Auction; ಸಾಧಾರಣ ಮೊತ್ತ ನೀಡಿ ಕನ್ನಡಿಗನ ಖರೀದಿಸಿದ KKR.. ಮೊದಲ ಶತಕ ಸಿಡಿಸಿದ್ದ ಪಾಂಡೆ

author-image
Bheemappa
Updated On
Auction; ಸಾಧಾರಣ ಮೊತ್ತ ನೀಡಿ ಕನ್ನಡಿಗನ ಖರೀದಿಸಿದ KKR.. ಮೊದಲ ಶತಕ ಸಿಡಿಸಿದ್ದ ಪಾಂಡೆ
Advertisment
  • ಕಡಿಮೆ ಹಣದಲ್ಲೇ ಆಟಗಾರನನ್ನ ಖರೀದಿ ಮಾಡಿರುವ ಕೆಕೆಆರ್ ತಂಡ
  • ಐಪಿಎಲ್​ ಇತಿಹಾಸದಲ್ಲಿ ಮೊಟ್ಟ ಮೊದಲ ಶತಕ ಸಿಡಿಸಿದ್ದ ಪ್ಲೇಯರ್
  • ಮೆಗಾ ಆಕ್ಷನ್​ನಲ್ಲಿ ಈ ಆಟಗಾರನ ಹರಾಜಿಗೆ ಯಾರು ಮುಂದೆ ಬರಲಿಲ್ಲ

ಐಪಿಎಲ್​ ಇತಿಹಾಸದಲ್ಲೇ ಮೊದಲ ಶತಕ ಸಿಡಿಸಿದ ಭಾರತೀಯ ಆಟಗಾರ ಎಂದು ಖ್ಯಾತಿಗೆ ಪಾತ್ರರಾಗಿದ್ದ ಮನೀಶ್ ಪಾಂಡ್ಯ ಅವರು 2025ರ ಮೆಗಾ ಆಕ್ಷನ್​​ನಲ್ಲಿ ಸೇಲ್ ಆಗಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಸಾಧರಣ ಮೊತ್ತ ನೀಡಿ ಕನ್ನಡಿಗ ಮನೀಶ್ ಪಾಂಡೆರನ್ನ ಖರೀದಿ ಮಾಡಿದೆ. ಆಕ್ಷನ್​​ನಲ್ಲಿ 75 ಲಕ್ಷ ರೂಪಾಯಿಗಳಿಗೆ ತಮ್ಮ ಹೆಸರನ್ನು ಸೇರಿಸಿದ್ದರು. ಅದರಂತೆ ಅಷ್ಟೇ ಮೊತ್ತವನ್ನು ನೀಡಿದ ಕೆಕೆಆರ್ ತಮ್ಮ ತಂಡಕ್ಕೆ ಮನೀಶ್ ಪಾಂಡೆರನ್ನ ಸೇರಿಸಿಕೊಂಡಿದೆ.

ಮನೀಶ್ ಪಾಂಡ್ಯ ಹೆಸರು ಕೂಗಿದ ವೇಳೆ ಹರಾಜಿಗೆ ಯಾರು ಬರಲಿಲ್ಲ. ಈ ವೇಳೆ ಕೆಕೆಆರ್ ಮಾತ್ರ 75 ಲಕ್ಷ ರೂಪಾಯಿಗೆ ಮೊದಲಿಗೆ ಹೆಸರು ಕೂಗಿತು. ಪೈಪೋಟಿಗೆ ಯಾರು ಬಾರದ ಕಾರಣ ಮನೀಶ್ ಪಾಂಡ್ಯ ಅವರು ಕೆಕೆಆರ್​ ಪಾಲು ಆಗಿದ್ದಾರೆ. ಮನೀಶ್ ಪಾಂಡೆ ಅವರು ಈ ಮೊದಲು ಮುಂಬೈ ಇಂಡಿಯನ್ಸ್, ಬೆಂಗಳೂರು ತಂಡ, ಪುಣೆ, ಹೈದ್ರಾಬಾದ್ ಹಾಗೂ ಕೋಲ್ಕತ್ತಾ ಟೀಮ್​ನಲ್ಲಿ ಆಡಿದ್ದರು. ಆದರೆ ಈಗ ಮತ್ತೆ ಕೆಕೆಆರ್​ಗೆ ಮರಳಿದ್ದಾರೆ.

ಇದನ್ನೂ ಓದಿ: Mega Auction; ಬಲಿಷ್ಠ ಬೌಲಿಂಗ್ ಸೈನ್ಯ ಕಟ್ಟಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು

publive-image

ಮನೀಷ್ ಪಾಂಡೆ ಐಪಿಎಲ್‌ಗೆ 2008 ರಲ್ಲಿ ಮುಂಬೈ ಇಂಡಿಯನ್ಸ್‌ ಪರ ಆಡುವ ಮೂಲಕ ಪದಾರ್ಪಣೆ ಮಾಡಿದರು. ಆದರೆ 2009ರ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡರು. ಇದೇ ವರ್ಷದಲ್ಲಿ ಡೆಕ್ಕನ್ ಚಾರ್ಜಸ್​ ವಿರುದ್ಧ ಅಮೋಘವಾದ ಸೆಂಚುರಿ ಸಿಡಿಸಿದರು. ಅಜೇಯ 114 ರನ್ ಸಿಡಿಸಿದರು. ಈ ಮೂಲಕ ಐಪಿಎಲ್​ನಲ್ಲಿ ಶತಕ ದಾಖಲಿಸಿದ ಮೊದಲ ಭಾರತೀಯ ಎಂಬ ಖ್ಯಾತಿಗೆ ಮನೀಶ್ ಪಾಂಡ್ಯ ಪಾತ್ರರಾದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment