Advertisment

‘ಮಂತ್ರಾಲಯ ರಾಯರ ಮಠದ ಸ್ಥಳ ಕೊಟ್ಟಿದ್ದು ನವಾಬರು’ -ವಕ್ಫ್​ ವಿವಾದದಲ್ಲಿ ಸಿಎಂ ಇಬ್ರಾಹಿಂ ಹೊಸ ಪುರಾಣ

author-image
Bheemappa
Updated On
‘ಮಂತ್ರಾಲಯ ರಾಯರ ಮಠದ ಸ್ಥಳ ಕೊಟ್ಟಿದ್ದು ನವಾಬರು’ -ವಕ್ಫ್​ ವಿವಾದದಲ್ಲಿ ಸಿಎಂ ಇಬ್ರಾಹಿಂ ಹೊಸ ಪುರಾಣ
Advertisment
  • ಒಕ್ಕಲಿಗ ಸಮುದಾಯದ ಕ್ಷಮೆ ಕೇಳಿದ ಸಿ.ಎಂ ಇಬ್ರಾಹಿಂ, ಯಾಕೆ..?
  • ದಳದಿಂದ ದಂಗೆ ಎದ್ದು ಕಳೆದು ಹೋಗಿದ್ದ ಮಾಜಿ ಸಚಿವ ಇಬ್ರಾಹಿಂ
  • ಮಂತ್ರಾಲಯ ಜಾಗ ನವಾಬರು ಕೊಟ್ಟಿದ್ದು ಎಂದ ಮಾಜಿ ಸಚಿವ

ರೈತರ ಪಹಣಿ, ಹಿಂದೂ ದೇಗುಲ, ಶಾಲೆಗಳ ಜಾಗವೆಲ್ಲ ವಕ್ಫ್ ಆಸ್ತಿ ಎಂದು ಹೆಸರು ನಮೂದಾಗಿ ಭಾರೀ ವಿವಾದ ಸೃಷ್ಟಿಸಿದೆ. ಈ ಬೆನ್ನಲ್ಲೇ ವಕ್ಫ್ ವಿವಾದ ಮಂತ್ರಾಲಯಕ್ಕೂ ತಟ್ಟಿದೆ. ಮಂತ್ರಾಲಯ ಜಾಗ ನವಾಬರು ಕೊಟ್ಟಿದ್ದು ಎಂಬ ಮಾಜಿ ಸಚಿವ ಸಿಎಂ ಇಬ್ರಾಹಿಂ ಅವರ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.

Advertisment

ವಕ್ಫ್​​.. ಎಲ್ಲೋದ್ರು ನಮ್ಮ ಜಮೀನಲ್ಲೂ ಅದೇ ಹೆಸರು.. ನಮ್ಮ ದೇವಸ್ಥಾನ ಆಸ್ತಿ ಮೇಲೆ ಕಣ್ಣು.. ಮಾರ್ಕೆಟ್​ ನಮ್ದೇ. ಅದು ನಮ್ದು, ಇದು ನಮ್ದು. ಇದ್ದ ಬದ್ಧ ಜಾಗಕ್ಕೆ ಕನ್ನ. ಈ ಎಲ್ಲಾ ವಿವಾದದ ನಡುವೆ ಇಬ್ರಾಹಿಂ ಬಂದಿದ್ದಾರೆ. ಈ ವರೆಗೆ ಅದೇಲ್ಲಿ ನಾಪತ್ತೆ ಆಗಿದ್ರೋ ಏನೋ? ನಮ್ದು ಒಂದ್​ ಇರಲಿ ಅಂತ ಹೊಡೆದ ಸ್ಟೇಟ್​ಮೆಂಟ್​, ಡೈರೆಕ್ಟ್​​ ಮಂತ್ರಾಲಯದ ಗುರುರಾಯರ ಮಠಕ್ಕೆ ಗುರಿ ಇಟ್ಟಿದ್ದಾರೆ.

publive-image

ದಳದಿಂದ ದಂಗೆ ಎದ್ದು ಕಳೆದೊಗಿದ್ದ ಕೇಂದ್ರ ಮಾಜಿ ಸಚಿವ ಇಬ್ರಾಹಿಂ ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ವಕ್ಫ್​ ಬಗ್ಗೆ ಮಾತನಾಡುತ್ತ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಸ್ಥಳ ಆದೋನಿ ನವಾಬರು ನೀಡಿದ್ದು ಅಂತ ಹೇಳಿದ್ದಾರೆ. ಮಂತ್ರಾಲಯ ಖಾಜಿಗೆ ನೀಡಿದ್ದು ರದ್ದು ಮಾಡಿ. ಆದೋನಿ ನವಾಬರು ಮಂತ್ರಾಲಯ ಸ್ವಾಮೀಜಿಗೆ ನೀಡಿದ್ರು ಅಂತ ಪುರಾಣ ಹೇಳಿದ್ರು. ಅದು ಹೋಗ್ಲಿ ರೈತರ ಪಹಣಿಯಲ್ಲಿ ವಕ್ಪ್ ಆಸ್ತಿ ಹೆಸರು ಬಂದಿರುವುದಕ್ಕೆ ಯಾರೂ ಆತಂಕ ಪಡಬಾರದು ಅಂತ ಹೇಳಿದರು.

‘ಮಂತ್ರಾಲಯ ಜಾಗ ಆದೋನಿ ನವಾಬರದ್ದು’

ಮಂತ್ರಾಲಯ ಜಾಗ ಕೊಟ್ಟಿದ್ದು ಯಾರು, ಆದೋನಿಯ ನವಾಬರು ಕೊಟ್ಟ ಜಾಗ ಅದು. ಅದನನು ಯಾರದರೂ ವಕ್ಫ್ ಬೋರ್ಡ್ ಆದ ಅಂತ ಕೇಳುವುದಕ್ಕೆ ಹೋಗಿದ್ರಾ?. ನಮ್ಮ ಬೃಂದಾವನ ಇಲ್ಲಿ ಮಾಡುತ್ತೇವೆ ಎಂದು ರಾಘವೇಂದ್ರ ಸ್ವಾಮಿಗಳು, ನವಾಬನ ಬಳಿ ಹೇಳುತ್ತಾರೆ. ಆಗ ಆ ಸ್ಥಳವನ್ನು ಖಾಜಿಗೆ ಕೊಡಲಾಗಿತ್ತು. ಆದರೆ ಅದನ್ನು ಕ್ಯಾನ್ಸಲ್ ಮಾಡಿ ಸ್ವಾಮಿಗಳಿಗೆ ಕೊಟ್ಟರು.

ವಕ್ಫ್​ ಯಾಕ್ ಬಂತು, ಮಠಕ್ಕೆ ಹೇಗೆ ಹೋಯಿತು. ತನಿಖೆ ಮಾಡಿ ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ತೀರ್ಮಾನ ತೆಗೆದುಕೊಳ್ಳಬೇಕು. ಇದರಿಂದ ಯಾರೂ ಕೂಡ ಆತಂಕ ಪಡುವ ಅವಶ್ಯಕತೆ ಇಲ್ಲ.

ಸಿ.ಎಂ.ಇಬ್ರಾಹಿಂ, ಕೇಂದ್ರ ಮಾಜಿ ಸಚಿವ

Advertisment

ಅನುಭವ ಇಲ್ಲದಿರುವ ಮಂತ್ರಿಯ ಆವೇಶದ ಮಾತು!

ಇದೇ ವೇಳೆ, ಸಚಿವ ಜಮೀರ್​​ಗೆ ಸಾಫ್ಟ್​ ಆಗೇ ಗುಮ್ಮಿದ ಇಬ್ರಾಹಿಂ, ಅನುಭವ ಇಲ್ಲದಿರುವ ಒಬ್ಬ ಮಂತ್ರಿ ಆವೇಶದಲ್ಲಿ ಏನೋ ಮಾಡಲು ಹೋಗಿ ಏನೋ ಮಾಡಿದ್ದಾನೆ. ಕುಮಾರಸ್ವಾಮಿ ಬಣ್ಣದ ಬಗೆಗಿನ ಮಾತು ತಪ್ಪು. ಗೌಡರ ವಯಸ್ಸಿಗೂ ಗೌರವ ಕೊಡಬೇಕು. ಈ ಬೆಳವಣಿಗೆ ಒಕ್ಕಲಿಗ ಸಮಾಜಕ್ಕೆ ನೋವಾಗಿದೆ. ಹಾಗಾಗಿ ನಾನೇ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: Pushpa 2; ಐಕಾನ್ ಸ್ಟಾರ್ ಅಲ್ಲು ಅರ್ಜುನ್, ರಶ್ಮಿಕಾ ನೋಡಲು ಟವರ್ ಏರಿದ ಫ್ಯಾನ್ಸ್​, ಪೊಲೀಸರ ಹರಸಾಹಸ

publive-image

ಆ ಸಮುದಾಯಕ್ಕೆ ನೋವಾಗಿದೆ ಎಂದು ನನಗೆ ಗೊತ್ತಿದೆ. ನಾನೇ ಕ್ಷಮೆ ಕೇಳುತ್ತೇನೆ. ಮುಸ್ಲಿಂ ಸಮುದಾಯ, ಒಕ್ಕಲಿಗ ಸಮುದಾಯ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದಾವೆ. ಅಪರವಾದ ಪ್ರೀತಿ, ವಿಶ್ವಾಸ ಇದೆ. ಇದರಿಂದ ಯಾರೂ ಮನಸನ್ನು ನೋಯಿಸಿಕೊಳ್ಳಬಾರದು.

ಸಿ.ಎಂ.ಇಬ್ರಾಹಿಂ, ಕೇಂದ್ರ ಮಾಜಿ ಸಚಿವ

Advertisment

ಸಿಎಂ ಇಬ್ರಾಹಿಂ ಗುರುರಾಯರ ಮಠದ ಇತಿಹಾಸ ಕೆದಕಿದ್ದಾರೆ. ರಾಜ್ಯಾದ್ಯಂತ ವಕ್ಫ್ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಮಂತ್ರಾಲಯ ಜಾಗ ನವಾಬರು ಕೊಟ್ಟಿದ್ದು ಎಂಬ ಮಾಜಿ ಸಚಿವ ಸಿಎಂ ಇಬ್ರಾಹಿಂ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment