newsfirstkannada.com

ಅನುಭವಿಗಳಿದ್ರೂ ಮತ್ತೆ ಮತ್ತೆ ವೈಫಲ್ಯ.. ಅಡಕತ್ತರಿಯಲ್ಲಿ ಸಿಲುಕಿದ ಮಯಾಂಕ್​, ಮನೀಷ್​ ಭವಿಷ್ಯ..!

Share :

Published February 29, 2024 at 12:41pm

Update February 29, 2024 at 8:02pm

    8 ವರ್ಷಗಳಿಂದ ಕರ್ನಾಟಕಕ್ಕೆ ಟ್ರೋಫಿ ಬರ

    ಕರ್ನಾಟಕಕ್ಕೆ ಕಾಡ್ತಿದ್ಯಾ ನಾಕೌಟ್​​ ಫೋಬಿಯಾ..?

    ಸೆಲೆಕ್ಷನ್​ ಕಮಿಟಿಯ​​ ಮುಂದಿನ ನಡೆ ಏನು..?

ಈ ಸೀಸನ್​ ರಣಜಿ ಟೂರ್ನಿಯಲ್ಲೂ ಕನ್ನಡಿಗರ ನಿರೀಕ್ಷೆ ಹುಸಿಯಾಗಿದೆ. ಕ್ವಾರ್ಟರ್​​ ಫೈನಲ್​ನಲ್ಲಿ ಕರ್ನಾಟಕದ ಗೆಲುವಿಗೆ ಅನುಭವಿಗಳೇ ಅಡ್ಡಗಾಲು ಹಾಕಿದ್ರು. ಇದೀಗ ಆ ಸೋಲು ಅನುಭವಿಗಳಾದ ಮಯಾಂಕ್​ ಅಗರ್​ವಾಲ್​, ಮನೀಷ್​ ಪಾಂಡೆ ಭವಿಷ್ಯಕ್ಕೆ ಕುತ್ತು ತಂದಿದೆ.
ಕರ್ನಾಟಕದ ಅಸಂಖ್ಯ ಅಭಿಮಾನಿಗಳು ಕನಸು ಮತ್ತೆ ನುಚ್ಚು ನೂರಾಗಿದೆ. ಈ ಸೀಸನ್​ನಲ್ಲಾದ್ರೂ ರಣಜಿ ಟ್ರೋಫಿ ನಮ್ದಾಗುತ್ತೆ ಅನ್ನೋ ನಿರೀಕ್ಷೆ ಹುಸಿಯಾಗಿದೆ. ಗೆಲ್ಲೋ ಅವಕಾಶ ಕೊನೆಯ ದಿನದವರೆಗೂ ಇತ್ತು. ಕಳಪೆ ಆಟ ಸೋಲಿಗೆ ಗುರಿಮಾಡ್ತು.

ಮಹತ್ವದ ಪಂದ್ಯದಲ್ಲಿ ಮುಗ್ಗರಿಸಿದ ಸೀನಿಯರ್ಸ್​..!
ರಣಜಿ ಕ್ವಾರ್ಟರ್​ ಫೈನಲ್​​ನಲ್ಲಿ ಕರ್ನಾಟಕ ತಂಡಕ್ಕೆ ಕೊನೆ ದಿನವೂ ಕೂಡ ಗೆಲ್ಲೋ ಒಳ್ಳೇ ಚಾನ್ಸ್​ ಇತ್ತು. ಆದ್ರೆ, ಸೋ ಕಾಲ್ಡ್​​​ ಸೀನಿಯರ್ಸ್​ ಬೇಜವಾಬ್ದಾರಿ ಬ್ಯಾಟಿಂಗ್​ ತಂಡದ ಸೋಲಿಗೆ ಕಾರಣವಾಯ್ತು.

ಫಸ್ಟ್​ ಇನ್ನಿಂಗ್ಸ್​ನಲ್ಲಿ ಹಿನ್ನಡೆಯಾದ್ರೂ ಗೆಲುವಿಗೆ ಇತ್ತು ಚಾನ್ಸ್​
ಫಸ್ಟ್​ ಇನ್ನಿಂಗ್ಸ್​ನಲ್ಲಿ ಯಡವಟ್ಟು ಮಾಡಿಕೊಂಡು ಅಲ್ಪ ಮೊತ್ತಕ್ಕೆ ಔಟಾಗಿದ್ದ ಕರ್ನಾಟಕ ತಂಡಕ್ಕೆ ಗೋಲ್ಡನ್​ ಚಾನ್ಸ್​ ಸಿಕಿತ್ತು. 371 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಕರ್ನಾಟಕ ಗುಡ್​ ಸ್ಟಾರ್ಟ್​ ಪಡೆದುಕೊಂಡಿತ್ತು. ಕೊನೆಯ ದಿನದಾಟದಲ್ಲಿ ಗೆಲ್ಲೋ ಭರವಸೆಯೂ ಹುಟ್ಟಿತ್ತು. ಆಗಲೇ ನೋಡಿ ಸೆಟಲ್​ ಆಗಿದ್ದ ಕ್ಯಾಪ್ಟನ್​ ಮಯಾಂಕ್​ ಯಡವಟ್ಟು ಮಾಡಿದ್ದು. ಕೆಟ್ಟ ಹೊಡೆತಕ್ಕೆ ಕೈ ಹಾಕಿ ಔಟಾದ್ರು. ಜವಾಬ್ದಾರಿ ತೆಗೆದುಕೊಳ್ಳಬೇಕಾಗಿದ್ದ ಮನೀಷ್​ ಪಾಂಡೆ 1 ರನ್​ಗಳಿಸಿ ಪೆವಿಲಿಯನ್​ ಸೇರಿದ್ರು.

ವಿಕೆಟ್​ ಗಿಫ್ಟ್​ ಕೊಟ್ಟ ಮಯಾಂಕ್​, ಮನೀಷ್​
ಈ ಬಾರಿಯ ರಣಜಿ ಟೂರ್ನಿಯಲ್ಲಿ ಕ್ಯಾಪ್ಟನ್​ ಮಯಾಂಕ್​ ಅಗರ್​ವಾರ್​, ಮನೀಷ್​ ಪಾಂಡೆ ಇಬ್ಬರೂ​ ಒಕೆ ಒಕೆ ಪರ್ಫಾಮೆನ್ಸ್​ ನೀಡಿದ್ದಾರೆ. ಎಚ್ಚರಿಕೆಯಿಂದ ಆಡಬೇಕಾದ ಕ್ವಾರ್ಟರ್​​ ಫೈನಲ್​​​​ ಪಂದ್ಯದಲ್ಲೇ ಎಡವಿದ್ರು. ಅನುಭವಿಗಳಾಗಿ ಮುಂದೆ ನಿಂತು ತಂಡವನ್ನ ಲೀಡ್​ ಮಾಡಬೇಕಾದವರು, ಔಟಾಗಿ ಪೆವಿಲಿಯನ್​ ಸೇರಿದ್ರು. ನಾಕೌಟ್​ ಸ್ಟೇಜ್​​ನಲ್ಲಿ ಇವರ ಕಳಪೆ ಆಟ ಕರ್ನಾಟಕದ ಸೋಲಿಗೆ ಪ್ರಮುಖ ಕಾರಣ ಆಯ್ತು.

ಅನುಭವಿಗಳು ಇದ್ರೂ ಮತ್ತೆ ಮತ್ತೆ ವೈಫಲ್ಯ..!
ಈ ಬಾರಿಯ ರಣಜಿ ಟೂರ್ನಿಯಲ್ಲಾಡಿದ ಕರ್ನಾಟಕ ತಂಡದಲ್ಲಿ ಒಳ್ಳೆ ಪ್ಲೇಯರ್ಸ್​ ಇಲ್ಲ ಅಂತಿಲ್ಲ. ಟ್ಯಾಲೆಂಟೆಡ್​ ಯುವಕರು ಮತ್ತು ಅನುಭವಿ ಆಟಗಾರರು ತಂಡದಲ್ಲಿದ್ರು. ಲೀಗ್​ ಹಂತದಲ್ಲಿ ಒಂದು ಪಂದ್ಯ ಸೋತು. 3ರಲ್ಲಿ ಡ್ರಾ ಸಾಧಿಸಿ, 3 ಪಂದ್ಯ ಗೆದ್ದು ಕ್ವಾರ್ಟರ್​​ಫೈನಲ್​ವರೆಗೂ ಬಂತು. ಆದ್ರೆ, ಕ್ವಾರ್ಟರ್​ ಫೈನಲ್​ನಲ್ಲಿ ವಿದರ್ಭ ವಿರುದ್ಧ ಇವ್ರ ಆಟ ಎಲ್ಲರ ತಲೆ ತಗ್ಗಿಸುವಂತೆ ಮಾಡಿದೆ.

ಕೊನೆಯ ರಣಜಿ ಟ್ರೋಫಿ ಗೆದ್ದಿದ್ದು 7 ಸೀಸನ್​ಗಳ ಹಿಂದೆ..!
ಹೇಳಿಕೊಳ್ಳೋಕೆ ಕರ್ನಾಟಕ ರಣಜಿ ಟೂರ್ನಿಯ ಮೋಸ್ಟ್​ ಸಕ್ಸಸ್​ಫುಲ್​ ತಂಡ. ಮುಂಬೈ ಬಿಟ್ರೆ ಕರ್ನಾಟಕವೇ ಹೆಚ್ಚು ಟ್ರೋಫಿ ಗೆದ್ದಿರೋದು. ಆದ್ರೆ, ಕಳೆದ 7 ಸೀಸನ್​ಗಳಿಂದ ಕರ್ನಾಟಕದ ಟ್ರೋಫಿ ಗೆಲುವಿನ ಕಡೆ ಮುಖವೂ ಹಾಕಿಲ್ಲ. 2015ರಲ್ಲಿ ವಿನಯ್​ ಕುಮಾರ್​ ನಾಯಕತ್ವದಲ್ಲಿ ಟ್ರೋಫಿ ಗೆದ್ದಿದ್ದೇ ಕೊನೆ.! ವಿನಯ್​ ಕುಮಾರ್​ ಕೆಳಗಿಳಿದ ಬಳಿಕ ಕರ್ನಾಟಕ ತಂಡ ಟ್ರೋಫಿ ಲೆಸ್​ ಆಗಿದೆ. ಮೊದಲು ಸೆಮಿಫೈನಲ್​ ಫೋಬಿಯಾ ಇತ್ತು. ಈಗ ಕ್ವಾರ್ಟರ್​ ಫೈನಲ್​ ಫೋಬಿಯಾ ಶುರುವಾಗಿದೆ.

ಕರ್ನಾಟಕಕ್ಕೆ ನಾಕೌಟ್​​ ಫೋಬಿಯಾ..?
2016-17ನೇ ಸೀಸನ್​ನಲ್ಲಿ ತಮಿಳುನಾಡು ಎದುರು ಕ್ವಾರ್ಟರ್​​ ಫೈನಲ್​ನಲ್ಲಿ ಸೋಲುಂಡ ಕರ್ನಾಟಕ, 2017-18ರಲ್ಲಿ ವಿದರ್ಭ ಎದುರು ಸೆಮಿಫೈನಲ್​ನಲ್ಲಿ ಮುಗ್ಗರಿಸಿತು. 2019-20ರಲ್ಲಿ ಬೆಂಗಾಲ್​​ ಎದುರು ಸೆಮಿಫೈನಲ್​ನಲ್ಲಿ ಸೋಲುಂಡ ಕರ್ನಾಟಕ, 2022ರಲ್ಲಿ ಉತ್ತರ ಪ್ರದೇಶ ಎದುರು ಕ್ವಾರ್ಟರ್​​ ಫೈನಲ್​ ಹಾಗೂ 2023ರಲ್ಲಿ ಸೌರಾಷ್ಟ್ರ ಎದುರು ಸೆಮಿಫೈನಲ್​ನಲ್ಲಿ ಸೋಲು ಅನುಭವಿಸಿದೆ. ಈ ವರ್ಷ ವಿದರ್ಭ ಎದುರು ಕ್ವಾರ್ಟರ್​ ಫೈನಲ್​ನಲ್ಲಿ ಮುಗ್ಗರಿಸಿದೆ.

ಸೆಲೆಕ್ಷನ್​ ಕಮಿಟಿಯ​​ ಮುಂದಿನ ನಡೆ ಏನು..?
ಈ ಬಾರಿಯ ರಣಜಿ ಟೂರ್ನಿಗೆ ತಂಡದ ಆಯ್ಕೆ ಮಾಡಿದಾಗಲೇ ಜೆ.ಅಭಿರಾಮ್​ ನೇತೃತ್ವದ ಕರ್ನಾಟಕ ಸೀನಿಯರ್​ ಸೆಲೆಕ್ಷನ್​ ಕಮಿಟಿ ಪ್ರಮುಖ ಬದಲಾವಣೆಯನ್ನ ಮಾಡಿತ್ತು. ಸೀನಿಯರ್ಸ್​ಗೆ ಕೊಕ್​ ಕೊಟ್ಟು, ಜೂನಿಯರ್ಸ್​ ಮಣೆ ಹಾಕಿತ್ತು. ಇದೀಗ ಮತ್ತೊಂದು ಸೋಲು ಕಂಡಾಗಿದೆ. ಸೀನಿಯರ್ಸ್​ಗಳ ಆಟವೂ ಇದಕ್ಕೆ ಕಾರಣವಾಗಿದೆ. ಹೀಗಾಗಿ ಈ ಹಿಂದೆ ಕೆ.ಗೌತಮ್​, ಶ್ರೇಯಸ್​ ಗೋಪಾಲ್​, ಕರುಣ್​ ನಾಯರ್​ಗೆ ಎದುರಾದ ಪರಿಸ್ಥಿತಿ ಮಯಾಂಕ್​ ಅಗರ್​ವಾಲ್​, ಮನೀಷ್​ ಪಾಂಡೆಗೂ ಎದುರಾಗುತ್ತಾ ಅನ್ನೋ ಪ್ರಶ್ನೆ ಹುಟ್ಟಿದೆ. ಸೆಲೆಕ್ಟರ್ಸ್​ ಹಾರ್ಷ್​​​ ಡಿಸಿಶನ್​​ ತೆಗೆದುಕೊಳ್ತಾರಾ ಅಥವಾ ಇವರನ್ನೆ ಮುಂದುವರೆಸ್ತಾರಾ.? ಕಾದು ನೋಡಬೇಕಿದೆ.

ವಿಶೇಷ ವರದಿ: ವಸಂತ್​ ಮಳವತ್ತಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಅನುಭವಿಗಳಿದ್ರೂ ಮತ್ತೆ ಮತ್ತೆ ವೈಫಲ್ಯ.. ಅಡಕತ್ತರಿಯಲ್ಲಿ ಸಿಲುಕಿದ ಮಯಾಂಕ್​, ಮನೀಷ್​ ಭವಿಷ್ಯ..!

https://newsfirstlive.com/wp-content/uploads/2024/02/MANISH-PANDY-2.jpg

Load More