/newsfirstlive-kannada/media/post_attachments/wp-content/uploads/2024/07/MANU_BHAKAR.jpg)
ಪ್ರೇಮನಗರಿ ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಭಾರತ ಶುಭಾರಂಭ ಮಾಡಿದೆ. ಶೂಟಿಂಗ್​ನಲ್ಲಿ ಮನು ಭಾಕರ್ ಪದಕ ಗೆದ್ದಿದ್ದು ದಾಖಲೆ ನಿರ್ಮಿಸಿದ್ದಾರೆ. ಇದಕ್ಕೆ ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ಗಣ್ಯರ ಶುಭಾಷಯಗಳ ಮಹಾಪೂರವೇ ಹರಿದುಬಂದಿದೆ.
ವಯಸ್ಸು ಜಸ್ಟ್​​ 22.. ಹೆಸರು ಮನು ಭಾಕರ್​.. ಪ್ರೇಮ ನಗರಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಶೂಟರ್ ವಿಭಾಗದಲ್ಲಿ ಇತಿಹಾಸ ನಿರ್ಮಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/07/MANU_BHAKAR_1.jpg)
ಶೂಟರ್ ವಿಭಾಗದಲ್ಲಿ ಮನು ಭಾಕರ್​ಗೆ ಕಂಚಿನ ಪದಕ
ಒಲಿಂಪಿಕ್ಸ್​​ ಕ್ರೀಡಾಕೂಟದಲ್ಲಿ ಭಾರತ ಪದಕದ ಖಾತೆ ತೆರೆದಿದೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಶೂಟರ್ ಮನು ಭಾಕರ್ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಶೂಟಿಂಗ್‌ನಲ್ಲಿ ಭಾರತಕ್ಕೆ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಉಳಿದಂತೆ ಕೊರಿಯಾ ಚಿನ್ನ ಹಾಗೂ ಬೆಳ್ಳಿ ಪದಕಗಳೆರಡನ್ನೂ ಗೆದ್ದಿದೆ. ಕಳೆದ 2020 ರ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಮನು ಭಾಕರ್ ತಮ್ಮ ಪಿಸ್ತೂಲಿನಲ್ಲಿ ಕಂಡು ಬಂದ ದೋಷದಿಂದಾಗಿ ಪದಕದ ರೇಸ್​ನಿಂದ ಹೊರಬಿದ್ದಿದ್ದರು. ಈ ಬಾರಿ ಒಲಿಂಪಿಕ್ಸ್‌ನಲ್ಲಿ ಮೊದಲ ಪದಕ ಗೆದ್ದಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ ಬಳಿಕ ಮಾತನಾಡಿದ ಮನು ಭಾಕರ್, ನಾನು ಭಗವದ್ಗೀತೆ ಓದಿದ್ದು, ಪದಕ ಗೆಲ್ಲಲು ನೆರವಾಯಿತು. ನಾನು ಸಾಕಷ್ಟು ಬಾರಿ ಭಗವದ್ಗೀತೆ ಓದಿದ್ದೇನೆ. ಅದರಲ್ಲಿ ಭಗವಂತ ಶ್ರೀಕೃಷ್ಣನು, ನಿನ್ನ ಕೆಲಸವನ್ನು ನೀನು ಮಾಡು, ಅದರಿಂದ ಬರುವ ಫಲಿತಾಂಶದ ಬಗ್ಗೆ ಆಲೋಚಿಸಬೇಡ ಎನ್ನುವ ಮಾತು ನನಗೆ ಸ್ಪೂರ್ತಿಯಾಯಿತು ಎಂದು ಹೇಳಿದ್ದಾರೆ.
‘ಭಗವದ್ಗೀತೆಯೇ ಸ್ಪೂರ್ತಿ’
ನಾನು ಭಗವದ್ಗೀತೆಯನ್ನು ಹೆಚ್ಚಾಗಿ ಓದಿದ್ದೇನೆ. ನೀನು ನಿನ್ನ ಕೆಲಸವನ್ನು ಮಾಡು. ಪ್ರತಿಫಲಾಪೇಕ್ಷೆಯನ್ನು ಬಿಡು. ನಿನ್ನ ಹಣೆಬರಹವನ್ನು ಬದಲಾಯಿಸಲು ಆಗಲ್ಲ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಹೇಳುವ, ನಿನ್ನ ಕರ್ಮದ ಮೇಲೆ ಗಮನ ಕೊಡು. ಅದರಿಂದ ಬರುವ ಫಲಿತಾಂಶದ ಬಗ್ಗೆ ಆಲೋಚಿಸಬೇಡ. ಇದೇ ಮಾತು ನನ್ನ ತಲೆಯಲ್ಲಿ ಓಡುತ್ತಿತ್ತು.
ಮನು ಭಾಕರ್, ಕಂಚಿನ ಪದಕ ವಿಜೇತೆ
ಇನ್ನು ಮನು ಭಾಕರ್ ಸಾಧನೆಗೆ ಇಡೀ ದೇಶವೇ ಅಭಿನಂದನೆ ಸಲ್ಲಿಸುತ್ತಿದೆ. ಪದಕ ಗೆದ್ದ ಬಳಿಕ ಖುದ್ದು ದೂರವಾಣಿ ಕರೆ ಮಾಡಿ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಕೂದಲೆಳೆ ಅಂತರದಲ್ಲಿ ಬೆಳ್ಳಿ ಪದಕದಿಂದ ವಂಚಿತರಾಗಿದ್ದೀರಿ. ಆದರೂ ನೀವು ದೇಶಕ್ಕೆ ಕೀರ್ತಿ ತಂದಿದ್ದೀರಿ. ಈ ಮೂಲಕ ನೀವು 2 ರೀತಿಯ ಕ್ರೆಡಿಟ್ ಪಡೆಯುತ್ತಿದ್ದೀರಿ. ಮೊದಲನೆಯದಾಗಿ, ನೀವು ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದೀರಿ. ಎರಡನೆಯದಾಗಿ, ನೀವು ಶೂಟಿಂಗ್‌ನಲ್ಲಿ ಪದಕ ತಂದ ಮೊದಲ ಮಹಿಳೆಯಾಗಿದ್ದೀರಿ. ಈ ಸಾಧನೆ ಮಾಡಿದ ನಿಮಗೆ ಅನೇಕ ಅಭಿನಂದನೆಗಳು ಎಂದಿದ್ದಾರೆ.
ಪ್ರಧಾನಿ ಮೋದಿ: ಹಲೋ ನಮಸ್ಕಾರ, ತುಂಬಾ ತುಂಬಾ ಅಭಿನಂದನೆಗಳು ನಿಮಗೆ.
ಮನು ಭಾಕರ್: ತುಂಬಾ ತುಂಬಾ ಧನ್ಯವಾದ ಸರ್.
ಪ್ರಧಾನಿ ಮೋದಿ: ಕೂದಲೆಳೆ ಅಂತರದಲ್ಲಿ ಬೆಳ್ಳಿ ಪದಕದಿಂದ ವಂಚಿತರಾಗಿದ್ದೀರಿ. ಆದರೂ ನೀವು ದೇಶಕ್ಕೆ ಕೀರ್ತಿ ತಂದಿದ್ದೀರಿ. ಈ ಮೂಲಕ ನೀವು 2 ರೀತಿಯ ಕ್ರೆಡಿಟ್ ಪಡೆಯುತ್ತಿದ್ದೀರಿ. ಮೊದಲನೆಯದಾಗಿ, ನೀವು ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದೀರಿ. ಎರಡನೆಯದಾಗಿ, ನೀವು ಶೂಟಿಂಗ್‌ನಲ್ಲಿ ಪದಕ ತಂದ ಮೊದಲ ಮಹಿಳೆಯಾಗಿದ್ದೀರಿ.
ಮನು ಭಾಕರ್: ಹೌದು ಸರ್, ತುಂಬಾ ಧನ್ಯವಾದಗಳು
ಇದನ್ನೂ ಓದಿ: ಒನ್​ ನೇಷನ್.. ಒನ್ ರೇಟ್.. ಇನ್ಮುಂದೆ ಎಲ್ಲಾ ‘ಚಿನ್ನ’ಪ್ರಿಯರಿಗೂ ಸಮಾನ ಬೆಲೆ..!
/newsfirstlive-kannada/media/post_attachments/wp-content/uploads/2024/07/Manu-Bhaker.jpg)
ಇನ್ನು ಪ್ರಧಾನಿ ಮೋದಿ ಬಳಿಕ ಮನು ಸಾಧನೆಯನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಕೊಂಡಾಡಿದ್ದಾರೆ. ಶೂಟಿಂಗ್ ಸ್ಪರ್ಧೆಯಲ್ಲಿ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಮನು. ಹೀಗಾಗಿ ಮನು ಭಾಕರ್ ಬಗ್ಗೆ ಭಾರತ ಹೆಮ್ಮೆಪಡುತ್ತದೆ. ಅವರ ಸಾಧನೆಯು ಅನೇಕ ಕ್ರೀಡಾಪಟುಗಳಿಗೆ ಮತ್ತು ವಿಶೇಷವಾಗಿ ಮಹಿಳೆಯರಿಗೆ ಸ್ಪೂರ್ತಿ ನೀಡುತ್ತದೆ. ಭವಿಷ್ಯದಲ್ಲಿ ಅವರು ಸಾಧನೆಯ ಹೊಸ ಉತ್ತುಂಗಕ್ಕೇರಲಿ ಎಂದು ಹಾರೈಸುತ್ತೇನೆ ಅಂತ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾದಲ್ಲಿ ಕೇಳಿ ಬಂದ ಅಪಸ್ವರ.. ತಂಡದ ನಾಯಕನ ಸ್ಥಾನಕ್ಕಾಗಿ ಬೂಮ್ರಾ ಓಪನ್ ಚಾಲೆಂಜ್!
ಇನ್ನು ಪ್ರಧಾನಿ, ರಾಷ್ಟ್ರಪತಿ ಮಾತ್ರವಲ್ಲದೆ ಕ್ರೀಡಾಲೋಕ ಹಾಗೂ ರಾಜಕೀಯದ ಹಲವು ನಾಯಕರು ಮನುಗೆ ಅಭಿನಂದನೆ ಸಲ್ಲಿಸಿದ್ದಾರೆ. ಸದ್ಯ ಮನು ಭಾಕರ್ ಕಂಚಿನ ಪದಕವನ್ನು ಶೂಟ್ ಮಾಡಿದ್ದು ಮುಂದೆ ಅವರು ಹೆಚ್ಚಿನ ಸಾಧನೆ ಮಾಡಲಿ ಅನ್ನೋದೇ ಶತಕೋಟಿ ಭಾರತೀಯರ ಆಶಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us