/newsfirstlive-kannada/media/post_attachments/wp-content/uploads/2024/08/CM_DELHI.jpg)
ಒಂದಲ್ಲಾ ಎರಡಲ್ಲಾ ಬರೋಬ್ಬರಿ 17 ತಿಂಗಳು.. ಅಂದ್ರೆ ಒಂದೂವರೆ ವರ್ಷ.. ಅಬಕಾರಿ ಹಗರಣದ ಬಲೆಯಲ್ಲಿ ಸಿಲುಕಿ ತಿಹಾರ್ ಜೈಲಿನಲ್ಲಿ ಒದ್ದಾಡ್ತಿದ್ದ ದೆಹಲಿಯ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. ಸುಪ್ರೀಂ ಕೋರ್ಟ್ ಗುಡ್‌ನ್ಯೂಸ್ ಕೊಟ್ಟಿದ್ದು 530 ದಿನಗಳ ವನವಾಸ ಕೊನೆಯಾಗಿದೆ.
ಇದನ್ನೂ ಓದಿ:ಅಂಬಾನಿ ಫ್ಯಾಮಿಲಿ ಒಟ್ಟು ಆಸ್ತಿ ₹25750000000000; ಈ 3 ಫ್ಯಾಮಿಲಿಗಳೇ ಭಾರತದ ಟಾಪ್ ಶ್ರೀಮಂತರು!
ದೆಹಲಿ ಅಬಕಾರಿ ಹಗರಣ ಆಪ್ ನಾಯಕರಿಗೆ ಭಾರೀ ದೊಡ್ಡ ಸಂಕಷ್ಟ ತಂದೊಡ್ಡಿತ್ತು. ಇದೇ ಕೇಸ್ನಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜೈಲು ಪಾಲಾಗಿ ಅಲ್ಲಿಂದಲೇ ರಾಜ್ಯಭಾರ ಮಾಡ್ತಿದ್ದಾರೆ. ಇದೇ ಕೇಸ್ನಲ್ಲಿ ತಿಹಾರ್ ಜೈಲು ಸೇರಿದ್ದ ಮತ್ತೊಬ್ಬ ನಾಯಕನ ಸೆರೆಮನೆವಾಸಕ್ಕೆ ಮುಕ್ತಿ ಸಿಕ್ಕಿದೆ.
ಇದನ್ನೂ ಓದಿ: ಒಲಿಂಪಿಕ್ಸ್ನ ಯುವ ಪ್ಲೇಯರ್ಗೆ ಕೋಟಿ ರೂಪಾಯಿ ಅನೌನ್ಸ್.. ವಿಡಿಯೋ ಕಾಲ್ ಮಾಡಿ ಮಾತಾಡಿದ CM
ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾಗೆ ಕಡೆಗೂ ಜಾಮೀನು
ಅಬಕಾರಿ ಹಗರಣದಲ್ಲಿ ದೆಹಲಿಯ ಆಪ್ ನಾಯಕ ಮತ್ತು ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾಗೆ ಕಡೆಗೂ ಜಾಮೀನೆಂಬ ಜಾಮೂನು ಸಿಕ್ಕಿದೆ. 17 ತಿಂಗಳ ಅಂದ್ರೆ 530 ದಿನಗಳ ಕಾಲ ಜೈಲೂಟ ಸೆವಿದಿದ್ದ ಸಿಸೋಡಿಯಾಗೆ ಕೊನೆಗೂ ಸುಪ್ರೀಂ ಕೋರ್ಟ್ ಬಿಡುಗಡೆ ನೀಡಿದೆ. ಅಬಕಾರಿ ನೀತಿ ಪ್ರಕರಣದಲ್ಲಿ ಸಿಬಿಐನಿಂದ ಬಂಧಿಸಲ್ಪಟ್ಟಿದ್ದ ಸಿಸೋಡಿಯಾಗೆ ಸದ್ಯ ಬಿಡುಗಡೆ ಭಾಗ್ಯ ಸಿಕ್ಕಿದೆ.
ಸಿಸೋಡಿಯಾ ಮನೆಯಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ
ಇನ್ನು, ತಮ್ಮ ನಾಯಕನಿಗೆ ಜಾಮೀನು ಸಿಕ್ಕಿ ಬಿಡುಗಡೆಯಾಗ್ತಿದ್ದಂತೆ ಆಪ್ ನಾಯಕರು ಫುಲ್ ಖುಷ್ ಆಗಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪನ್ನು ಆಮ್ ಆದ್ಮಿ ಪಕ್ಷ ಸ್ವಾಗತಿಸಿದೆ. ಇದು ಸತ್ಯಕ್ಕೆ ಸಂದ ಜಯ ಅಂತ ಹೇಳಿದ್ದಾರೆ. ಮಾತ್ರವಲ್ಲದೇ ಸಿಸೋಡಿಯಾ ಕುಟುಂಬಸ್ಥರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಬೇಲ್ ಸಿಗುತ್ತಲೇ ಕಣ್ಣೀರು ಹಾಕಿದ ಸಚಿವೆ ಅತಿಶಿ
ಇನ್ನು ಮನೀಶ್ ಸಿಸೋಡಿಯಾಗೆ ಜಾಮೀನು ಮಂಜೂರು ಮಾಡಿದ ಸುದ್ದಿ ಕೇಳಿ ಶಿಕ್ಷಣ ಸಚಿವೆ ಆತಿಶಿ ಸಂತಸದಿಂದ ಕಣ್ಣೀರಿಟ್ಟಿದ್ದಾರೆ. ದೆಹಲಿಯ ಶಾಲಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅತಿಶಿ, ದಿಲ್ಲಿಯ ವಿದ್ಯಾರ್ಥಿಗಳು ಗೆದ್ದಿದ್ದಾರೆ. ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ್ದಾರೆಂಬ ಕಾರಣಕ್ಕಾಗಿ ಅವರನ್ನು ಜೈಲಿಗೆ ಹಾಕಲಾಗಿತ್ತು ಎಂದು ಆರೋಪಿಸಿದರು.
ಇದನ್ನೂ ಓದಿ: ಪಡ್ಡೆಹುಡುಗರ ಕಣ್ಣು ತಂಪು ಮಾಡಿದ ನಿವೇದಿತಾ ಗೌಡ.. ಹಾಟ್ ಆಗಿ ಕಾಣಿಸಿದ ಬಿಗ್ಬಾಸ್ ಬ್ಯೂಟಿ!
ಶೈಕ್ಷಣಿಕ ಕ್ರಾಂತಿಕಾರಿಗೆ ಜಾಮೀನು ಸಿಕ್ಕಿದೆ. ಇಂದು ಸತ್ಯಕ್ಕೆ ಗೆಲುವು ಸಿಕ್ಕಿದೆ. ದಿಲ್ಲಿಯ ವಿದ್ಯಾರ್ಥಿಗಳು ಗೆದ್ದಿದ್ದಾರೆ. ದೆಹಲಿಯ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ್ದಕ್ಕಾಗಿ ಅವರನ್ನು ಜೈಲಿಗೆ ಕಳಿಸಲಾಗಿತ್ತು. ಬಜೆಟ್ನಲ್ಲಿ 25 ಶೇಕಡಾ ಮಕ್ಕಳ ಶಿಕ್ಷಣಕ್ಕಾಗಿ ಮೀಸಲಿಟ್ಟಿದ್ದಕ್ಕಾಗಿ ಜೈಲಿಗೆ ಕಳಿಸಿದ್ರು. ಬಡ ಮಕ್ಕಳ ಭವಿಷ್ಯ ಬದಲಾಯಿಸಿದ್ರು ಅಂತ ಸಿಸೋಡಿಯಾ ಅವರನ್ನು ಜೈಲಿಗೆ ಹಾಕಲಾಗಿತ್ತು.
ಆತಿಶಿ, ದೆಹಲಿ ಶಿಕ್ಷಣ ಸಚಿವೆ
ದೆಹಲಿ ಅಬಕಾರಿ ಹಗರಣ ದೆಹಲಿ ಆಪ್ ನಾಯಕರಿಗೆ ಕಂಟಕವಾಗಿದ್ದಂತೂ ಸುಳ್ಳಲ್ಲ. ಸದ್ಯ ಸಿಸೋಡಿಯಾಗೆ ಜಾಮೀನು ಸಿಕ್ಕಿದ್ದು ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಜಾಮೀನೆಂಬ ಜಾಮೂನುಗಾಗಿ ಎದುರು ನೋಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ