ಮಂತ್ರಾಲಯದ ವಿದ್ಯಾಪೀಠದ ವಾಹನ ಭಯಾನಕ ಆಕ್ಸಿಡೆಂಟ್​.. ಜೀವ ಕಳೆದುಕೊಂಡ ವಿದ್ಯಾರ್ಥಿಗಳು

author-image
Bheemappa
Updated On
ಮಂತ್ರಾಲಯದ ವಿದ್ಯಾಪೀಠದ ವಾಹನ ಭಯಾನಕ ಆಕ್ಸಿಡೆಂಟ್​.. ಜೀವ ಕಳೆದುಕೊಂಡ ವಿದ್ಯಾರ್ಥಿಗಳು
Advertisment
  • ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಶ್ರೀಗಳು
  • ನರಹರಿ ತೀರ್ಥರ ವೃಂದಾವನಕ್ಕೆ ತೆರಳುವಾಗ ನಡೆದ ಅಪಘಾತ
  • ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಗಾಯಾಳುಗಳಿಗೆ ಚಿಕಿತ್ಸೆ

ರಾಯಚೂರು: ಮಂತ್ರಾಲಯದ ಸಂಸ್ಕೃತ ವಿದ್ಯಾಪೀಠದ ವಾಹನ ರಸ್ತೆಯಲ್ಲಿ ಭಯಾನಕವಾಗಿ ಪಲ್ಟಿಯಾದ ಪರಿಣಾಮ ಚಾಲಕ ಸೇರಿ ನಾಲ್ವರು ಜೀವ ಕಳೆದುಕೊಂಡಿದ್ದಾರೆ. ಸಿಂಧನೂರು ನಗರದ ಹೊರವಲಯದಲ್ಲಿ ಈ ಘಟನೆ ಸಂಭವಿಸಿದೆ.

ಕ್ರೂಶರ್ ವಾಹನದ ಚಾಲಕ ಕಂಸಾಲಿ ಶಿವ (20), ವಿದ್ಯಾರ್ಥಿಗಳಾದ ಹಯವದನ (18), ಸುಜಯೇಂದ್ರ (22), ಅಭಿಲಾಷ್ (20) ಪ್ರಾಣ ಕಳೆದುಕೊಂಡವರು. ಕ್ರೂಶರ್ ವಾಹನದಲ್ಲಿ ಒಟ್ಟು 14 ಜನರು ಮಂತ್ರಾಲಯದಿಂದ ಕೊಪ್ಪಳದ ಆನೆಗುಂದಿಯ ನರಹರಿ ತೀರ್ಥರ ವೃಂದಾವನಕ್ಕೆ ತೆರಳುತ್ತಿದ್ದರು. ಸಿಂಧನೂರು ನಗರದ ಹೊರವಲಯದಲ್ಲಿ ಬರುತ್ತಿದ್ದಂತೆ ಕ್ರೂಶರ್ ವೇಗದಲ್ಲಿ ಇದ್ದ ಕಾರಣ ಆಕ್ಸಲ್ ಕಟ್ ಆಗಿ ಭೀಕರವಾಗಿ 3 ಪಲ್ಟಿ ಹೊಡೆದಿದೆ.

publive-image

ಇದನ್ನೂ ಓದಿ:BREAKING: ಬೆಳ್ಳಂಬೆಳಗ್ಗೆ ಉತ್ತರ ಕನ್ನಡದಲ್ಲಿ ಘೋರ ದುರಂತ.. ಲಾರಿ ಪಲ್ಟಿಯಾಗಿ 9 ಮಂದಿ ಇನ್ನಿಲ್ಲ

ಇದರ ಪರಿಣಾಮ ಚಾಲಕ ಸೇರಿ ಮೂವರು ವಿದ್ಯಾರ್ಥಿಗಳು ಪ್ರಾಣ ಬಿಟ್ಟಿದ್ದಾರೆ. ಕ್ರೂಶರ್​ನಲ್ಲಿದ್ದ ಇನ್ನುಳಿದವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಅಪಘಾತಕ್ಕೆ ಕ್ರೂಶರ್ ಚಾಲಕನ ಅತೀವೇಗ ಹಾಗೂ ನಿರ್ಲಕ್ಷ್ಯ ಕಾರಣ ಎಂದು ತಿಳಿದು ಬಂದಿದೆ. ಘಟನೆಯ ಮಾಹಿತಿ ತಿಳಿದ ಮಂತ್ರಾಲಯ ಶ್ರೀಗಳು ಸ್ಥಳಕ್ಕೆ ಆಗಮಿಸಿ ವೀಕ್ಷಣೆ ಮಾಡಿದ್ದಾರೆ. ಇನ್ನು ಸಿಂಧನೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment