ಮಂತ್ರಾಲಯ ಹುಂಡಿ ಎಣಿಕೆ; ಕೇವಲ 20 ದಿನದಲ್ಲಿ ಹರಿದು ಬಂದ ಕೋಟಿ ಕೋಟಿ ಹಣ, ಚಿನ್ನ, ಬೆಳ್ಳಿ

author-image
Bheemappa
Updated On
ಮಂತ್ರಾಲಯ ಹುಂಡಿ ಎಣಿಕೆ; ಕೇವಲ 20 ದಿನದಲ್ಲಿ ಹರಿದು ಬಂದ ಕೋಟಿ ಕೋಟಿ ಹಣ, ಚಿನ್ನ, ಬೆಳ್ಳಿ
Advertisment
  • ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ ಹುಂಡಿ ಎಣಿಕೆ
  • ಭಕ್ತರ ಕಲ್ಪವೃಕ್ಷ ಮಂತ್ರಾಲಯದ ರಾಘವೇಂದ್ರ ಸ್ವಾಮಿಯ ಮಠ
  • ಮಂತ್ರಾಲಯ ಹುಂಡಿ; 20 ದಿನದಲ್ಲಿ ಎಷ್ಟು ಕೋಟಿ ಹಣ ಸಂಗ್ರಹ?

ರಾಯಚೂರು: ಭಕ್ತರ ಕಲ್ಪವೃಕ್ಷ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಯ ಮಠಕ್ಕೆ ರಾಜ್ಯ, ಅಂತಾರಾಜ್ಯ, ದೇಶ-ವಿದೇಶಗಳಿಂದಲೂ ಸಾಕಷ್ಟು ಭಕ್ತರು ಆಗಮಿಸಿ ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯುತ್ತಾರೆ. ಅದರಂತೆ ರಾಯರ ಮಠದ ಹುಂಡಿ ಎಣಿಕೆ ಕಾರ್ಯ ಮಾಡಲಾಗಿದ್ದು ಕೇವಲ 20 ದಿನಗಳಲ್ಲಿ ಕೋಟಿ ಕೋಟಿ ಹಣ, ಚಿನ್ನ ಹಾಗೂ ಬೆಳ್ಳಿ ಭಕ್ತರ ಕಾಣಿಕೆಯಿಂದ ಬಂದಿದೆ.

ಶ್ರೀ ರಾಘವೇಂದ್ರ ಸ್ವಾಮಿಯ ಮಠಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದು, ಕಾಣಿಕೆಯಾಗಿ ಕೋಟಿಗಟ್ಟಲೆ ರೂಪಾಯಿ ಮತ್ತು ಚಿನ್ನಾಭರಣವನ್ನು ಸಮರ್ಪಿಸಿದ್ದಾರೆ. ಶ್ರೀಮಠದ ಹುಂಡಿ ಎಣಿಕೆ ಕಾರ್ಯದಲ್ಲಿ ನೂರಾರು ಜನರು ಭಾಗಿಯಾಗಿದ್ದರು. ಸಾಲಾಗಿ ಕುಳಿತು ಎಲ್ಲರೂ ಹುಂಡಿಗೆ ಬಂದಿದ್ದ ಹಣ, ಚಿನ್ನ ಹಾಗೂ ಬೆಳ್ಳಿಯನ್ನು ಎಣಿಕೆ ಮಾಡಿದ್ದಾರೆ.

ಇದನ್ನೂ ಓದಿ: ಮನೆ ಕಟ್ಟಬೇಕಾದ್ರೆ ಬೇಸ್​ಮೆಂಟ್ ಮಾಡಬಾರದು- ಡಿಸಿಎಂ ಡಿ.ಕೆ ಶಿವಕುಮಾರ್

publive-image

ಮಂತ್ರಾಲಯ ಶ್ರೀ‌ ರಾಘವೇಂದ್ರ ಸ್ವಾಮಿ ಮಠದಲ್ಲಿ ಹುಂಡಿ ಎಣಿಕೆ ಕಾರ್ಯದಲ್ಲಿ ಮೇ ತಿಂಗಳ 20 ದಿನಗಳಲ್ಲಿ ಬರೋಬ್ಬರಿ 3 ಕೋಟಿ 79 ಲಕ್ಷದ 10 ಸಾವಿರದ 455 ರೂಪಾಯಿ ಸಂಗ್ರವಾಗಿದೆ. ಇನ್ನೂ 74 ಗ್ರಾಂ​ ಚಿನ್ನ ಹಾಗೂ 1,830 ಗ್ರಾಂ ಬೆಳ್ಳಿ ಕಾಣಿಕೆ ಸಹ ಬಂದಿದೆ. ಮೊದಲಿನಿಂದಲೂ ರಾಯರ ಮಠದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿ ಇರುತ್ತದೆ. ದಿನಕ್ಕೆ ಸವಿರಾರು ಭಕ್ತರು ಗುರುರಾಯರ ದರ್ಶನ ಪಡೆಯುತ್ತಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment