Advertisment

ಜಸ್ಟ್​ 16 ಎಸೆತಗಳಲ್ಲಿ 4 ಸಿಕ್ಸರ್​.. 42 ರನ್ ಚಚ್ಚಿದ ಬಾಂಡಗೆ; RCB ವಿರುದ್ಧ ಭುಗಿಲೆದ್ದ ಆಕ್ರೋಶ

author-image
Ganesh
Updated On
ಜಸ್ಟ್​ 16 ಎಸೆತಗಳಲ್ಲಿ 4 ಸಿಕ್ಸರ್​.. 42 ರನ್ ಚಚ್ಚಿದ ಬಾಂಡಗೆ; RCB ವಿರುದ್ಧ ಭುಗಿಲೆದ್ದ ಆಕ್ರೋಶ
Advertisment
  • ಮನೋಜ್​​ ಸಿಡಿಲಬ್ಬರದ ಬ್ಯಾಟಿಂಗ್.. RCB ಎದುರು ಸಿಡಿದ ಫ್ಯಾನ್ಸ್​
  • ಲೋವರ್ ಆರ್ಡರ್​ನ ಗೇಮ್​​​​​​​​​​​​​ ಚೇಂಜರ್ ಮನೋಜ್ ಬಾಂಡ!
  • ಕೆಟ್ಟ ಮೇಲಾದರೂ ಆರ್​ಸಿಬಿಗೆ ಬರುತ್ತಾ ಬುದ್ಧಿ ಎಂದು ಪ್ರಶ್ನೆ

ಮಹಾರಾಜ ಟಿ20 ಟೂರ್ನಿಯಲ್ಲಿ ಕರ್ನಾಟಕದ ಆಲ್​​ರೌಂಡರ್​ ಮನೋಜ್​ ಬಾಂಡಗೆ ಆರ್ಭಟಿಸ್ತಿದ್ದಾರೆ. KSCA ನಡೆಸ್ತಿರುವ ಟೂರ್ನಿಯಲ್ಲಿ ಮನೋಜ್​ನ ಅದ್ಭುತ ಆಟದಿಂದ ಮಿಂಚುತ್ತಿದ್ದರೆ ಫ್ಯಾನ್ಸ್​ ಆರ್​​ಸಿಬಿ ಮ್ಯಾನೇಜ್​ಮೆಂಟ್​ ಉಗಿದು ಉಪ್ಪಿನಕಾಯಿ ಹಾಕ್ತಿದ್ದಾರೆ. ಆರ್​ಸಿಬಿ ಮ್ಯಾನೇಜ್​ಮೆಂಟ್​ ವಿರುದ್ಧ ಫ್ಯಾನ್ಸ್ ಸಿಡಿದೆದ್ದಿರೋದ್ಯಾಕೆ?

Advertisment

ಸೀಸನ್​-17ರ ಇಂಡಿಯನ್ ಪ್ರಿಮೀಯರ್ ಲೀಗ್ ಮುಗೀದು ಮೂರು ತಿಂಗಳೇ ಕಳೆದಿದೆ. ಸೀಸನ್-18ರ ಐಪಿಎಲ್​​ ಸಿದ್ದತೆ ಜೋರಾಗಿದೆ. ಇದಕ್ಕಾಗಿ ರಿಟೈನ್, ರಿಲೀಸ್ ಲೆಕ್ಕಾಚಾರದಲ್ಲಿ ಬ್ಯುಸಿಯಾಗಿರುವ ಟೀಮ್ಸ್, ಮೆಗಾ ಹರಾಜಿನಲ್ಲಿ ಯಾರನ್ನ ಖರೀದಿಸಬೇಕು ಅನ್ನೋ ಪ್ಲಾನ್​ ರೂಪಿಸ್ತಿವೆ. ಈ ನಡುವೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಎದುರು ಫ್ಯಾನ್ಸ್​ ಸಿಡಿದೆದ್ದಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೂರನೇ ಆವೃತ್ತಿಯ ಮಹಾರಾಜ ಟ್ರೋಫಿ ಭರದಿಂದ ಸಾಗ್ತಿದೆ. ಫ್ಯಾನ್ಸ್​ಗೂ ಸಖತ್​​ ಕಿಕ್ ನೀಡ್ತಿದೆ. ಇದೇ ಮಹಾರಾಜ ಟ್ರೋಫಿಯಿಂದಲೇ ಆರ್​ಸಿಬಿ ಫ್ರಾಂಚೈಸಿ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದೆ. ಆ ಒಬ್ಬ ಆಟಗಾರನ ಸಿಡಿಲಬ್ಬರದ ಬ್ಯಾಟಿಂಗ್ ಇದಕ್ಕೆ ಕಾರಣವಾಗಿದೆ.

ಇದನ್ನೂ ಓದಿ:‘ಅವಕಾಶ ಸಿಕ್ಕರೆ..’ RCB ಅಭಿಮಾನಿಗಳ ನಿರೀಕ್ಷೆ ಹೆಚ್ಚು ಮಾಡಿದ ಮನಿಷ್ ಪಾಂಡೆ

ಆರ್​ಸಿಬಿ ಎದುರು ಸಿಡಿದ ಫ್ಯಾನ್ಸ್​!
ಪ್ರಸಕ್ತ ಮಹಾರಾಜ ಟ್ರೋಫಿಯಲ್ಲಿ ಝೇಂಕರಿಸುತ್ತಿರುವ ಹೆಸರು ಮನೋಜ್ ಬಾಂಡಗೆ.. ಮೈಸೂರು ವಾರಿಯರ್ಸ್ ಪರ ಈ ಯಂಗ್ ಗನ್​ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾರೆ. ಶಿವಮೊಗ್ಗ ಎದುರಿನ ಮೊದಲ ಪಂದ್ಯದಲ್ಲಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗಿಳಿದು ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ರು. ಜಸ್ಟ್​ 16 ಎಸೆತಗಳಲ್ಲೇ 4 ಸಿಕ್ಸರ್​ ಒಳಗೊಂಡ ಅಜೇಯ 42 ರನ್ ಸಿಡಿಸಿದ್ರು. 262.50 ಭಯಾನಕ ಸ್ಟ್ರೈಕ್​ರೇಟ್ನಲ್ಲಿ ಆಡಿದ್ರು. ಬೆಂಗಳೂರು ಬ್ಲಾಸ್ಟರ್ಸ್ ಎದುರಿನ 2ನೇ ಪಂದ್ಯದಲ್ಲೂ ಅದೇ ಬ್ಯಾಟಿಂಗ್ ಧಮಾಕ ತೋರಿದ್ರು. ಈ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​​​ಗೆ ಇಳಿದ ಬಾಂಡಗೆ 33 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್​ ಒಳಗೊಂಡ 58 ರನ್ ಚಚ್ಚಿದರು.
ಆರ್​ಸಿಬಿ ಆಟಗಾರನ ಈ ಪವರ್ ಫುಲ್​ ಬ್ಯಾಟಿಂಗ್​ಗೆ ಮನಸೋತ ಫ್ಯಾನ್ಸ್​, ಇದೀಗ ಆರ್​ಸಿಬಿ ವಿರುದ್ಧ ಸಿಡಿದೆದ್ದಿದ್ದಾರೆ. ಇಂತಾ ಅದ್ಭುತ ಆಟಗಾರನನ್ನ ಎರಡು ಸೀಸನ್​ಗಳ ಕಾಲ ಆರ್​​ಸಿಬಿ ಫ್ರಾಂಚೈಸಿ ನಡೆಸಿಕೊಂಡ ರೀತಿಗೆ ಫ್ಯಾನ್ಸ್​ ಕಿಡಿಕಾರ್ತಿದ್ದಾರೆ.

Advertisment

ಈ ಹಿಂದಿನ ಸೀಸನ್​ನಲ್ಲೂ ಬಾಂಡಗೆ ಬೊಂಬಾಟ್
ಮನೋಜ್ ಬಾಂಡಗೆ ಜಸ್ಟ್ ಈ ಸೀಸನ್​ನಲ್ಲಿ ಮಾತ್ರವೇ ಪ್ರದರ್ಶನ ನೀಡಿಲ್ಲ. 2023ರ ಮಹಾರಾಜ ಟ್ರೋಫಿಯಲ್ಲೂ ಸಖತ್ ಆಟವಾಡಿದ್ರು. 192.94ರ ಸ್ಟ್ರೈಕ್​​ರೇಟ್​ನಲ್ಲಿ ಬ್ಯಾಟ್ ಬೀಸಿದ್ದ ಮನೋಜ್, 164 ರನ್​ ಸಿಡಿಸಿದ್ರು. ಆರ್​ಸಿಬಿಯ ನೆಟ್ಸ್​ ಸೆಷನ್ ಹಾಗೂ inter squad ಮ್ಯಾಚ್​​ಗಳಲ್ಲಿ ಸಾಲಿಟ್ ಆಟವಾಡಿದ್ದರು. ಆದರೂ ಮನೋಜ್​ ಬಾಂಡೆಗೆ ಆರ್​​ಸಿಬಿ ಪರ ಬೆಂಚ್ ಬಿಸಿ ಮಾಡಲಷ್ಟೇ ಫಿಕ್ಸ್​ ಆದರು. ಇದೀಗ ಬಾಂಡಗೆ ಅಬ್ಬರದ ಆಟದ ಬಳಿಕ ಟೀಮ್​ ಇಂಡಿಯಾ ಮಾಜಿ ಆಟಗಾರ ದೊಡ್ಡ ಗಣೇಶ್, ಆರ್​ಸಿಬಿ ನಡೆಯನ್ನ ಪ್ರಶ್ನಿಸಿದ್ದಾರೆ.

ಮತ್ತೊಂದು ಫ್ರಾಂಚೈಸಿ ಅವಕಾಶ ನೀಡೋ ನಂಬಿಕೆ ಇದೆ
ಮನೋಜ್ ಬಾಂಡಗೆ ಬಗ್ಗೆ 2 ಸೀಸನ್​​ಗಳಿಂದ ನಾನು ಹೇಳುತ್ತಲೇ ಇದ್ದೇನೆ. ಆರ್​ಸಿಬಿ 2 ಸೀಸನ್​​ಗಳಿಂದ ಬೆಂಚ್​ಗೆ ಸೀಮಿತಗೊಳಿಸಿತು. ಒಂದೇ ಒಂದು ಪಂದ್ಯದಲ್ಲೂ ಅವಕಾಶ ನೀಡಲಿಲ್ಲ. ಕನಿಷ್ಠ ಪಕ್ಷ ಇಂಪ್ಯಾಕ್ಟ್​ ಪ್ಲೇಯರ್ ಆಗಿಯೂ ಆಡಿಸಲಿಲ್ಲ. ಮನೋಜ್​ ಓರ್ವ ಕ್ಲೀನ್ ಹಿಟ್ಟಿಂಗ್ ಸ್ಟ್ರೈಕರ್. ಮತ್ತೊಂದು ಫ್ರಾಂಚೈಸಿ ಆತನಿಗೆ ಅವಕಾಶ ನೀಡುವ ನಂಬಿಕೆ ನನಗೆ ಇದೆ-ದೊಡ್ಡ ಗಣೇಶ್, ಮಾಜಿ ಕ್ರಿಕೆಟರ್
ದೊಡ್ಡ ಗಣೇಶ್​​ರ ಆಕ್ರೋಶದ ಮಾತುಗಳ ಹಿಂದೆ ನ್ಯಾಯವಿದೆ. ಸತತ ಸೋಲುಗಲನ್ನ ಕಂಡರೂ ಲೋಕಲ್ ಪ್ಲೇಯರ್​ಗೆ ಅವಕಾಶ ನೀಡೋ ಒಂದೇ ಒಂದು ಪ್ರಯತ್ನ ಆರ್​ಸಿಬಿ ಮಾಡಲಿಲ್ಲ. ದೇಶಿ ಕ್ರಿಕೆಟ್​ನಲ್ಲಿ ಅಷ್ಟೇನೂ ಸದ್ದು ಮಾಡದ ಆಟಗಾರರಿಗೆ ಕಳೆದ 2 ಆವೃತ್ತಿಗಳಲ್ಲಿ ಚಾನ್ಸ್ ನೀಡಿತು. ಬಾಂಡಗೆ ಟ್ಯಾಲೆಂಟ್​ನ​ ತಂಡ ಅರ್ಥ ಮಾಡಿಕೊಳ್ಳಲಿಲ್ಲ.

ಇದನ್ನೂ ಓದಿ:ಕಾರ್ತಿಕ್ ಬದುಕಲ್ಲಿ ಒಂದು ರಾತ್ರಿ ನಡೆದಿತ್ತು ಭಯಾನಕ ಅಚ್ಚರಿ.. ಬೆಚ್ಚಿಬಿದ್ದಿದ್ದ ಸ್ಟೋರಿ ರಿವೀಲ್..!
publive-image

Advertisment

ಲೋವರ್ ಆರ್ಡರ್​ನ ಗೇಮ್​​​​​​​​​​​​​ ಚೇಂಜರ್ ಮನೋಜ್!
ಮನೋಜ್ ಬಾಂಡೆಗೆ ಪವರ್ ಹಿಟ್ಟರ್​ ಮಾತ್ರವಲ್ಲ. ರೈಟ್ ಹ್ಯಾಂಡ್ ಮೀಡಿಯಂ ಪೇಸರ್ ಕೂಡ ಹೌದು.! ಬಿಗ್ ಶಾಟ್ಸ್​ ಹೊಡೆಯಬಲ್ಲ ಕೆಪಾಸಿಟಿ ಹೊಂದಿದ್ದ ಮನೋಜ್, ರಿಂಕು ಸಿಂಗ್​​ ಮಾದರಿಯಲ್ಲೇ ಗೇಮ್ ಚೇಂಜರ್​​. ಫಿಯರ್ ಲೆಸ್ ಬ್ಯಾಟಿಂಗ್​ಗೆ ಹೆಸರುವಾಸಿಯಾಗಿರೋ ಈ ಕನ್ನಡಿಗನಿಗೆ, ಆರ್​ಸಿಬಿಯ ಮ್ಯಾಚ್ ವಿನ್ನರ್ ಆಗಬಲ್ಲ ತಾಕತ್ತು ಇದೆ. ಆದ್ರೆ, ಆರ್​​ಸಿಬಿ ಮ್ಯಾನೇಜ್​ಮೆಂಟ್​ ಮಾತ್ರ ಅವಕಾಶ ನೀಡೋ ಪ್ರಯತ್ನ ಮಾಡಲಿಲ್ಲ.

ಒಟ್ನಲ್ಲಿ, ಪ್ರತಿ ಸೀಸನ್​​ನಲ್ಲೂ ಒಂದಿಲ್ಲೊಂದು ತಪ್ಪು ಮಾಡೋ ಆರ್​ಸಿಬಿ, ಮುಂದಿನ ಸೀಸನ್​ನಲ್ಲಾದರೂ ಎಚ್ಚರಿಕೆ ಹೆಜ್ಜೆ ಇಡಬೇಕಿದೆ. ಟ್ಯಾಲೆಂಟೆಡ್​ ಆಟಗಾರರನ್ನ ಬಿಟ್ಟು, ಸ್ಟಾರ್​ ಗಿರಿಯ ಹಿಂದೆ ಹೋದ್ರೆ 17 ವರ್ಷಗಳ ಇತಿಹಾಸವೇ ಸೀಸನ್​​ 18ರಲ್ಲೂ ರಿಪೀಟ್ ಆಗೋದು ಕನ್ಫರ್ಮ್..

ಇದನ್ನೂ ಓದಿ:ಆರ್​ಸಿಬಿ ಸೇರುವ ಬಗ್ಗೆ ಸರ್ಪ್ರೈಸ್ ಹೇಳಿಕೆ ನೀಡಿದ ರಿಂಕು ಸಿಂಗ್.. KKRನಲ್ಲಿ ಏನಾಯ್ತು..!

Advertisment

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment