ಅಂದು ಇಡೀ ಕ್ರಿಕೆಟ್​ ಜಗತ್ತು ಎಕ್ಸೈಟ್ ಆಗಿತ್ತು.. ಭಾರತ-ಪಾಕ್ ಪಂದ್ಯಕ್ಕಾಗಿ ದಿಟ್ಟ ಹೆಜ್ಜೆ ಇಟ್ಟಿದ್ದ ಸಿಂಗ್..!

author-image
Ganesh
Updated On
ಅಂದು ಇಡೀ ಕ್ರಿಕೆಟ್​ ಜಗತ್ತು ಎಕ್ಸೈಟ್ ಆಗಿತ್ತು.. ಭಾರತ-ಪಾಕ್ ಪಂದ್ಯಕ್ಕಾಗಿ ದಿಟ್ಟ ಹೆಜ್ಜೆ ಇಟ್ಟಿದ್ದ ಸಿಂಗ್..!
Advertisment
  • ಡಾ.ಮನಮೋಹನ್ ಸಿಂಗ್ ಇನ್ನು ನೆನಪು ಮಾತ್ರ
  • ಅನಾರೋಗ್ಯದಿಂದ ವಿಧಿವಶರಾಗಿರುವ ಮಾಜಿ ಪ್ರಧಾನಿ
  • ಇಂಡೋ-ಪಾಕ್ ಕ್ರಿಕೆಟ್ ನಂಟು ಪುನರ್​ ಸ್ಥಾಪಿಸಿದ್ದ ಸಿಂಗ್

ವಿಧಿವಶರಾದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್​​ಗೆ ನೀಡುವ ಗೌರವಾರ್ಥವಾಗಿ ಟೀಂ ಇಂಡಿಯಾ ಕಪ್ಪುಪಟ್ಟಿ ಮೈದಾನಕ್ಕೆ ಇಳಿದಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಹಿನ್ನೆಲೆಯಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಮೆಲ್ಬೋರ್ನ್​​ನಲ್ಲಿ 4ನೇ ಎರಡನೇ ದಿನದ ಪಂದ್ಯ ನಡೆಯುತ್ತಿದೆ. ಸಿಂಗ್ ನೀಧನಕ್ಕೆ ದುಃಖ ವ್ಯಕ್ತಪಡಿಸಿರುವ ಟೀಂ ಇಂಡಿಯಾ, ಗೌರವಾರ್ಥವಾಗಿ ಕಪ್ಪು ಪಟ್ಟಿ ಧರಿಸಿಕೊಂಡು ಮೈದಾನದಲ್ಲಿ ಆಡ್ತಿದೆ.

ಸಿಂಗ್​ಗೆ ಕ್ರಿಕೆಟ್ ನಂಟು..

ಡಾ.ಸಿಂಗ್​ಗೆ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ನಂಟು ಹೊಂದಿದ್ದರು. ಪ್ರಧಾನಿ ಆಗಿದ್ದ ಅವಧಿಯಲ್ಲಿ ಭಾರತ ಮತ್ತು ಪಾಕ್ ನಡುವಿನ ಕ್ರಿಕೆಟ್ ಸಂಬಂಧವನ್ನು ಮರುಸ್ಥಾಪಿಸಲು ಪಣತೊಟ್ಟು ಯಶಸ್ವಿ ಆಗಿದ್ದರು. 2008ರಲ್ಲಿ ಮುಂಬೈ ದಾಳಿ ಬಳಿಕ ಭಾರತ-ಪಾಕ್ ಕ್ರಿಕೆಟ್ ಸಂಬಂಧ ಹಳಸಿತ್ತು. ಇದನ್ನು ಪುನರ್‌ ಸ್ಥಾಪಿಸುವಲ್ಲಿ ಪ್ರಯತ್ನಿಸಿದ್ದರು.

ಇದನ್ನೂ ಓದಿ:ಪಾಕಿಸ್ತಾನದಲ್ಲಿ ಇದೆ ಮನಮೋಹನ್ ಸಿಂಗ್ ಹೆಸರಲ್ಲಿ ಒಂದು ಶಾಲೆ..!

2011ರ ಏಕದಿನ ಕ್ರಿಕೆಟ್ ವಿಶ್ವಕಪ್ ಭಾರತ, ಶ್ರೀಲಂಕಾ, ಬಾಂಗ್ಲಾದೇಶದಲ್ಲಿ ಆಯೋಜನೆಗೊಂಡಿತ್ತು. ಆದರೆ ಭಾರತ ವಿರುದ್ಧ ಸೆಮಿಫೈನಲ್‌ ಪಂದ್ಯ ಆಡಲು ಪಾಕಿಸ್ತಾನ ಭಾರತಕ್ಕೆ ಆಗಮಿಸಬೇಕಿತ್ತು. ಪಾಕಿಸ್ತಾನ ಭಾರತಕ್ಕೆ ಕ್ರಿಕೆಟ್ ಆಡಲು ಬರುತ್ತಾ ಅನ್ನೋ ವಿಚಾರ ಭಾರೀ ಚರ್ಚೆ ಆಗಿತ್ತು. ಈ ಸಂದರ್ಭದಲ್ಲಿ ಅಂದಿನ ಪ್ರಧಾನಿ ಸಿಂಗ್, ಐತಿಹಾಸಿಕ ಹೆಜ್ಜೆಯನ್ನಿಟ್ಟಿದ್ದರು. ಯೂಸುಫ್ ಗಿಲಾನಿಯನ್ನೇ ಭಾರತಕ್ಕೆ ಆಹ್ವಾನಿಸಿದ್ದರು. ಆಹ್ವಾನ ಸ್ವೀಕರಿಸಿದ್ದ ಪಾಕ್ ಪ್ರಧಾನಿ, ಮೋಹಾಲಿಗೆ ಬಂದು ಸಿಂಗ್ ಜೊತೆ ಕ್ರಿಕೆಟ್ ಪಂದ್ಯ ವೀಕ್ಷಣೆ ಮಾಡಿದ್ದರು. ಇದಾದ ನಂತರ ಅಂದರೆ 2012ರಲ್ಲಿ ಭಾರತ-ಪಾಕ್ ನಡುವೆ ಭಾರತದಲ್ಲಿ ದ್ವಿಪಕ್ಷೀಯ ಸರಣಿ ನಡೆಯಿತು. ಅದಾದ ನಂತರ ಐಸಿಸಿ ಟೂರ್ನಿಗಳನ್ನು ಹೊರತುಪಡಿಸಿ ಯಾವುದೇ ದ್ವಿಪಕ್ಷೀಯ ಟೂರ್ನಿ ನಡೆದಿಲ್ಲ.

ಇದನ್ನೂ ಓದಿ:IND vs AUS: ದುಃಖದಲ್ಲಿ ಟೀಂ ಇಂಡಿಯಾ.. ಕಪ್ಪುಪಟ್ಟಿ ಧರಿಸಿ ಮೈದಾನಕ್ಕೆ ಇಳಿದ ಆಟಗಾರರು..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment