/newsfirstlive-kannada/media/post_attachments/wp-content/uploads/2024/11/KL-Rahul_Gambhir_1.jpg)
ಇತ್ತೀಚೆಗೆ ನಡೆದ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ ಹೀನಾಯ ಸೋಲು ಕಂಡಿದೆ. ಈ ಬೆನ್ನಲ್ಲೇ ಟೀಮ್​​ ಇಂಡಿಯಾ ಕ್ಯಾಪ್ಟನ್​​ ರೋಹಿತ್​ ಶರ್ಮಾ ವೃತ್ತಿಜೀವನದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಅಷ್ಟೇ ಅಲ್ಲ ಟೀಮ್ ಇಂಡಿಯಾ ಕಳಪೆ ಪ್ರದರ್ಶನಕ್ಕೆ ಹೆಡ್ ಕೋಚ್ ಗೌತಮ್ ಗಂಭೀರ್ ಹೊಣೆ ಅನ್ನೋ ಚರ್ಚೆ ಜೋರಾಗಿದೆ.
ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಸೋಲಿನ ಗೌತಮ್ ಗಂಭೀರ್ ವಿರುದ್ಧ ಟೀಕೆಗಳು ಕೇಳಿ ಬಂದಿವೆ. ಈಗ ಟೀಮ್​ ಇಂಡಿಯಾ ಮಾಜಿ ಕ್ರಿಕೆಟರ್​ ಮನೋಜ್ ತಿವಾರಿ ಗೌತಮ್​​ ಗಂಭೀರ್​​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಏನಂದ್ರು ಮನೋಜ್​ ತಿವಾರಿ?
ಗೌತಮ್ ಗಂಭೀರ್​ ಮೋಸಗಾರ. ಅವನು ಹೇಳಿದಂತೆ ಯಾವತ್ತೂ ನಡೆದುಕೊಳ್ಳುವುದೇ ಇಲ್ಲ. ಕ್ಯಾಪ್ಟನ್​ ರೋಹಿತ್​​ ಶರ್ಮಾ ಎಲ್ಲಿಯವರು? ಅಭಿಷೇಕ್ ನಾಯರ್ ಎಲ್ಲಿಂದ ಬಂದವರು? ಎಲ್ಲರೂ ಮುಂಬೈನವರೇ. ಇವರನ್ನು ಮುಂದೆ ತರುವ ಅವಕಾಶ ಸಿಕ್ಕಿತ್ತು. ಜಲಜ್ ಸಕ್ಸೇನಾ ಪರ ಮಾತನಾಡಲು ಯಾರೂ ಇಲ್ಲ. ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಆದರೆ ಮೌನವಾಗಿರುತ್ತಾರೆ ಎಂದರು.
ಬೌಲಿಂಗ್ ಕೋಚ್‌ನಿಂದ ಏನು ಪ್ರಯೋಜನ? ಇವರು ಕೋಚ್ ಏನೇ ಹೇಳಿದ್ರೂ ಒಪ್ಪುತ್ತಾರೆ. ಮೋರ್ನೆ ಮೊರ್ಕೆಲ್ ಲಕ್ನೋ ಸೂಪರ್ ಜೈಂಟ್ಸ್‌ನಿಂದ ಬಂದವರು. ಕೆಕೆಆರ್​​​ನಲ್ಲಿ ಅಭಿಷೇಕ್ ನಾಯರ್ ಗಂಭೀರ್ ಜೊತೆಗಿದ್ದರು. ಇವರು ಯಾರು ಗಂಭೀರ್​​ಗೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ ಎಂದರು.
ಹೀನಾಯ ಸೋಲು
ಗಂಭೀರ್ ಕೋಚಿಂಗ್‌ನಲ್ಲಿ ಟೀಮ್ ಇಂಡಿಯಾ ಬ್ಯಾಕ್​ ಟು ಬ್ಯಾಕ್​ ಸೋಲು ಕಂಡಿದೆ. ಶ್ರೀಲಂಕಾ ವಿರುದ್ಧ ಏಕದಿನ ಸರಣಿಯನ್ನು 0-2 ಅಂತರದಿಂದ ಸೋತಿತ್ತು. ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು 0-3 ಅಂತರದಿಂದ ಸೋಲನ್ನು ಎದುರಿಸಿತ್ತು. ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲೂ ಭಾರತ 1-3 ಅಂತರದಲ್ಲಿ ಸೋಲು ಕಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us