newsfirstkannada.com

ಕೆಲವೇ ಗಂಟೆಗಳಲ್ಲಿ ದೇಶಕ್ಕೆ ಮುಂಗಾರು ಮಳೆ ಆಗಮನ.. ಈ ಎಲ್ಲಾ ರಾಜ್ಯಗಳಲ್ಲಿ ಮಳೆ ಮಳೆ..!

Share :

Published May 30, 2024 at 9:09am

  ನೈಋತ್ಯ ಮಾನ್ಸೂನ್ ಅಪ್ಪಳಿಸಲು ಕೌಂಟ್​​ಡೌನ್

  ಕರ್ನಾಟಕದಲ್ಲಿ ಯಾವಾಗ ಬರುತ್ತೆ ಮುಂಗಾರು ಮಳೆ

  ಈಶಾನ್ಯ ರಾಜ್ಯದ ಯಾವೆಲ್ಲ ಜಿಲ್ಲೆಗಳಲ್ಲಿ ಮುಂಗಾರು ಆರಂಭ?

ಕೇರಳದ ಕರಾವಳಿ ಮತ್ತು ಈಶಾನ್ಯದ ಕೆಲವು ಭಾಗಗಳಲ್ಲಿ ನೈಋತ್ಯ ಮಾನ್ಸೂನ್ ಅಪ್ಪಳಿಸಲಿದ್ದು, ಕೆಲವೇ ಗಂಟೆಗಳಲ್ಲಿ ಮುಂಗಾರು ಆಗಮಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮುಂದಿನ 24 ಗಂಟೆಗಳಲ್ಲಿ ಕೇರಳದಲ್ಲಿ ನೈಋತ್ಯ ಮಾನ್ಸೂನ್ ಶುರುವಾಗಲಿದೆ. ಅದಕ್ಕೆ ಪೂರಕ ವಾತಾವರಣ ಇದ್ದು, ಮೇ 31 ರೊಳಗೆ ಕೇರಳಕ್ಕೆ ಮುಂಗಾರು ಮಳೆ ಎಂಟ್ರಿಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇನ್ನು ಕರ್ನಾಟಕದಲ್ಲಿ ಜೂನ್ 5 ರಿಂದ ಮುಂಗಾರು ಮಳೆ ಆರಂಭವಾಗಲಿದೆ.

ಇದನ್ನೂ ಓದಿ:Pushpa 2: The Rule ಸಿನಿಮಾಗೆ ದೊಡ್ಡ ಸಂಕಷ್ಟ.. ರಿಲೀಸ್​ಗೂ ಮುನ್ನವೇ ಅನುಮಾನ ಶುರು..!

ಮುಂಗಾರು ಬೇಗ ಬರಲು ಕಾರಣವೇನು?
ಕಳೆದ ಭಾನುವಾರ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಮೂಲಕ ರೆಮಲ್ ಚಂಡಮಾರುತ ಹಾದು ಹೋಗಿದೆ. ಪರಿಣಾಮ ಬಂಗಾಳ ಕೊಲ್ಲಿಯ ಕಡೆಗೆ ಮಾನ್ಸೂನ್ ಹರಿವು ಎಳೆದಿದೆ. ಇದರಿಂದ ಮುಂಗಾರು ಮಳೆ ಬೇಗ ಬರಲು ಕಾರಣವಾಗಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಹವಾಮಾನ ಇಲಾಖೆ ನೀಡಿರುವ ಅಂಕಿ-ಅಂಶಗಳ ಪ್ರಕಾರ.. ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಭಾರೀ ಮಳೆಯಾಗುತ್ತಿದೆ. ಮೇ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

ಈಶಾನ್ಯ ರಾಜ್ಯದಲ್ಲಿ ಮುಂಗಾರು ಯಾವಾಗ?
ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯ, ಮಿಜೋರಾಂ, ಮಣಿಪುರ ಮತ್ತು ಅಸ್ಸಾಂನಲ್ಲಿ ಜೂನ್ ಐದರಿಂದ ಮುಂಗಾರು ಮಳೆ ಶುರುವಾಗಲಿದೆ. ಈ ಅವಧಿಯಲ್ಲಿ ದಕ್ಷಿಣ ಅರೇಬಿಯನ್ ಸಮುದ್ರದ ಕೆಲವು ಭಾಗಗಳಾದ ಮಾಲ್ಡೀವ್ಸ್​, ಕೊಮೊರಿನ್, ಲಕ್ಷದ್ವೀಪ, ಮಧ್ಯ ಬಂಗಾಳ ಕೊಲ್ಲಿ, ಈಶಾನ್ಯ ಬಂಗಾಳ ಕೊಲ್ಲಿ ಮತ್ತು ಆಗ್ನೇಯ ಭಾರತದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ.

ಇದನ್ನೂ ಓದಿ:ಒಂದು ಫೋಟೋ ಹಲವು ಅರ್ಥ.. KL ರಾಹುಲ್ ಸೈಲೆಂಟ್​ ಅಲ್ಲೇ ಟಕ್ಕರ್ ಕೊಟ್ರಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೆಲವೇ ಗಂಟೆಗಳಲ್ಲಿ ದೇಶಕ್ಕೆ ಮುಂಗಾರು ಮಳೆ ಆಗಮನ.. ಈ ಎಲ್ಲಾ ರಾಜ್ಯಗಳಲ್ಲಿ ಮಳೆ ಮಳೆ..!

https://newsfirstlive.com/wp-content/uploads/2024/05/RAIN-15.jpg

Load More