/newsfirstlive-kannada/media/post_attachments/wp-content/uploads/2024/12/Manmohan-Singh-Car.jpg)
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನರಾಗಿದ್ದಾರೆ. ಡಾ.ಮನಮೋಹನ್ ಸಿಂಗ್ ಜೊತೆಗಿನ ಒಡನಾಟವನ್ನು ಗಣ್ಯಾತಿಗಣ್ಯರು ಸ್ಮರಿಸಿಕೊಂಡಿದ್ದಾರೆ.
ಉತ್ತರ ಪ್ರದೇಶದ ಯೋಗಿ ಸರ್ಕಾರದಲ್ಲಿ ರಾಜ್ಯ ಸಚಿವರಾಗಿರುವ (ಸ್ವತಂತ್ರ ಉಸ್ತುವಾರಿ) ಸಮಾಜ ಕಲ್ಯಾಣ ಸಚಿವ ಆಸೀಮ್ ಅರುಣ್​, ಅವರು ಡಾ.ಮನಮೋಹನ್ ಸಿಂಗ್ ಬಳಿ ಬಾಡಿಗಾರ್ಡ್ ಆಗಿದ್ದರು. ಡಾ.ಮನಮೋಹನ್ ಸಿಂಗ್ ಜೊತೆಗಿನ ತಮ್ಮ ಒಡನಾಟವನ್ನು ಆಸೀಮ್ ಅರುಣ್ ಸ್ಮರಿಸಿದ್ದಾರೆ.
2004ರಿಂದ ಮೂರು ವರ್ಷಗಳ ಕಾಲ ನಾನು ಮನಮೋಹನ್ ಸಿಂಗ್​ರಿಗೆ ಅಂಗರಕ್ಷಕನಾಗಿದ್ದೆ. SPGಯಲ್ಲಿ ಪ್ರಧಾನಿಯ ಭದ್ರತೆಗೆ ಆಂತರಿಕ ತಂಡವಿದೆ. ಕ್ಲೋಸ್​​ ಪ್ರೊಟೆಕ್ಷನ್ ಟೀಂ ಅನ್ನು ಮುನ್ನಡೆಸುವ ಅವಕಾಶ ನನಗೆ ಸಿಕ್ಕಿತ್ತು. ಪ್ರಧಾನಿಯ ಭದ್ರತಾ ತಂಡ ಪ್ರಧಾನಿಯಿಂದ ಎಂದಿಗೂ ದೂರವಿರಲು ಸಾಧ್ಯವಿಲ್ಲ. ಒಮ್ಮೊಮ್ಮೆ ಒಬ್ಬ ವ್ಯಕ್ತಿ ಮಾತ್ರ ಅವರ ಜೊತೆಗೆ ಉಳಿಯಲು ಸಾಧ್ಯವಾಗುವ ಸಂದರ್ಭದಲ್ಲಿ ಅವರ ನೆರಳಿನಂತೆ ಜೊತೆಯಾಗಿ ನಿಲ್ಲುವ ಜವಾಬ್ದಾರಿ ನನ್ನದಾಗಿತ್ತು.
/newsfirstlive-kannada/media/post_attachments/wp-content/uploads/2024/12/Manmohan-Singh-800-Car.jpg)
ಡಾ.ಮನಮೋಹನ್ ಸಿಂಗ್ ಸಾಹೇಬರ ಬಳಿ ಒಂದೇ ಒಂದು ಕಾರು ಇತ್ತು. ಅದು ಮಾರುತಿ 800. ಇದು ಪ್ರಧಾನಮಂತ್ರಿ ಕಚೇರಿಯಲ್ಲಿ ಬಿಎಂಡಬ್ಲ್ಯು ಕಾರಿನ ಹಿಂದೆ ನಿಂತಿರುತ್ತಿತ್ತು. ಮನಮೋಹನ್ ಸಾಹೇಬರು ನನಗೆ ಪದೇ ಪದೇ ಹೇಳುತ್ತಿದ್ದರು. ಆಸೀಮ್, ನನಗೆ ಈ BMWನಂತಹ ಕಾರಿನಲ್ಲಿ ಪ್ರಯಾಣಿಸಲು ಇಷ್ಟವಿಲ್ಲ. ನನ್ನ ಕಾರು ಇದು (ಮಾರುತಿ-800) ಎನ್ನುತ್ತಿದ್ದರು.
ಆದರೆ ನಾನು - ಸರ್, ಇದು ನಿಮ್ಮ ಐಷಾರಾಮಿಗಾಗಿ ಅಲ್ಲ. ಅದರ ಭದ್ರತಾ ವೈಶಿಷ್ಟಗಳಿಂದಾಗಿ ಎಸ್​ಪಿಜಿ ಇದನ್ನು ಬಳಸುತ್ತಿದೆ ಎಂದು ನಾನು ವಿವರಿಸುತ್ತಿದ್ದೆ. ಆದರೆ ಮಾರುತಿ ಕಾರು ಹತ್ತಿರದಿಂದ ಹಾದು ಹೋಗುವಾಗ ಅವರನ್ನು ಅದನ್ನು ಹೃದಯ ತುಂಬಿ ನೋಡುತ್ತಿದ್ದರು.
ಇದನ್ನೂ ಓದಿ: ‘ಇದಕ್ಕಿಂತ ಹೆಚ್ಚೇನು ಬೇಡಲಾರೆ‘; ಪ್ರಧಾನ ಮಂತ್ರಿಯಾಗಿ ತಮ್ಮ ಕೊನೆಯ ಭಾಷಣದಲ್ಲಿ ಏನು ಹೇಳಿದ್ದರು ಸಿಂಗ್?
ನಾನು ಮಧ್ಯಮವರ್ಗದನು. ಜನ ಸಾಮಾನ್ಯರ ಬಗ್ಗೆ ಚಿಂತಿಸುವುದು ನನ್ನ ಕೆಲಸ. ಪ್ರಧಾನಿಯ ಕಾರು ಕೋಟಿ ರೂ. ಮೌಲ್ಯದ್ದು. ನನ್ನದು ಇದು ಮಾರುತಿ-800 ಅಂತ ಮನಮೋಹನ್ ಸಾಹೇಬರು ಹೇಳುತ್ತಿದ್ದರು.
ಹಾಗಂತ ಡಾ.ಮನಮೋಹನ್ ಸಿಂಗ್​ ರವರ ಮಾಜಿ ಅಂಗರಕ್ಷಕ ಸದ್ಯ ಉತ್ತರಪ್ರದೇಶದಲ್ಲಿ ಸಚಿವರಾಗಿರುವ ಆಸೀಮ್ ಅರುಣ್ ಸ್ಮರಿಸುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us