/newsfirstlive-kannada/media/post_attachments/wp-content/uploads/2024/07/MANU_BHAKAR-1.jpg)
ಪ್ರೇಮನಗರಿ ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಮನು ಭಾಕರ್ ಶೂಟಿಂಗ್​ನಲ್ಲಿ ಮೊದಲ ಬಾರಿಗೆ ಪದಕ ಗೆದ್ದು ದಾಖಲೆ ನಿರ್ಮಿಸಿದ್ದರು. ಶೂಟಿಂಗ್​ನಲ್ಲಿ 3ನೇ ಸ್ಥಾನ ಪಡೆಯುವ ಮೂಲಕ ಎರಡು ಕಂಚಿನ ಮೆಡಲ್​ಗೆ ಮುತ್ತಿಕ್ಕಿದ್ದಾರೆ. ಸದ್ಯ ಇದರ ಬೆನ್ನಲ್ಲೇ ಮನು ಭಾಕರ್ ಅವರ ಕುರಿತು ನೆಟ್ಟಿಗರು ಇಂಟರ್​ನೆಟ್​ನಲ್ಲಿ ಏನನ್ನು ಹೆಚ್ಚಾಗಿ ಸರ್ಚ್ ಮಾಡಿದ್ದಾರೆ ಗೊತ್ತಾ?
ಇದನ್ನೂ ಓದಿ:ಕೇರಳ ಭೂಕುಸಿತ, 300 ಜನ ಸಾವನ್ನಪ್ಪಿದ್ದಾರಾ..? ಬೆಚ್ಚಿ ಬೀಳಿಸೋ ಸತ್ಯ ಬಿಚ್ಚಿಟ್ಟ ಸ್ಥಳೀಯ ನಿವಾಸಿ
ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್​ನಲ್ಲಿ ಮನು ಭಾಕರ್ ಕಂಚಿನ ಪದಕಗಳನ್ನು ಗೆದ್ದು ಇಡೀ ದೇಶಕ್ಕೆ ಕೀರ್ತಿ ತಂದಿದ್ದಾರೆ. ಇದಕ್ಕಾಗಿ ಪ್ರಧಾನಿ ಮೋದಿ ಸೇರಿದಂತೆ ಗಣ್ಯರು ಮನು ಭಾಕರ್​ಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಆದರೆ ದುಃಖಕರ ಸಂಗತಿ ಎಂದರೆ ಇಂಟರ್​ನೆಟ್​ನಲ್ಲಿ ನೆಟ್ಟಿಗರೆಲ್ಲ ಮನು ಭಾಕರ್ ಯಾವ ರಾಜ್ಯದವರೆಂದು ಹುಡುಕುವ ಬದಲು ಮೊದಲು ಅವರ ಜಾತಿ ಯಾವುದೆಂದು ಸರ್ಚ್ ಮಾಡಿದ್ದಾರೆ.
ಮನು ಭಾಕರ್ ಜಾಟ್ ಸಮುದಾಯದವರೆಂದು ಸಾಕಷ್ಟು ಜನರು ಸೋಶಿಯಲ್ ಮೀಡಿಯಾದಲ್ಲಿ ಹೆಮ್ಮೆಯಿಂದ ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಜಾತಿಯನ್ನು ಗುರುತಿಸುವಂತ ಕೆಲ ಪೋಸ್ಟ್​ಗಳನ್ನ ಶೇರ್ ಮಾಡುತ್ತಿದ್ದಾರೆ. ಹರಿಯಾಣ ಮತ್ತು ದೆಹಲಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಇವರ ಜಾತಿ ಹುಡುಕಾಡಿದ್ದಾರೆ. ಉತ್ತರ ಭಾರತದಾದ್ಯಂತ ವ್ಯಾಪಕವಾಗಿ ಮನು ಭಾಕರ್ ಜಾತಿ ಹುಡುಕಾಡಿರುವುದು ನೋವಿನ ಸಂಗತಿಯೇ ಎನ್ನಬಹುದು. ಏಕೆಂದರೆ ಭಾಕರ್ ಅವರಂಥ ಸ್ಪರ್ಧಿಗಳನ್ನ ಅವರ ಕಠಿಣ ಶ್ರಮ ಹಾಗೂ ಪ್ರತಿಭೆಯನ್ನು ಗುರುತಿಸಬೇಕಾದ ಬದಲು ಅವರ ಜಾತಿಯಿಂದ ಅವರನ್ನು ಗುರುತಿಸುವುದು , ದುಃಖಕರವಾಗಿದೆ ಎನ್ನಲಾಗುತ್ತಿದೆ. ಈ ಹಿಂದೆ ಟೆನ್ನಿಸ್ ತಾರೆ ಪಿ.ವಿ ಸಿಂಧು ಕೂಡ ಪದಕ ಗೆದ್ದಾಗ ಜನರು ಅವರ ಜಾತಿ ಯಾವುದೆಂದು ಹೆಚ್ಚಾಗಿ ಇಂಟರ್​ನೆಟ್​​ನಲ್ಲಿ ಹುಡುಕಾಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ