newsfirstkannada.com

ಗಂಭೀರ್​ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದ ಕನ್ನಡಿಗ ಯಾರು.. ಆ ಯುವ ಪ್ಲೇಯರ್ ಈಗ ಏನಾಗಿದ್ದಾರೆ?

Share :

Published July 22, 2024 at 10:59am

    ಈಗಲೂ ಸಹ ಆ ಬಗ್ಗೆ ಮಾಜಿ ಪ್ಲೇಯರ್​ ಗಂಭೀರ್​ ಕೊರಗ್ತಾರಾ?

    ನಿಸ್ವಾರ್ಥದ ಆಟ, ತಂಡ ಗೆಲ್ಲಬೇಕು ಎನ್ನುವುದೇ ಇವರ ಧ್ಯೇಯ

    ಸ್ವಾರ್ಥಕ್ಕಾಗಿ ಕನ್ನಡಿಗನನ್ನ ಮುಂದೆ ಬಿಟ್ಟಿದ್ದ ಗೌತಮ್ ಗಂಭೀರ್​

ಟೀಮ್​ ಇಂಡಿಯಾದ ಹಾಲಿ ಕೋಚ್​, ಮಾಜಿ ಪ್ಲೇಯರ್​ ಗೌತಮ್​ ಗಂಭೀರ್​, ಮಿಸ್ಟರ್​ ಪರ್ಫೆಕ್ಟ್​ ಎಂದೇ ಖ್ಯಾತಿ. ಆದ್ರೆ, ಮಿಸ್ಟರ್​ ಪರ್ಫೆಕ್ಟ್​ ಹಿಂದೊಮ್ಮೆ ತನ್ನ ಸ್ವಾರ್ಥ ಸಾಧನೆಗಾಗಿ ಒಂದು ದೊಡ್ಡ ತಪ್ಪು ಮಾಡಿದ್ರು. ಈಗಲೂ ಸಹ ಆ ಬಗ್ಗೆ ಗಂಭೀರ್​ ಕೊರಗ್ತಾರಂತೆ. ಅಷ್ಟಕ್ಕೂ ಗಂಭೀರ್​ಗಿರೋ ಆ ಕೊರಗೇನು?.

ಇದನ್ನೂ ಓದಿ: ಮಫ್ಲರ್​​ನಿಂದ ನೇಣು ಬಿಗಿದುಕೊಂಡು SSLC ವಿದ್ಯಾರ್ಥಿ ಆತ್ಮ*ತ್ಯೆ.. ಬಾಲಕನ ಸಾವಿಗೆ ಅಸಲಿ ಕಾರಣ?

ಟೀಮ್​ ಇಂಡಿಯಾ ಕೋಚ್​ ಪಟ್ಟವೇರಿರೋ ಗೌತಮ್​ ಗಂಭೀರ್​, ಭಾರತೀಯ ಕ್ರಿಕೆಟ್​ ಕಂಡ ಶ್ರೇಷ್ಠ ಬ್ಯಾಟ್ಸ್​ಮನ್​ ಕೂಡ ಹೌದು. ಟೀಮ್​ ಇಂಡಿಯಾ ಪರ ಇರಲಿ ಅಥವಾ ಐಪಿಎಲ್​ ಇರಲಿ, ಎಂತದ್ದೇ ಸನ್ನಿವೇಶವಿರಲಿ, ಕೆಚ್ಚೆದೆಯ ಹೋರಾಟ ನಡೆಸ್ತಿದ್ದ ಪಂಟರ್​. ಸಂಕಷ್ಟ ಬಂದಾಗ ಬೆನ್ನು ತೋರಿಸೋ ಜಾಯಮಾನ ಗೌತಿಯದ್ದಲ್ಲ. ಸ್ವಾರ್ಥ ಅನ್ನೋದೇ ಇಲ್ಲ.. ನಿಸ್ವಾರ್ಥ ಆಟ, ತಂಡ ಗೆಲ್ಲಬೇಕು ಅನ್ನೋದೊಂದೆ ಧ್ಯೇಯ. ಹೀಗಾಗಿಯೇ ವಿಶ್ವ ಕ್ರಿಕೆಟ್​ನಲ್ಲಿ ಟ್ರೂ ಫೈಟರ್​ ಎಂಬ ಪಟ್ಟವನ್ನ ಗಂಭೀರ್​ ಸಂಪಾದಿಸಿದ್ದಾರೆ. ಇಂತಾ ಗಂಭೀರ್​ ತಮ್ಮ ಸ್ವಾರ್ಥಕ್ಕಾಗಿ, ತಮ್ಮ ಸ್ಥಾನ ಉಳಿಸಿಕೊಳ್ಳಲು ಹಿಂದೊಮ್ಮೆ ಕನ್ನಡಿಗನನ್ನ ಮುಂದೆ ಬಿಟ್ಟು ಹಿಂದೆ ಅಡಗಿದ್ರು.

ಇದನ್ನೂ ಓದಿ: ಮಹಿಳೆಯರನ್ನ ಜೀವಂತ ಸಮಾಧಿ ಮಾಡಲು ಮುಂದಾಗಿದ್ದ ದುಷ್ಕರ್ಮಿಗಳು.. ಭಯಾನಕ ಘಟನೆ!

ಅದು 2014ರ ಐಪಿಎಲ್​ ಟೂರ್ನಿ. ಆ ಐಪಿಎಲ್​ನಲ್ಲಿ ಕೆಕೆಆರ್​ ನಾಯಕನಾಗಿದ್ದ, ಗೌತಮ್​ ಗಂಭೀರ್​ ಆರಂಭಿಕ 3 ಪಂದ್ಯಗಳಲ್ಲಿ ಡಕೌಟ್​ ಆಗಿದ್ರು. ಈ ವೈಫಲ್ಯದ ಪರಿಣಾಮ ತೀವ್ರ ಟೀಕೆಗೆ ಗುರಿಯಾಗಿದ್ರು. ಸತತ ಟೀಕೆಗಳನ್ನ ಎದುರಿಸಿದ ಗಂಭೀರ್​, ಮುಂದಿನ ಪಂದ್ಯದಲ್ಲಿ ಮನೀಷ್ ಪಾಂಡೆಯನ್ನ ಆರಂಭಿಕನಾಗಿ ಕಳಿಸಿ 3ನೇ ಕ್ರಮಾಂಕದಲ್ಲಿ ಆಡಿದ್ರು. ಆಗಲೂ ಗಂಭೀರ್​ ಗಳಿಸಿದ್ದು ಕೇವಲ 1 ರನ್​ ಮಾತ್ರ. ಅದು ನನ್ನ ಕರಿಯರ್​ನಲ್ಲಿ ನಾನು ಮಾಡಿದ ದೊಡ್ಡ ತಪ್ಪು ಎಂದು ಗಂಭೀರ್​ ಈಗ ಹೇಳಿಕೊಂಡಿದ್ದಾರೆ. ಅಂದು ನನ್ನ ಸ್ಥಾನವನ್ನ ಸೇಫ್​ ಮಾಡಿಕೊಳ್ಳಲು ಮನೀಷ್​ ಪಾಂಡೆಯನ್ನ ನಾನು ಬ್ಯಾಟಿಂಗ್​ ಕಳಿಸಿದೆ. ನಾಯಕನಾಗಿ ಯುದ್ಧದಲ್ಲಿ ಎಂದಿಗೂ ನಾನು ಮುಂದೆ ನಿಲ್ಲಬೇಕು. ಆದ್ರೆ, ಮನೀಷ್​ ಪಾಂಡೆಯನ್ನ ಮುಂದೆ ಬಿಟ್ಟು ಹಿಂದೆ ಉಳಿದಿದ್ದು, ನಾಯಕನಾಗಿ ನಾನು ಮಾಡಿದ ದೊಡ್ಡ ತಪ್ಪು ಎಂದು ಇದೀಗ ಗಂಭೀರ್​ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಂಭೀರ್​ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದ ಕನ್ನಡಿಗ ಯಾರು.. ಆ ಯುವ ಪ್ಲೇಯರ್ ಈಗ ಏನಾಗಿದ್ದಾರೆ?

https://newsfirstlive.com/wp-content/uploads/2024/07/GAUTHAM_GAMBHIR.jpg

Load More