/newsfirstlive-kannada/media/post_attachments/wp-content/uploads/2024/08/Manish-pandey.jpg)
ಆರ್​ಸಿಬಿ ಫ್ರಾಂಚೈಸಿ ಲೋಕಲ್ ಪ್ಲೇಯರ್​ಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು ಅನ್ನೋದು ಕರ್ನಾಟಕದ ಬಹುತೇಕ ಕ್ರಿಕೆಟ್ ಅಭಿಮಾನಿಗಳ ಒತ್ತಾಸೆ. ಆ ಭಾಗ್ಯ ಇನ್ನೂ ಕೂಡಿ ಬಂದಿಲ್ಲ. ಫ್ರಾಂಚೈಸಿಯು ಆಗೊಮ್ಮೆ, ಈಗೊಮ್ಮೆ ಕೆಲವು ಆಟಗಾರರನ್ನು ಖರೀದಿ ಮಾಡಿ ಆಮೇಲೆ ಕೈತೊಳೆದುಕೊಂಡಿದೆ. ಕಳೆದ ಬಾರಿಯ ಐಪಿಎಲ್​ನಲ್ಲಿ ಕನ್ನಡದ ವೈಶಾಕ್ ವಿಜಯ್​​​ ಅವರಂಥ ಬಲಿಷ್ಠ ಬೌಲರ್​ಗಳಿದ್ದರೂ, ಸರಿಯಾಗಿ ಬಳಸಿಕೊಂಡಿಲ್ಲ!
ಈ ಬಾರಿಯ ಐಪಿಎಲ್ ಹರಾಜಿನ ಸಂದರ್ಭದಲ್ಲಿ ಕೆಎಲ್​ ರಾಹುಲ್, ಮನಿಷ್ ಪಾಂಡೆ, ಪ್ರಸಿದ್ಧ್ ಕೃಷ್ಣ, ಮಯಾಂಕ್ ಅವರಂಥ ಆಟಗಾರರನ್ನು ಖರೀದಿಸಿ ಚಾನ್ಸ್ ನೀಡಬೇಕು ಎಂಬ ಒತ್ತಡ ಇದೆ. ಇದೇ ವಿಚಾರಕ್ಕೆ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಮನಿಷ್ ಪಾಂಡೆ, ಆರ್​​ಸಿಬಿ ಜರ್ಸಿಯಲ್ಲಿ ಕಾಣಿಸಿಕೊಳ್ಳಲು, ತವರಿನ ಫ್ರಾಂಚೈಸಿ ಪರ ಆಡಲು ಖಂಡಿತ ಇಷ್ಟಪಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ:ಆರ್​ಸಿಬಿ ಸೇರುವ ಬಗ್ಗೆ ಸರ್ಪ್ರೈಸ್ ಹೇಳಿಕೆ ನೀಡಿದ ರಿಂಕು ಸಿಂಗ್.. KKRನಲ್ಲಿ ಏನಾಯ್ತು..!
ಹೋಂ ಫ್ರಾಂಚೈಸಿ ಪರ ಆಡೋದು ತುಂಬಾನೇ ಚೆನ್ನಾಗಿರುತ್ತದೆ. ನಾನು ಮಾತ್ರವಲ್ಲ, ಎಲ್ಲಾ ಲೋಕಲ್ ಹುಡುಗರು RCBಗಾಗಿ ಆಡುವುದು ಒಳ್ಳೆಯ ವಿಚಾರ. ಆದರೆ ಇದು ಬಹಳ ಸಮಯದಿಂದ ಸಂಭವಿಸಿಲ್ಲ. ನನಗೆ ಭರವಸೆ ಇದೆ. ಇದು ಒಂದು ದಿನ ಸಂಭವಿಸುತ್ತದೆ. ನಮಗೂ ಕೂಡ ಆರ್​​ಸಿಬಿ ಪರ ಮತ್ತೆ ಆಡಲು ಇಷ್ಟವಿದೆ. ಅವಕಾಶ ಸಿಕ್ಕರೆ ತವರಿನ ಫ್ರಾಂಚೈಸಿ ಪರ ಆಡಲು ನಮಗೂ ಇಷ್ಟ ಇದೆ. ಇದು ನಮ್ಮ ಕೈಯಲ್ಲಿಲ್ಲ. ಏನಿದ್ದರೂ ಹರಾಜು ಪ್ರಕ್ರಿಯೆಯಲ್ಲಿ ಇರುತ್ತದೆ. ನೋಡೋಣ, ಹೇಗೆ ನಡೆಯುತ್ತದೆ ಎಂದು.
ನಾನು ಆರ್​ಸಿಬಿಯನ್ನು ಇಷ್ಟಪಡುತ್ತೇನೆ. ಎರಡು ವರ್ಷಗಳ ಕಾಲ ಆರ್​ಸಿಬಿ ಕ್ಯಾಂಪ್​ನಲ್ಲಿದ್ದೆ. 2009, 2010ರಲ್ಲಿ ನಾನು ಆರ್​ಸಿಬಿ ಜೊತೆ ಸಮಯ ಕಳೆದಿದ್ದೇನೆ. ಈ ವೇಳೆ ನಾವು ಫೈನಲ್ ಕೂಡ ಪ್ರವೇಶ ಮಾಡಿದ್ದೆವು. ನನಗೆ ಖಂಡಿತ ನಂಬಿಕೆ ಇದೆ. ನಾನು ಮಾತ್ರವಲ್ಲ, ಸ್ಥಳೀಯ ಆಟಗಾರರು ಒಂದೆಲ್ಲ ಒಂದು ದಿನ ಆರ್​ಸಿಬಿ ಪರ ಆಡುವ ಅವಕಾಶ ಪಡೆಯುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್