ಮದುವೆ ಆಗದೆ ಇರೋ ಬ್ಯಾಚುಲರ್ಸ್​ಗೆ ಮಂಜು ಪಾವಗಡ ಕೊಟ್ರು 4 ಸೂಪರ್ ಸಲಹೆ; ಏನದು?

author-image
Veena Gangani
Updated On
ಮದುವೆ ಆಗದೆ ಇರೋ ಬ್ಯಾಚುಲರ್ಸ್​ಗೆ ಮಂಜು ಪಾವಗಡ ಕೊಟ್ರು 4 ಸೂಪರ್ ಸಲಹೆ; ಏನದು?
Advertisment
  • ವೇದಿಕೆ ಮೇಲೆ ಸಂಸಾರಿ ಮಂಜು ಪಾವಗಡ ಯುವಕರಿಗೆ ಕೊಟ್ಟ ಸಲಹೆಗಳೇನು?
  • ಹೆಂಡತಿ ಅಮ್ಮನ ಮನೆಗೆ ಹೋಗೆ ವಾಪಸ್​ ಬರಲಿಲ್ಲ ಅಂದ್ರೆ ಏನ್​ ಮಾಡ್ಬೇಕು?
  • ಬಿಗ್​ಬಾಸ್ ಸೀಸನ್ 8ರ ವಿನ್ನರ್‌ ಆಗಿ ಹೊರ ಹೊಮ್ಮಿದ್ದ ಮಂಜು ಪಾವಗಡ

ಬಿಗ್ ಬಾಸ್ ಸೀಸನ್ 8ರ ವಿನ್ನರ್‌, ಕನ್ನಡ ಕಿರುತೆರೆ ನಟ, ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಮಂಜು ಪಾವಗಡ ಮದುವೆಯಾದ ಬ್ಯಾಚುಲರ್ಸ್​ಗೆ 4 ಸಲಹೆಗಳನ್ನು ಕೊಟ್ಟಿದ್ದಾರೆ. ಮಂಜು ಅವರ ಸೂಪರ್​ ಸಲಹೆಗೆ ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ.

publive-image

ಹೌದು, ಮಂಜು ಪಾವಗಡ ಇದ್ದಲ್ಲಿ ಮಜಾ ಇರಲೇಬೇಕು, ಮಂಜು ಅವರ ಕಾಮಿಡಿ ಮ್ಯಾನರಿಸಂ ಎಲ್ಲರ ಮುಖದಲ್ಲೂ ಮಂದಹಾಸ ಮೂಡಿಸುತ್ತೆ. ಹೀಗೆ ಬಾಯ್ಸ್‌ v/s ಗರ್ಲ್ಸ್ ಶೋನಲ್ಲಿ ಇನ್ನೂ ಮದುವೆ ಆಗದೇ ಇರೋ ಯುವಕರಿಗೆ ಒಂದೊಂದಾಗಿ ಸಲಹೆ ಕೊಟ್ಟಿದ್ದಾರೆ.

ಇದನ್ನೂ ಓದಿ: ರಾಮಾಚಾರಿ ಸೀರಿಯಲ್​ ಚಾರು ಸೀರೆ ಮೇಲೆ ಹೆಣ್ಮಕ್ಕಳ ಕಣ್ಣು; ನಟಿ ಮೌನ ಗುಡ್ಡೆಮನೆ ಕಲೆಕ್ಷನ್ ನೋಡಿ!

ಮೊದಲು ಮೇಕಪ್​.. ಹೇಗೆ ಇದ್ರೂ ತಿಂಗಳಿಗೆ 6ರಿಂದ 8 ಸಾವಿರ ಖರ್ಚು ಬರುತ್ತೆ. ಅದಕ್ಕೆ ಮದುವೆಯಾದ ಗಂಡಸರು ಬೆಳಗ್ಗೆ ಎದ್ದ ತಕ್ಷಣ ಹೆಂಡತಿಯನ್ನು ಕರೆದು ಎಷ್ಟು ಚೆನ್ನಾಗಿ ಇದ್ಯಾ, ಮಹಾಲಕ್ಷ್ಮೀ ತರ ಇದೀಯಾ ಅಂತ ಹೋಗಳಬೇಕು. ಹೀಗೆ ಹೀಗೆ 3 ತಿಂಗಳು ಹೇಳಿ ಅವರನ್ನು ನಂಬಿಸಬೇಕು. ಇದರಿಂದ 6ರಿಂದ 8 ಸಾವಿರ ಉಳಿಯುತ್ತೆ.


">April 5, 2025

ಔಟಿಂಗ್.. ಮದುವೆ ಆದ್ರೆ ಸಾಕು ಮಾಲ್ಡೀವ್ಸ್, ಥೈಲ್ಯಾಂಡ್ ಅಲ್ಲಿ ಹೋಗೋಣ, ಇಲ್ಲಿ ಹೋಗೋಣ ಅಂತ ಹೇಳುತ್ತಾ ಇರುತ್ತಾರೆ. ಅದಕ್ಕಾಗಿ ಅವರಿಗೆ ನ್ಯೂಸ್​ ನೋಡಬೇಕು. ಮಾಲ್ಡೀವ್ಸ್, ಬ್ಯಾಂಕಾಕ್​ನಲ್ಲಿ ಭೂಕಂಪ ಆಗಿರೋದನ್ನು ತೋರಿಸಬೇಕು. ಮನೆಯಲ್ಲಿ ಇರೋತರ ಮಾಡಬೇಕು. ಹೀಗೆ ಮಾಡಿ ನಾನು 2 ಲಕ್ಷ ಉಳಿತಾಯ ಮಾಡೀದಿನಿ.

ಯ್ಯೂಟೂಬ್ ಚಾನೆಲ್.. ಮದುವೆ ಆದ ತಕ್ಷಣ ಯ್ಯೂಟೂಬ್ ಚಾನೆಲ್ ಓಪನ್ ಮಾಡೋದಕ್ಕೆ ಹೇಳಬೇಕು. ಯ್ಯೂಟೂಬ್ ಚಾನೆಲ್ ಮಾಡಿದ್ರೆ ದಿನಾ ತಿಂಡಿಗೆ 4 ಐಟಮ್​ ಮಾಡಬೇಕು. ಹೀಗೆ ಮಾಡಿದ್ರೆ ಅಡುಗೆ ಖರ್ಚು ಎಲ್ಲ ಉಳಿಯುತ್ತೆ.

publive-image

ತವರು ಮನೆ.. ಅಮ್ಮನ ಮನೆಗೆ ಹೋದ್ರೆ ಮತ್ತೆ ವಾಪಸ್​ ಬರೋದಕ್ಕೆ ಲೈಟ್ ಮಾಡ್ತಾರೆ. ಅದು ಇದು ಕಥೆ ಹೇಳ್ತಾರೆ. ಅದಕ್ಕೆ ಮನೆಗೆ ಗೆಳಯರನ್ನು ಕರೆಸಿ ಪಾರ್ಟಿ ಮಾಡಿ ಫೋಟೋ ಅಪ್ಲೋಡ್ ಮಾಡಬೇಕು. ಅಷ್ಟು ಅಪ್ಲೋಡ್ ಮಾಡಿದ್ರೂ ಬಂದಿಲ್ಲ ಅಂದ್ರೆ ಹುಡುಗರ ಜಾಗದಲ್ಲಿ ಹುಡುಗಿಯಯನ್ನು ನಿಲ್ಲಿಸಿಕೊಂಡಿ ಫೋಟೋ ತೆಗೆದು ಪ್ಲೋಡ್ ಮಾಡಬೇಕು. ನಮ್ಮನ್ನ ಹೊಡಿಯೋದಕ್ಕಾದರೂ ಬರ್ತಾರೆ ಅಂತ ಸಲಹೆಗಳನ್ನು ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment