newsfirstkannada.com

ಮಣಿಪುರ ಹಿಂಸಾಚಾರಕ್ಕೆ ಕಾರಣವಾಗಿದ್ದ ಸರ್ಕಾರದ ಆದೇಶಕ್ಕೆ ಕೆಲವು ಮಾರ್ಪಾಡು ಮಾಡಿದ ಹೈಕೋರ್ಟ್..!

Share :

Published February 23, 2024 at 7:41am

  2023ರಲ್ಲಿ ಮಣಿಪುರದಲ್ಲಿ ಭಾರೀ ಹಿಂಸಾಚಾರ ನಡೆದಿತ್ತು

  ಮಹತ್ವದ ನಿರ್ಧಾರ ಕೈಗೊಂಡ ಮಣಿಪುರ ಹೈಕೋರ್ಟ್​

  ವಿವಾದಿತ ಆದೇಶಕ್ಕೆ ತಿದ್ದುಪಡಿ ಮಾಡಿದ ಕೋರ್ಟ್​

ಮೇಟಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನದ ಕುರಿತು ಶಿಫಾರಸು ಕಳುಹಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿರುವ ವಿವಾದಾತ್ಮಕ 2023ರ ಆದೇಶವನ್ನು ಮಣಿಪುರ ಹೈಕೋರ್ಟ್ (Manipur High Court) ತಿದ್ದುಪಡಿ ಮಾಡಿದೆ.

ಹಿಂದೆ ಇದೇ ಆದೇಶವು ಮಣಿಪುರದಲ್ಲಿ ಭಾರೀ ಜನಾಂಗೀಯ ಹಿಂಸಾಚಾರಕ್ಕೆ ಕಾರಣವಾಗಿದ್ದು, ಬುಡಕಟ್ಟು ಕುಕಿ ಸಮುದಾಯವು ನ್ಯಾಯಾಲಯದ ನಿರ್ದೇಶನವನ್ನು ವಿರೋಧಿಸಿತ್ತು. ಈ ಹಿನ್ನಲೆ ಮಣಿಪುರದಲ್ಲಿ ಕುಕಿ ಮತ್ತೂ ಮೇಥಿ ಸಮುದಾಯದ ನಡುವೆ ಭಾರೀ ಸಂಘರ್ಷ ಏರ್ಪಟ್ಟಿತ್ತು. ಈ ಬಳಿಕ ಎಚ್ಚೆತ್ತ ಮಣಿಪುರ ಹೈಕೋರ್ಟ್, ಮಾರ್ಚ್​ 27, 2023ರ ಆದೇಶದ ಕೆಲ ಪ್ಯಾರಾಗ್ರಾಪ್​ಗಳನ್ನು ತೆಗೆದುಹಾಕಿದೆ.

ಏನಾಗಿತ್ತು ಮಣಿಪುರದಲ್ಲಿ..?
ಮೇಟಿಗಳಿಗೆ ಪರಿಶಿಷ್ಟ ಪಂಗಡ (ST) ಸ್ಥಾನಮಾನ ನೀಡಿರೋದನ್ನು ವಿರೋಧಿಸಿ ಆದಿವಾಸಿಗಳು ನಡೆಸುತ್ತಿರುವ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿತ್ತು. ಮಣಿಪುರದಲ್ಲಿ ಮೇಟಿಗಳು ಬಹುಸಂಖ್ಯಾತರಾಗಿದ್ದಾರೆ. ಈ ಸಮುದಾಯ ತಮಗೆ ST ಸ್ಥಾನಮಾನ ನೀಡಬೇಕು ಎಂದು ದಶಕಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದೆ. ಮಣಿಪುರದ ಕಣಿವೆಗಳಲ್ಲಿ ವಾಸಿಸುತ್ತಿರುವ ಮೇಟಿಗಳ ಸಂಖ್ಯೆ ರಾಜ್ಯದಲ್ಲಿರುವ ಜನಸಂಖ್ಯೆಯಲ್ಲಿ ಶೇಕಡಾ 53 ರಷ್ಟು ಇದೆ. ಅಲ್ಲಿರುವ ಪ್ರಸ್ತುತ ಕಾನೂನು ಪ್ರಕಾರ, ಈ ಮೇಟಿ ಜನಾಂಗ ಬುಡಕಟ್ಟು ಸಮುದಾಯವಲ್ಲದ ಕಾರಣ, ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವಂತಿಲ್ಲ. ಹೀಗಿರುವಾಗ ತಮಗೆ ಎಸ್​ಟಿ ಸ್ಥಾನಮಾನ ನೀಡುವಂತೆ ಈ ಸಮುದಾಯ ಆಗ್ರಹಿಸಿಕೊಂಡು ಬಂದಿದೆ. ಒಂದು ವೇಳೆ ಎಸ್​​​ಟಿ ಸ್ಥಾನಮಾನ ನೀಡಿದರೆ, ಪರಿಶಿಷ್ಟ ಪಂಗಡಕ್ಕೆ ಸಿಗುವ ಎಲ್ಲಾ ಸೌಲಭ್ಯಗಳು ಸಿಗಲಿವೆ. ಅದಕ್ಕೆ ಮೇಟಿಗಳಿಗೆ ST ಸ್ಥಾನಮಾನ ನೀಡುವುದನ್ನ ಆದಿವಾಸಿ ಬುಡಕಟ್ಟು ಸಮುದಾಯ ವಿರೋಧಿಸುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಣಿಪುರ ಹಿಂಸಾಚಾರಕ್ಕೆ ಕಾರಣವಾಗಿದ್ದ ಸರ್ಕಾರದ ಆದೇಶಕ್ಕೆ ಕೆಲವು ಮಾರ್ಪಾಡು ಮಾಡಿದ ಹೈಕೋರ್ಟ್..!

https://newsfirstlive.com/wp-content/uploads/2023/06/MANIPURA.jpg

Load More