newsfirstkannada.com

ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ರಣ್​ವೀರ್ ಸಿಂಗ್, ಕೃತಿ ಸನೋನ್.. ದೀಪಿಕಾ ಬಿಟ್ಟು ಮತ್ತೊಂದು ಮದುವೆನಾ?

Share :

Published April 15, 2024 at 9:39am

  ವಾರಣಾಸಿಯ ಕಾಶಿ ವಿಶ್ವನಾಥನ ದರ್ಶನ ಪಡೆದು ಪ್ರಾರ್ಥನೆ

  ಫ್ಯಾಷನ್ ಶೋನಲ್ಲಿ ಭಾಗವಹಿಸಿರುವ ಬಾಲಿವುಡ್​ ನಟ, ನಟಿ​

  2 ದಿನದ ಕಾರ್ಯಕ್ರಮದಲ್ಲಿ ರಣ್​ವೀರ್ ಸಿಂಗ್, ಕೃತಿ ಸನೋನ್

ಬಾಲಿವುಡ್​ನ ಖ್ಯಾತ ನಟ ರಣ್​ವೀರ್ ಸಿಂಗ್ ಹಾಗೂ ನಟಿ ಕೃತಿ ಸನೋನ್ ಅವರು ವಾರಣಾಸಿಯ ಕಾಶಿವಿಶ್ವಾನಥನ ಸನ್ನಿಧಿಯಲ್ಲಿ ಕಾಣಿಕೊಂಡಿದ್ದು ಮತ್ತೊಂದು ಮದುವೆ ಆದ್ರಾ ಎಂದು ರಣ್​ವೀರ್ ಸಿಂಗ್ ಫ್ಯಾನ್ಸ್​ ಅಚ್ಚರಿ ಪಡುತ್ತಿದ್ದಾರೆ. ಆದರೆ ಇದು ಮತ್ತೊಂದು ಮದುವೆಯಲ್ಲ. ಬದಲಿಗೆ ಭಾರತೀಯ ಸಂಸ್ಕೃತಿಯ ಉಡುಗೆಗಳನ್ನು ತೊಟ್ಟು ಫ್ಯಾಷನ್ ಶೋನಲ್ಲಿ ಇಬ್ಬರು ಭಾಗವಹಿಸಿದ್ದಾರೆ.

ಇದನ್ನೂ ಓದಿ: 2013ರಲ್ಲಿ ಪಾಕ್​ ಜೈಲಿನಲ್ಲಿ ಭಾರತದ ರೈತನ ಕೊಲೆ; ಹತ್ಯೆಗೈದಿದ್ದ ಭೂಗತ ಪಾತಕಿ ಇಂದು ಅದೇ ಜೈಲಿನಲ್ಲಿ ಫಿನಿಶ್..!

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಕರಕುಶಲ ಮತ್ತು ಕೈಮಗ್ಗ ಉತ್ತೇಜಿಸಲು ಇಂಡಿಯನ್ ಮೈನಾರಿಟೀಸ್ ಫೌಂಡೇಶನ್ ಆಯೋಜಿಸಿದ್ದ 2 ದಿನದ ಕಾರ್ಯಕ್ರಮದ ಭಾಗವಾಗಿ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರು ನಮೋ ಘಾಟ್‌ನಲ್ಲಿ ಫ್ಯಾಷನ್ ಶೋ ಆಯೋಜಿಸಿದ್ದರು. ಈ ಶೋನಲ್ಲಿ ಭಾಗವಹಿಸಿದ ಬಾಲಿವುಡ್​ನ​ ಬ್ಯೂಟಿ ಕೃತಿ ಸನೋನ್ ಹಾಗೂ ನಟ ರಣವೀರ್ ಸಿಂಗ್ ಭಾರತೀಯ ಉಡುಗೆಯನ್ನ ತೊಟ್ಟು ಫ್ಯಾಷನ್ ಶೋನಲ್ಲಿ ಭಾಗವಹಿಸಿ ಗಮನ ಸೆಳೆದರು. ಭಾರತೀಯ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಆಯೋಜಿಸಿದ್ದ ಭಾರತೀಯ ಸಂಸ್ಕೃತಿ ಮತ್ತು ಕುಶಲಕರ್ಮಿಗಳ ವಸ್ತ್ರ ಬನಾರಸ್ ಸೀರೆ ಎಂಬ ವಿಷಯದ ಮೇಲೆ ಬಾಲಿವುಡ್​ ಸ್ಟಾರ್ಸ್​ ಫ್ಯಾಶನ್ ಶೋ ನಲ್ಲಿ ಭಾಗವಹಿಸಿದರು.

ಇದನ್ನೂ ಓದಿ: ನಾವು ದಾಳಿ ಮಾಡಿದ್ರೆ ಸುಮ್ಮನಿರಬೇಕು, ಪ್ರತೀಕಾರಕ್ಕೆ ಬರಬಾರ್ದು -ಇಸ್ರೇಲ್​ಗೆ ವಾರ್ನ್ ಮಾಡಿದ ಇರಾನ್​

ಫ್ಯಾಷನ್ ಶೋಗೂ ಮುನ್ನ ನಟಿ ಕೃತಿ ಸನೋನ್ ಹಾಗೂ ರಣವೀರ್ ಸಿಂಗ್, ಮನೀಶ್ ಮಲ್ಹೋತ್ರಾ ಜೊತೆಯಲ್ಲಿ ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡು ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಸಾಕಷ್ಟು ಅಭಿಮಾನಿಗಳು ಅವರನ್ನು ನೋಡಲು ಆಗಮಿಸಿ ಫೋಟೋಗಳನ್ನು ಕ್ಲಿಕ್ ಮಾಡಿಕೊಂಡಿದ್ದಾರೆ. ಅಲ್ಲದೇ ಅಭಿಮಾನಿಗಳ ಕಡೆಗೆ ಕೈ ಬೀಸಿ, ಕೆಲವರಿಗೆ ಥ್ಯಾಂಕ್ಸ್​ ಕೊಟ್ಟು ರಣ್​ವೀರ್ ಖುಷಿ ವ್ಯಕ್ತಪಡಿಸಿದರು. ಈ ಸಂಬಂಧ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಮಲ್ಹೋತ್ರಾ ಪೋಸ್ಟ್​ ಅನ್ನು ಶೇರ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​

ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ರಣ್​ವೀರ್ ಸಿಂಗ್, ಕೃತಿ ಸನೋನ್.. ದೀಪಿಕಾ ಬಿಟ್ಟು ಮತ್ತೊಂದು ಮದುವೆನಾ?

https://newsfirstlive.com/wp-content/uploads/2024/04/Ranveer_Singh-1.jpg

Load More