ದೇಶದ ಅರ್ಥವ್ಯವಸ್ಥೆ ಸುಧಾರಣೆಯ ಶಿಲ್ಪಿ ಅಸ್ತಂಗತ.. ಸದೃಢ ಭಾರತಕ್ಕೆ ಭದ್ರ ಬುನಾದಿ ಹಾಕಿದ್ದ ಡಾ.ಸಿಂಗ್​

author-image
Bheemappa
Updated On
ಇಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಂತ್ಯಕ್ರಿಯೆ; ಕಾಂಗ್ರೆಸ್ ಕಚೇರಿಯಿಂದ ಹೊರಡಲಿದೆ ಅಂತಿಮ ಯಾತ್ರೆ
Advertisment
  • ಆರ್ಥಿಕ ಸಂಕಷ್ಟದಲ್ಲಿದ್ದ ಭಾರತವನ್ನು 1991ರಲ್ಲಿ ಪಾರು ಮಾಡಿದ್ದರು
  • ಅನಕ್ಷರತೆ ಹೋಗಲಾಡಿಸಲು ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮ
  • ಆರ್ಥಿಕತೆ ಕೆಳಮಟ್ಟದಲ್ಲಿದ್ದಾಗ ಸುಧಾರಣೆ ತಂದಿದ್ದ ಮನಮೋಹನ್

ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ (92) ವಿಧಿವಶರಾಗಿದ್ದಾರೆ. ಮನಮೋಹನ್ ಸಿಂಗ್ ಅವರನ್ನ ಮರೆತರೂ ಭಾರತೀಯ ಅರ್ಥ ವ್ಯವಸ್ಥೆಯ ದಿಕ್ಕನ್ನೇ ಬದಲಿಸಿದ ಅವರ ಯೋಜನೆಗಳನ್ನ ಮರೆಯಲಾಗದು. ಡಾ. ಮನಮೋಹನ್‌ ಸಿಂಗ್‌ ಅವರ ಕೊಡುಗೆ ಅಪಾರವಾಗಿದೆ.

ಅಂದಿನ ಪ್ರಧಾನಿ ಮೆಚ್ಚುಗೆಗೆ ಪಾತ್ರರಾಗಿದ್ದ ಡಾ.ಸಿಂಗ್

1991ರಲ್ಲಿ ಹಣಕಾಸು ಸಚಿವರಾಗಿದ್ದ ಮನಮೋಹನ ಸಿಂಗ್ ಅವರು ಭಾರತವನ್ನು ಆರ್ಥಿಕ ದುರಂತದಿಂದ ಪಾರು ಮಾಡಿದ್ದರು. ದೇಶದ ಅರ್ಥ ವ್ಯವಸ್ಥೆಯನ್ನು ಸುಧಾರಿಸುವಂತ ಬಜೆಟ್​ ಮಂಡನೆ ಮಾಡಿ ಅಂದಿನ ಪ್ರಧಾನಿ ಪಿ.ವಿ ನರಸಿಂಹರಾವ್‌ ಅವರ ಮೆಚ್ಚುಗೆಗೆ ಪಾತ್ರರಾಗಿದ್ದರು. ದೇಶದ ಆರ್ಥಿಕತೆಯಲ್ಲಿ ಹೊಸ ಸುಧಾರಣೆಗಳನ್ನು, ಯೋಜನೆಗಳನ್ನು, ಜನ ಸ್ನೇಹಿ ತೆರಿಗೆ ಜಾರಿ ಮಾಡಿ, ದೇಶದ ಬಡತನವನ್ನು ನಿವಾರಣೆ ಮಾಡಿದರು.

publive-image

2004ರಲ್ಲಿ ಯುಪಿಎ ಸರ್ಕಾರದಲ್ಲಿ ಪ್ರಥಮ ಬಾರಿಗೆ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ಡಾ.ಮನಮೋಹನ್ ಸಿಂಗ್ 2014ರ ಜೂನ್​​ವರೆಗೆ ಪ್ರಧಾನಿ ಸ್ಥಾನದಲ್ಲಿದ್ದರು. ಭಾರತೀಯ ರಿಸರ್ವ್​ ಬ್ಯಾಂಕಿನ 15ನೇ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದಾರೆ. ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿದ್ದರು. 2018ರಲ್ಲಿ ರಾಜ್ಯ ಸಭಾ ಸಂಸದ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಾಗ ಮನಮೋಹನ್ ಸಿಂಗ್ ಅವರು ತಮ್ಮ ಆಸ್ತಿ ಮೌಲ್ಯವನ್ನು ಘೋಷಣೆ ಮಾಡಿಕೊಂಡಿದ್ದರು. ಅವರ ಒಟ್ಟು ಆಸ್ತಿ ₹15,77,52,837 (ಹೈದಿನೈದು ಕೋಟಿ ರೂಪಾಯಿ) ರೂಪಾಯಿ ಎಂದು ಅನೌನ್ಸ್ ಮಾಡಿದ್ದರು.

ಅನಕ್ಷರತೆ ಹೋಗಲಾಡಿಸಲು ಸರ್ವ ಶಿಕ್ಷಣ ಅಭಿಯಾನ

ಅನಕ್ಷರತೆ ಹೋಗಲಾಡಿಸಲು ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮವನ್ನು ಆರಂಭ ಮಾಡಿದರು. ಎಲ್ಲ ಗ್ರಾಮೀಣ ಶಾಲೆಗಳಲ್ಲಿ ಮಿಡ್​​-ಡೇ ಮೀಲ್ಸ್​ ಕಾರ್ಯಕ್ರಮ ಜಾರಿ ಮಾಡಿದರು. 2005ರಲ್ಲಿ ಮಹತ್ವದ ನರೇಗಾ ಯೋಜನೆ ಜಾರಿ ಮಾಡಲಾಯಿತು. ಇನ್ನು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಜಾರಿಗೊಳಿಸಿದರು. ಯುಪಿಎ1ರ ಅವಧಿಯಲ್ಲಿ ದೇಶಾದ್ಯಂತ 8 ಐಐಟಿ ಸ್ಥಾಪನೆ ಮಾಡಿದರು. 2008ರಲ್ಲಿ ಯುಎಸ್ ಜೊತೆ ಪರಮಾಣು ಒಪ್ಪಂದಕ್ಕೆ ಸಹಿ ಹಾಕುವಲ್ಲಿ ಪಾತ್ರವಹಿಸಿದರು. ಇನ್ನು 2010ರ ಸಿಂಗ್​ ಸರ್ಕಾರದಿಂದ ಏಪ್ರಿಲ್ 1ರಂದು ಆರ್​ಟಿಇ ಕಾಯ್ದೆ ಜಾರಿಗೆ ಬಂತು.

ಇದನ್ನೂ ಓದಿ: ಸಿಂಗ್ ಈಸ್ ಕಿಂಗ್‌.. ಮನಮೋಹನ್ ಸಿಂಗ್ ಸೋತು ಗೆದ್ದ ಛಲಗಾರ; ಅರ್ಥಶಾಸ್ತ್ರಜ್ಞನ ಸಾಧನೆಗಳೇನು? 

publive-image

ಪೋಲಿಯೋ ಮುಕ್ತ ಭಾರತದ ರೂವಾರಿ, ವಿಶಿಷ್ಟ ಗುರುತಿನ ಚೀಟಿ ಆಧಾರ್ ಕಾರ್ಡ್​ ಇವರ ಅವಧಿಯಲ್ಲಿ ಜಾರಿಗೆ ಬಂದಿತು. ನೇರ ಲಾಭ ವರ್ಗಾವಣೆ ವ್ಯವಸ್ಥೆಯನ್ನು ಇವರ ಅವಧಿಯಲ್ಲೇ ಜಾರಿಗೆ ತಂದಿದ್ದರು. ಹಲವು ಜನಪ್ರಿಯ ಯೋಜನೆಗಳಿಗೆ ಡಾ.ಮನಮೋಹನ್ ಸಿಂಗ್ ಕಾರಣರಾಗಿದ್ದಾರೆ.

ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಕಳೆದ ಏಪ್ರಿಲ್‌ನಲ್ಲಿ ಅವರು ರಾಜ್ಯಸಭಾ ಸದಸ್ಯರಾಗಿ ನಿವೃತ್ತಿ ಘೋಷಣೆ ಮಾಡಿದರು. ಸದೃಢ ಭಾರತಕ್ಕೆ ಬುನಾದಿ ಹಾಕಿದ ಹೆಗ್ಗಳಿಕೆ ಮನಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment