newsfirstkannada.com

ವಸತಿ ಶಾಲೆಗಳ ಘೋಷವಾಕ್ಯ ಬದಲಿಸಿ ಕುವೆಂಪುಗೆ ಅವಮಾನ; ಈ ಬಗ್ಗೆ ಮಣಿವಣ್ಣನ್ ಹೇಳಿದ್ದೇನು?

Share :

Published February 19, 2024 at 7:53pm

  ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬನ್ನಿ ಎಂದಿದ್ದ ನಾಮಫಲಕ

  ಮಣಿವಣ್ಣನ್ ಆದೇಶದ ಮೇರೆಗೆ ಹಲವು ಕಡೆ ಬೋರ್ಡ್​ ಬದಲಾವಣೆ

  ಸದ್ಯ ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎಂದು ಚೇಂಜ್​..!

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶದ್ವಾರದಲ್ಲಿರುವ ಘೋಷವಾಕ್ಯ ಬದಲಾವಣೆ ಮಾಡಲಾಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಘಾಳಪೂಜಿ ಗ್ರಾಮದಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬನ್ನಿ ಎಂದು ಬೋರ್ಡ್​ ಇತ್ತು. ಈಗ ಇದನ್ನು ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎಂದು ಬದಲಾವಣೆ ಮಾಡಿದ್ದಾರೆ.

ಇನ್ನು, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಮೌಖಿಕ ಆದೇಶ ಹೊರಡಿಸಿದ್ರಂತೆ. ಈ ಹಿನ್ನೆಲೆ ನಾವು ಬದಲಾವಣೆ ಮಾಡಿದ್ವಿ ಅಂತ ವಿಜಯಪುರದ ಮೊರಾರ್ಜಿ ದೇಸಾಯಿ ಶಾಲೆಯ ಪ್ರಾಂಶುಪಾಲ ದುಂಡಪ್ಪ ಸ್ಪಷ್ಟನೆ ನೀಡಿದ್ದಾರೆ. ಕೇವಲ ವಿಜಯಪುರ ಮಾತ್ರವಲ್ಲದೇ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಮೊರಾರ್ಜಿ ವಸತಿ ಶಾಲೆಗಳಲ್ಲಿ ಧ್ಯೇಯವಾಕ್ಯವೇ ಬದಲಾಗಿದೆ. ರಾಷ್ಟ್ರಕವಿ ಕುವೆಂಪು ಬರೆದ ಕವನದ ಸಾಲುಗಳಿಂದ ಪ್ರೇರಿತವಾಗಿದ್ದ ಧ್ಯೇಯವಾಕ್ಯವನ್ನೇ ಕಾಂಗ್ರೆಸ್ ಸರ್ಕಾರ ಬದಲಾಯಿಸಿದೆ. ಇದು ಲೋಕ ಕದನದ ಹೊತ್ತಲ್ಲಿ ಬಿಜೆಪಿ ನಾಯಕರಿಗೆ ಮತ್ತೊಂದು ಅಸ್ತ್ರವನ್ನ ಕೊಟ್ಟಂತಾಗಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರದ ನಡೆಯನ್ನ ಖಂಡಿಸಿ ಬಿಜೆಪಿಗರು ಕೆಂಡಕಾರಿದ್ದಾರೆ. ಇದೇ ಧ್ಯೇಯವಾಕ್ಯ ರಾಜಕೀಯ ರಂಪಾಟಕ್ಕೂ ವೇದಿಕೆ ಮಾಡಿಕೊಟ್ಟಿದೆ.

ವಸತಿ ಶಾಲೆಗಳಲ್ಲಿ ಘೋಷವಾಕ್ಯ ಬದಲಾವಣೆ ವಿಚಾರಕ್ಕೆ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಫುಲ್ ಗರಂ ಆಗಿದ್ದಾರೆ. ಇದರ ಬಗ್ಗೆ ಹೌಸ್​ನಲ್ಲಿ ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಅಲ್ಲೇ ಉತ್ತರ ಬರುತ್ತೆ. ನಾನು ಈಗ ಮಾತನಾಡೋದು ಸರಿ ಆಗಲ್ಲ. ನೀವು ಏನ್ ಬೇಕಾದ್ರೂ ಪ್ರಶ್ನೆ ಮಾಡಿ. ಆದ್ರೆ ನಾನು ಉತ್ತರ ಕೊಡೋಕೆ ಬರಲ್ಲ, ಉತ್ತರ ಕೊಡಲ್ಲ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಸತಿ ಶಾಲೆಗಳ ಘೋಷವಾಕ್ಯ ಬದಲಿಸಿ ಕುವೆಂಪುಗೆ ಅವಮಾನ; ಈ ಬಗ್ಗೆ ಮಣಿವಣ್ಣನ್ ಹೇಳಿದ್ದೇನು?

https://newsfirstlive.com/wp-content/uploads/2024/02/Kuvempu-Govt-School.jpg

Load More