newsfirstkannada.com

ಮತ್ತೊಂದು ಮೆಡಲ್​ಗೆ ಮನು ಭಾಕರ್ ಮುತ್ತಿಕ್ಕುವುದು ಗ್ಯಾರಂಟಿ.. ಚಿನ್ನದ ಪದಕ​ ಸಾಧನೆ ಮಾಡ್ತಾರಾ?

Share :

Published August 2, 2024 at 7:20pm

    ಈಗಾಗಲೇ ಎರಡು ಕಂಚಿನ ಪದಕ ಗೆದ್ದುಕೊಟ್ಟಿರುವ ಮನು ಭಾಕರ್

    ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಮೊದಲ ಎರಡು ಸ್ಥಾನ ಪಡೆದ ದೇಶಗಳು?

    ಮತ್ತೆ ವಿಶೇಷ ಸಾಧನೆಯ ಹಾದಿಯಲ್ಲಿರುವ ಶೂಟರ್​ ಮನು ಭಾಕರ್​

ಪ್ಯಾರಿಸ್​ನಲ್ಲಿ ನಡೆಯುತ್ತಿರುವ 2024ರ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಮನು ಭಾಕರ್ ಶೂಟಿಂಗ್​ನಲ್ಲಿ ಮೊದಲ ಬಾರಿಗೆ ಪದಕ ಗೆದ್ದು ದಾಖಲೆ ನಿರ್ಮಿಸಿದ್ದರು. ಎರಡು ಕಂಚಿನ ಮೆಡಲ್​ಗೆ ಮುತ್ತಿಕ್ಕಿರುವ ಮನು ಭಾಕರ್ ಮೊತ್ತೊಮ್ಮೆ ಪದಕ ಖಚಿತಪಡಿಸಿಕೊಂಡಿದ್ದು ಸದ್ಯ ಇವರ ಸಾಧನೆಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ವಿಶೇಷ ಎಂದರೆ ಮನು ಭಾಕರ್ ಹ್ಯಾಟ್ರಿಕ್ ಪದಕ ಗೆಲ್ಲುವ ಖುಷಿಯಲ್ಲಿದ್ದಾರೆ.

ಇದನ್ನೂ ಓದಿ: ಇಂಟರ್’ನೆಟ್’ನಲ್ಲಿ ಅತಿಹೆಚ್ಚು ಸರ್ಚ್‌ಗೆ ಒಳಗಾದ ಮನು ಭಾಕರ್​​ ಜಾತಿ; ಇದೆಂಥಾ ಮನಸ್ಥಿತಿ!

ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್​ನ 25 ಮೀಟರ್​ ಮಹಿಳಾ ಪಿಸ್ತೂಲ್​ ಶೂಟಿಂಗ್​ನಲ್ಲಿ ಮನು ಭಾಕರ್ ಫೈನಲ್​ ಪ್ರವೇಶ ಮಾಡಿದ್ದು ಚಿನ್ನದ ಪದಕದ ಮೇಲೆ ಕಣ್ಣೀಟ್ಟಿದ್ದಾರೆ. ಈಗಾಗಲೇ 2 ಕಂಚಿನ ಮೆಡಲ್ ಗೆದ್ದಿರುವ ಬಾಕರ್ ಈ ಸಲ ಗೋಲ್ಡ್​ ಮೆಡಲ್​ ಸಾಧನೆ ಮಾಡಬೇಕೆಂದು ಪಣತೊಟ್ಟಿದ್ದಾರೆ. 590 ಅಂಕ ಗಳಿಸಿರುವ ಭಾಕರ್ ಸ್ಪರ್ಧೆಯಲ್ಲಿ ಎರಡನೇ ಸ್ಥಾನದಲ್ಲಿದ್ದು ಹಂಗೇರಿಯ ವೆರೋನಿಕಾ ಮೇಜರ್‌ ಮೊದಲ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಈ ವಾರ ಕನ್ನಡಿಗರ ಮನಗೆದ್ದ ಸೀರಿಯಲ್​​ ಯಾವುದು.. TRPಯಲ್ಲಿ ಯಾವುದು ಫಸ್ಟ್​, ಲಾಸ್ಟ್​​?

ಆಗಸ್ಟ್​ 3 ಅಂದರೆ ನಾಳೆ ನಡೆಯುವ ಫೈನಲ್​ ಪಂದ್ಯದಲ್ಲಿ ಚಿನ್ನದ ಪದಕ ಗೆಲ್ಲುವ ಹಾದಿಯಲ್ಲಿ ಮನು ಭಾಕರ್ ಇದ್ದಾರೆ. ಈಗಾಗಲೇ ಭಾರತ 3 ಕಂಚಿನ ಪದಕಗಳನ್ನು ಗೆದ್ದಿದ್ದು 44ನೇ ಶ್ರೇಣಿಯಲ್ಲಿದೆ. ಇದುವರೆಗೂ ಒಂದು ಗೋಲ್ಡ್​, ಸಿಲ್ವರ್​ ಮೆಡಲ್​ ಕೂಡ ಭಾರತಕ್ಕೆ ಒಲಿದು ಬಂದಿಲ್ಲ. ಹೀಗಾಗಿ ನಾಳೆ ಮನು ಭಾಕರ್ ಚಿನ್ನದ ಪದಕ ಗೆದ್ದರೆ ಹೊಸ ಇತಿಹಾಸ ಬರೆಯಲಿದ್ದಾರೆ. ಅಲ್ಲದೇ ಈ ಸಲ ಗೆದ್ದಿರುವ 3 ಕಂಚಿನ ಪದಕಗಳು ಶೂಟಿಂಗ್​ನಿಂದಲೇ ಬಂದಿರುವುದು ವಿಶೇಷ ಎನಿಸಿದೆ. ಇನ್ನು 2024ರ ಒಲಿಂಪಿಕ್ಸ್​ನಲ್ಲಿ ಪದಕಗಳ ಪಟ್ಟಿಯಲ್ಲಿ 12 ಚಿನ್ನದ ಪದಕಗಳೊಂದಿಗೆ ಚೀನಾ ಮೊದಲ ಸ್ಥಾನದಲ್ಲಿದೆ. 9 ಗೋಲ್ಡ್​ಗಳಿಂದ ಅಮೆರಿಕದ 2ನೇ ಸ್ಥಾನದಲ್ಲಿದ್ರೆ, 8 ಬಂಗಾರದೊಂದಿಗೆ ಫ್ರಾನ್ಸ್​ 3ನೇ ಸ್ಥಾನದಲ್ಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಮತ್ತೊಂದು ಮೆಡಲ್​ಗೆ ಮನು ಭಾಕರ್ ಮುತ್ತಿಕ್ಕುವುದು ಗ್ಯಾರಂಟಿ.. ಚಿನ್ನದ ಪದಕ​ ಸಾಧನೆ ಮಾಡ್ತಾರಾ?

https://newsfirstlive.com/wp-content/uploads/2024/08/MANU_BHAKAR-2.jpg

Load More