ಬರ್ತ್​ ಡೇ ಅಂತಿದ್ದೀರಿ.. ಅಪ್ಪ ಅಮ್ಮ ಬಂದಿಲ್ಲ ಏಕೆ? ಮೊಮ್ಮಗಳ ಮಾತು ಅಜ್ಜ ಅಜ್ಜಿಯನ್ನ ಅಕ್ಷರಶಃ ಅಳಿಸುತ್ತಿದೆ!

author-image
admin
Updated On
ಬರ್ತ್​ ಡೇ ಅಂತಿದ್ದೀರಿ.. ಅಪ್ಪ ಅಮ್ಮ ಬಂದಿಲ್ಲ ಏಕೆ? ಮೊಮ್ಮಗಳ ಮಾತು ಅಜ್ಜ ಅಜ್ಜಿಯನ್ನ ಅಕ್ಷರಶಃ ಅಳಿಸುತ್ತಿದೆ!
Advertisment
  • "ಅಜ್ಜಿ, ಅಮ್ಮ ಅಪ್ಪ ಎಲ್ಲಿ? ಏಕೆ ಇನ್ನೂ ಬಂದಿಲ್ಲ" ಅಂತಾಳೆ ಮೊಮ್ಮಗಳು
  • 3 ವರ್ಷದ ಮೊಮ್ಮಗಳು ಸುಶ್ಮಿತಾ ಮಾತು.. ಅಜ್ಜ ಅಜ್ಜಿಯನ್ನ ಅಳಿಸುತ್ತಿದೆ
  • ಹೊಸ ಬಟ್ಟೆ ತೊಟ್ಟಿದ್ರೂ, ಅಪ್ಪ ಅಮ್ಮ ಕಾಣದ್ದಕ್ಕೆ ಕಂಗಾಲಾಗಿದ್ದಾಳೆ ಸುಶ್ಮಿತಾ

ಕೈಯಲ್ಲೊಂದು ಆಟದ ಸಾಮಾನು ಇಟ್ಟುಕೊಂಡು ಪಿಳಿ ಪಿಳಿ ಕಣ್ಣು ಬಿಡುತ್ತಿರೋ ಈ ಕಂದಮ್ಮನಿಗೆ ಏನೂ ಗೊತ್ತಾಗುತ್ತಿಲ್ಲ. ಅಜ್ಜ ಅಜ್ಜಿ ಹೊಸ ಬಟ್ಟೆ ತೊಡಿಸಿದ್ದಾರೆ. ಇವತ್ತು ನಿನ್ನ ಬರ್ತ್​​ ಡೇ ಸುಶ್ಮಿತಾ ಅಂತ ಹೇಳಿದ್ದಾರೆ. ಆದರೆ, ಎಲ್ಲರ ಕಣ್ಣಾಲಿಗಳಲ್ಲೂ ನೀರು ಜಿನುಗುತ್ತಿದೆ. "ಅಜ್ಜಿ, ಅಮ್ಮ ಎಲ್ಲಿ?" "ಅಜ್ಜಿ, ಅಪ್ಪ ಯಾಕೆ ಇನ್ನೂ ಬಂದಿಲ್ಲ?" ಹೀಗೆ ಪದೇ ಪದೇ ಪ್ರಶ್ನಿಸುತ್ತಿರೋ ಮೊಮ್ಮಗಳ ಮಾತಿಗೆ ಉತ್ತರವೇ ಇಲ್ಲದೇ ಬಿಕ್ಕಳಿಸುತ್ತಿದ್ದಾರೆ ವೃದ್ಧ ದಂಪತಿ.

ಬರ್ತ್​​ ಡೇ ಬಟ್ಟೆ ತೊಟ್ಟಿದ್ದಾಳೆ.. ಅಪ್ಪ ಅಮ್ಮನೇ ಕಾಣಿಸುತ್ತಿಲ್ಲ!
ಮೂರು ವರ್ಷದ ಈ ಕಂದಮ್ಮನ ಹೆಸರು ಸುಶ್ಮಿತಾ.. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಅದೋನಿ ತಾಲೂಕಿನ ಕುಪ್ಪಗಲ್ ಗ್ರಾಮದ ಈರಣ್ಣ, ಆದಿಲಕ್ಷ್ಮಿ ದಂಪತಿಯ ಒಬ್ಬಳೇ ಮಗಳು. ಇದೇ ಮಾರ್ಚ್​ 12 ಮುದ್ದು ಬಂಗಾರಿ ಸುಶ್ಮಿತಾಳ ಬರ್ತ್​​ ಡೇ ಇತ್ತು. ಮನೆಯಲ್ಲಿ ಸಂಭ್ರಮವಿಲ್ಲ.. ಎಲ್ಲರ ಮುಖದಲ್ಲೂ ನೋವಿದೆ. ಅದ್ಯಾವುದೂ ಗೊತ್ತಿರದ ಸುಶ್ಮಿತಾ ಪದೇ ಪದೇ ಅಜ್ಜ ಅಜ್ಜಿ ಬಳಿ ಕೇಳ್ತಿರೋದು ಒಂದೇ ಒಂದು. ಅದುವೇ ಅಪ್ಪ ಎಲ್ಲಿ? ಅಮ್ಮ ಎಲ್ಲಿ? ಉತ್ತರ ನೀಡೋದಕ್ಕೆ ಆಗದೇ ಅಜ್ಜ ಅಜ್ಜಿ ಅಕ್ಷರಶಃ ಹಣೆ ಹಣೆ ಚಚ್ಚಿಕೊಂಡು ಬಿಕ್ಕಳಿಸುತ್ತಿದ್ದಾರೆ. ಅಪ್ಪ ಅಮ್ಮನ ಮುಖ ನೋಡದೇ ಈ ಮುದ್ದು ಬಂಗಾರಿ ವಿಲವಿಲ ಒದ್ದಾಡುತ್ತಿದ್ದಾಳೆ.

ಇದನ್ನೂ ಓದಿ: ಮಂತ್ರಾಲಯಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ ಭೀಕರ ಅಪಘಾತ.. ಸ್ಥಳದಲ್ಲೇ 5 ಮಂದಿ ದುರ್ಮರಣ 

ಇದನ್ನೂ ಓದಿ: ಮಹಿಳೆಯರೇ ಎಚ್ಚರ.. ಘಮ ಘಮಿಸುವ ಈ ಮಲ್ಲಿಗೆ ಮುಡಿದರೆ ನಿಮ್ಮ ಆರೋಗ್ಯಕ್ಕೆ 5 ಅಪಾಯ! 

ಅದೊಂದು ಬಸ್​​ ಈ ಕಂದಮ್ಮನ ಖುಷಿಯನ್ನೇ ನುಂಗಿ ಹಾಕಿದೆ!
ಇದೇ ಮಾರ್ಚ್​ 11ರ ಮಂಗಳವಾರ ಸುಶ್ಮಿತಾಳ ಅಮ್ಮ ಆದಿಲಕ್ಷ್ಮಿ, ಅಪ್ಪ ಈರಣ್ಣ ಆಂಧ್ರಪ್ರದೇಶದ ಆದೋನಿ ತಾಲೂಕಿನ ಪಾಂಡವಗಲ ಗ್ರಾಮದ ಬಳಿ ಬೈಕ್​​ನಲ್ಲಿ ಬರ್ತಿದ್ರು. ಕೆಕೆಆರ್​ಟಿಸಿ ಬಸ್ ಗಂಗಾವತಿಯಿಂದ ಮಂತ್ರಾಲಯಕ್ಕೆ ತೆರಳುತ್ತಿತ್ತು. ಬೈಕ್‌ನಲ್ಲಿ ಕುಪ್ಪಗಲ್ಲು ಗ್ರಾಮದ ಕಡೆ ಹೊರಟಿದ್ದ ಈರಣ್ಣ ಕುಟುಂಬ ಹೋಗುತ್ತಿತ್ತು. ಈ ವೇಳೆ ಸಾರಿಗೆ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಬೈಕ್​ಗಳಿಗೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಆದಿಲಕ್ಷ್ಮಿ, ಈರಣ್ಣ ದಂಪತಿ ಅಸುನೀಗಿದ್ರು. ಆದರೇ, ಮೂರು ವರ್ಷದ ಸುಶ್ಮಿತಾಗೆ ಇದ್ಯಾವುದೂ ಅರ್ಥವಾಗುತ್ತಿಲ್ಲ. ಅಪ್ಪ ಅಮ್ಮ ಸತ್ತ ಮಾರನೇ ದಿನವೇ ಹುಟ್ಟುಹಬ್ಬ. ದಿನವೂ ಎತ್ತಿ ಮುದ್ದಾಡುತ್ತಿದ್ದ ಅಮ್ಮ ಕಾಣ್ತಿಲ್ಲ. ದಿನಕ್ಕೊಂದು ತಿನಿಸು ಕೊಡಿಸುತ್ತಾ ಊರೆಲ್ಲಾ ಮೆರವಣಿಗೆ ಮಾಡುತ್ತಿದ್ದ ಅಪ್ಪ ಕಾಣುತ್ತಿಲ್ಲ. ಅಜ್ಜ ಅಜ್ಜಿಗೆ ಗೊತ್ತಿದ್ರೂ ಮೊಮ್ಮಗಳಿಗೆ ಅರ್ಥ ಮಾಡಿಸೋಕೆ ಆಗುತ್ತಿಲ್ಲ. ನಿಜಕ್ಕೂ ಸುಶ್ಮಿತಾ ಅನ್ನೋ ಈ ಬಂಗಾರಿ ಬಾಳಿಗೆ ಬಸ್​​ ಕೊಳ್ಳಿ ಇಟ್ಟಿದೆ. ಇವತ್ತಲ್ಲ, ನಾಳೆ ಬಂದು ಎತ್ತಿಕೊಂಡು ಮುದ್ದಾಡುತ್ತಾರೆ ಅಂತ ಕಾಯುತ್ತಿದೆ ಈ ಬಂಗಾರಿಯ ಕಣ್ಣುಗಳು.

ವರದಿ: ಬಸವರಾಜು ಸಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment