಮೊದಲು ಮಕ್ಕಳು ಚೆನ್ನಾಗಿ ಇರುತ್ತಾರೆ. ಏಕಾಏಕಿ ಜ್ವರ ಬರುತ್ತದೆ. ಇದು ನಾಮರ್ಲ್ ಜ್ವರ ಅಲ್ಲ. ಇದನ್ನು ಬ್ರೇಕಿಂಗ್ ಬೋನ್ ಫೀವರ್ ಎನ್ನುತ್ತಾರೆ. ಬೆನ್ನು ಮೂಳೆ ಕೂಡ ಜ್ವರದಲ್ಲಿ ನೋವಾಗುತ್ತೆ. ಜ್ವರ 103, 104 ಹೋಗುತ್ತೆ, ಚಳಿಯಿಂದ ನಡುಗುತ್ತಾರೆ, ತಲೆನೋವು ಬರುತ್ತೆ, ಮೈ-ಕೈ ನೋವು, ಕೆಲವು ಮಕ್ಕಳಿಗೆ ಕಣ್ಣು ಕೆಂಪಾಗಬಹುದು. ಕಣ್ಣಿನ ಹಿಂಭಾಗ ನೋವಾಗುತ್ತದೆ (ರೆಟ್ರೋ ಆರ್ಬಿಟಲ್ ಪೇನ್). ಇದು ಡೆಂಗ್ಯೂ ಪ್ರಕರಣದಲ್ಲಿ ಜಾಸ್ತಿ ಇರುತ್ತದೆ.
ಇದನ್ನೂ ಓದಿ: ಸಾವಿನ ಸಂಖ್ಯೆ 143ಕ್ಕೆ ಏರಿಕೆ; ಕೇರಳ ಮಹಾ ದುರಂತದ ನೋವು ಮತ್ತಷ್ಟು ಕಾಡುವ ಆತಂಕ..
ಡೆಂಗ್ಯೂ ಜ್ವರ ಬಂದ್ರೆ 5 ದಿನ ಇರುತ್ತದೆ. ಏನೇ ಮೆಡಿಸಿನ್ ಕೊಟ್ರು ಅಷ್ಟು ಬೇಗ ಬಗ್ಗಲ್ಲ. ಇದು ಡೆಂಗ್ಯೂ ಮೊದಲನೇ ಲಕ್ಷಣ. ಕೆಲವು ಮಕ್ಕಳಿಗೆ ವಾಂತಿಯಾಗಬಹುದು, ಸುಸ್ತು ಆಗಬಹುದು, ಜ್ವರ ಹೋದ ಮೇಲೆ ಚೇತರಿಸಿಕೊಳ್ಳುತ್ತಾರೆ.
ಜ್ವರ ಬಂದಾಗ ಎಷ್ಟು ದಿನದ ಒಳಗಾಗಿ ಡಾಕ್ಟರನ್ನು ಭೇಟಿ ಮಾಡಬೇಕು?
ಸಾಮಾನ್ಯವಾಗಿ ಮಕ್ಕಳು ತುಂಬಾ ಜ್ವರದಿಂದ ನಡುಗುತ್ತಿರುವಾಗ ಯಾವ ಮಕ್ಕಳಿಗೂ ಸುಮ್ಮನೆ ಇರೋಕೆ ಆಗಲ್ಲ. ಒಂದನೇ ದಿನವೇ ಡಾಕ್ಟರ್ ಹತ್ರ ಬರುತ್ತಾರೆ. ಮೊದಲ 3-4 ದಿನ ಏನು ಮಾಡೋಕೆ ಆಗಲ್ಲ. ಜ್ವರಕ್ಕೆ ಔಷಧಿಯನ್ನು ಮಾತ್ರ ಕೊಡಬೇಕು. ಅದರಲ್ಲೂ ಪ್ಯಾರಾಸಿಟಮಾಲ್ ಮಾತ್ರೆ ಕೊಡಬೇಕು. ಉದಾಹರಣೆಗೆ ಮೆಫೆನೆಮಿಕ್ ಆ್ಯಸಿಡ್ ಅಂತ ಇರುತ್ತೆ, ಇಬುಪ್ರೊಪೇನ್ ಅಂತ ಇರುತ್ತೆ ಇಂಥಾ ಔಷಧಿ ಕೊಡಬಾರದು. ಜ್ವರ ಬಂದಾಗ ಕೂಡಲೇ ಮಕ್ಕಳನ್ನು ವೈದರ ಬಳಿ ಕರೆದುಕೊಂಡು ಬರಬೇಕಾಗಿಲ್ಲ. 1-2 ದಿನಕಾದರೂ ತೊಂದರೆ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ