/newsfirstlive-kannada/media/post_attachments/wp-content/uploads/2024/12/bbk-11.jpg)
ಕನ್ನಡದ ಬಿಗ್​ಬಾಸ್​ ಈಗ ಐಶಾರಾಮಿ ರೆಸಾರ್ಟ್ ಆಗಿ ಬದಲಾಗಿದೆ. ಬಿಗ್​ಬಾಸ್​ ಮನೆಯಷ್ಟೇ ಅಲ್ಲದೇ ಸ್ಪರ್ಧಿಗಳು ಕೂಡ ಚೇಂಜ್​ ಆಗಿದ್ದಾರೆ. ಒಂದು ತಂಡ ಐಶಾರಾಮಿ ರೆಸಾರ್ಟ್​ನಲ್ಲಿ ಕೆಲಸಗಾರರಾಗಿದ್ದರೆ, ಮತ್ತೊಂದು ತಂಡ ಅತಿಥಿಗಳಾಗಿದ್ದಾರೆ.
ಇದನ್ನೂ ಓದಿ: ಹೊತ್ತಿ ಉರಿದ ಲ್ಯಾಂಬೋರ್ಗಿನಿ ಕಾರು.. ಐಷಾರಾಮಿ ಕಾರಿನ ಕಥೆಯೇ ಹೀಗಾದ್ರೆ ಹೆಂಗೆ ಗುರು? VIDEO
/newsfirstlive-kannada/media/post_attachments/wp-content/uploads/2024/12/BBK-RAJATH.jpg)
ಈ ವಾರ ಬಿಗ್​ಬಾಸ್​ ಮನೆ ಮಂದಿಗೆ ಸಖತ್​ ಮಜವಾದ ಟಾಸ್ಕ್​ವೊಂದನ್ನು ಕೊಟ್ಟಿದ್ದಾರೆ. ಈಗ ಬಿಗ್​ಬಾಸ್​ ಮನೆ ಸಂಪೂರ್ಣವಾಗಿ ರೆಸಾರ್ಟ್ ರೀತಿಯಲ್ಲೇ ಬದಲಾಗಿದೆ. ಮೊನ್ನೆ ರೆಸಾರ್ಟ್​ಗೆ ಅತಿಥಿಯಾಗಿ ಬಂದ ಮಂಜಣ್ಣ ಉಗ್ರ ಅವತಾರಾ ತಾಳಿದ್ದರು. ರೆಸಾರ್ಟ್​ಗೆ ಬಂದ ಅತಿಥಿಗಳನ್ನು ತ್ರಿವಿಕ್ರಮ್, ಭವ್ಯಾ ಗೌಡ, ಧನರಾಜ್​, ರಜತ್​ ಹಾಗೂ ಮೋಕ್ಷಿತಾ ಇದ್ದಾರೆ ನೋಡಿಕೊಳ್ಳಬೇಕಿತ್ತು.
/newsfirstlive-kannada/media/post_attachments/wp-content/uploads/2024/12/bbk1122.jpg)
ಅತಿಥಿಗಳು ಹೇಳಿದ ಕೆಲಸವನ್ನು ಚಾಚು ತಪ್ಪದೇ ಪಾಲಿಸಬೇಕಿತ್ತು. ಇದೇ ವೇಳೆ ಮ್ಯಾನೇಜರ್ ಮೋಕ್ಷಿತಾಗೆ, ಮಂಜಣ್ಣ ಎಲ್ಲ ಕತ್ತೆ ಮೇಯಿಸೋಕೆ ಬಂದಿದ್ದೀರಾ ಅಂತ ಪ್ರಶ್ನೆ ಮಾಡಿದ್ದರು. ಇದಾದ ಬಳಿಕ ಮೋಕ್ಷಿತಾ ಮೇಲೆ ಮಂಜು, ತಲೆ ತುಂಬಾ ಮಣ್ಣು ತುಂಬಿಕೊಂಡ್ರೆ ಏನೂ ಮಾಡೋದಕ್ಕೆ ಆಗೋದಿಲ್ಲ ಅಂತ ಅವಾಜ್​ ಹಾಕಿದ್ರು.
ಇದೀಗ ಬಿಗ್​ಬಾಸ್​ ಮನೆಯಲ್ಲಿ ಎಲ್ಲವೂ ಅದಲು ಬದಲು ಆಗಿದೆ. ಮೊನ್ನೆ ಅತಿಥಿಗಳಾಗಿದ್ದವರು ನಿನ್ನೆ ಕೆಲಸಗಾರರಾಗಿದ್ದಾರೆ. ನಿನ್ನೆ ಕೆಲಸಗಾರರಾಗಿದ್ದರು ಇಂದು ಅತಿಥಿಗಳಾಗಿದ್ದಾರೆ. ರಜತ್​, ತ್ರಿವಿಕ್ರಮ್​, ಮೋಕ್ಷಿತಾ, ಭವ್ಯಾ ಗೌಡ, ಧನರಾಜ್​​ ಇವರ ಅಸಲಿ ಆಟ ಈಗ ಬಿಗ್​ಬಾಸ್​ ಮನೆಯಲ್ಲಿ ಶುರುವಾಗಿದೆ. ನಿನ್ನೆ ಕೆಲಸಗಾರರಾಗಿದ್ದ ಈ ತಂಡ ಇಂದು ಅತಿಥಿಗಳಾಗಿ ತಮ್ಮ ಆಟ ಶುರು ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/12/bbk1121.jpg)
ಆದರೆ, ಭವ್ಯಾ ಗೌಡ ತಂಡ ಸದಸ್ಯರು, ಚೈತ್ರಾ ಕುಂದಾಪುರ ಅಂದ್ರೆ ಐಶಾರಾಮಿ ರೆಸಾರ್ಟ್ ಕೆಲಸಗಾರರಿಗೆ ತುಂಬಾನೇ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಬೇಕು ಬೇಕು ಅಂತಲೇ ಗಲಾಟೆ ಮಾಡಿಕೊಂಡು ತಮಾಷೆ ಮಾಡುತ್ತಿದ್ದಾರೆ. ಆದ್ರೆ ಈ ತಮಾಷೆ ಈಗ ಕಣ್ಣೀರಿಗೆ ಕಾರಣ ಆಗಿದೆ. ಅಲ್ಲದೇ ಭವ್ಯಾ ಗೌಡ ಟೀಮ್​ ಕೊಡುವ ಕೆಲಸಕ್ಕೆ ಗೌತಮಿ ಬಾತ್​ ರೂಂಗೆ ಹೋಗಿ ಕಣ್ಣೀರು ಹಾಕಿದ್ದಾರೆ. ಇನ್ನೂ ಈ ಟಾಸ್ಕ್ ಎಷ್ಟು ದಿನ ಮುಂದುವರೆಯಲಿದೆ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us