/newsfirstlive-kannada/media/post_attachments/wp-content/uploads/2025/01/KHELRATNA-AWARD.jpg)
ಡಬಲ್ ಒಲಿಂಪಿಕ್ಸ್ ಪದಕ ವಿಜೇತೆ ಮನು ಭಾಕರ್ ಹಾಗೂ ವಿಶ್ವ ಚೆಸ್ ಚಾಂಪಿಯನ್​ಶಿಪ್​ ವಿಜೇತ ಡಾ ಗುಕೇಶ್​ ಜೊತೆ ಒಟ್ಟು ನಾಲ್ಕು ಕ್ರೀಡಾಪಟುಗಳಿಗೆ ಕೇಂದ್ರ ಸರ್ಕಾರ ಖೇಲ್ ರತ್ನ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಮಾಡಿದೆ. ಜನವರಿ 17 ರಂದು ಈ ನಾಲ್ವರು ಕ್ರೀಡಾಪಟುಗಳೀಗೆ ಮೇಜರ್ ಧ್ಯಾನ್​ ಚಂದ್ ಖೇಲ್​ರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ.
ಮನು ಭಾಕರ್​ ಹಾಗೂ ಗುಕೇಶ್​ ಜೊತೆ ಭಾರತೀಯ ಪುರುಷರ ಹಾಕಿ ಟೀಂನ ನಾಯಕ ಹರ್ಮನ್​ಪ್ರೀತ್ ಸಿಂಗ್ ಹಾಗೂ ಪ್ಯಾರಾ ಒಲಿಂಪಿಯನ್ ಪ್ರವೀಣ್ ಕುಮಾರ್​ಗೂ ಕೂಡ ಈ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ.
ಕೇಂದ್ರ ಸರ್ಕಾರದ ಕ್ರೀಡಾ ಇಲಾಖೆ ಹೇಳುವ ಪ್ರಕಾರ ಮನು ಭಾಕರ್​ ಅವರ ಹೆಸರು ಈ ಬಾರಿಯ ಖೇಲ್​ರತ್ನ ಪ್ರಶಸ್ತಿಯ ಪಟ್ಟಿಯಲ್ಲಿ ಆರಂಭದಲ್ಲಿ ಮಿಸ್ ಆಗಿತ್ತು. ಕೊನೆಗೆ ಅವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆಯಂತೆ. ಜನವರಿ 17 ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಈ ಕ್ರೀಡಾಪಟುಗಳಿಗೆ ಪ್ರಶಸ್ತಿಯನ್ನು ನೀಡಲಿದ್ದಾರೆ.
ಕ್ರೀಡಾ ಸಮಿತಿಯ ಶಿಫಾರಸ್ಸು ಹಾಗೂ ಹಲವು ಪರಿಶೀಲನೆಗಳನ್ನು ನಡೆಸಿದ ಬಳಿಕ ಈ ನಾಲ್ವರಿಗೆ ಈ ವರ್ಷದ ಖೇಲ್​ರತ್ನ ಪ್ರಶಸ್ತಿಯನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us