/newsfirstlive-kannada/media/post_attachments/wp-content/uploads/2024/09/Manu-Bhaker.jpg)
ಪ್ಯಾರಿಸ್ ಒಲಂಪಿಕ್ಸ್ 2024ರ ಶೂಟಿಂಗ್ ಸ್ಪರ್ಧೆಯಲ್ಲಿ ಎರಡು ಕಂಚಿನ ಪದಕ ಗೆದ್ದ ಮನು ಭಾಕರ್ (Manu Bhaker)ಶ್ರೇಷ್ಠ ಸ್ಪರ್ಧಿಯಾಗಿದ್ದಾರೆ. ಮನು ಭಾಕರ್ ಅವರ ಸಾಧನೆಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಹೌದು, ಇತ್ತೀಚೆಗಷ್ಟೇ ನಡೆದ 2024 ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದರು.
ಇದನ್ನೂ ಓದಿ: ನೀರಜ್ ಚೋಪ್ರಾ, ಮನು ಭಾಕರ್ ಓದಿದ್ದು ಏನು.. ಡಿಗ್ರಿಯಾದರೂ ಮುಗಿಸಿದ್ದಾರಾ..?
ಆದರೆ ಇದರ ಮಧ್ಯೆ ಭಾರತೀಯ ಶೂಟರ್ ಆಗಿರೋ ಮನು ಭಾಕರ್ ತನ್ನ ಒಲಂಪಿಕ್ ಪದಕಗಳನ್ನು ತನ್ನೊಂದಿಗೆ ಎಲ್ಲೆಡೆ ಸಾಗಿಸುತ್ತಿದ್ದಾರೆ ಎಂದು ಕೆಲವರು ಟ್ರೋಲ್ ಮಾಡಿದ್ದರು. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಮನು ಭಾಕರ್ ತನ್ನ ಕಂಚಿನ ಪದಕಗಳನ್ನು ಪಾಪರಾಜಿಗಳಿಗೆ ತೋರಿಸಿದ್ದರು. ಆದರೆ ಮನು ಅವರು ತನ್ನ ಪದಕಗಳನ್ನು ಹೆಚ್ಚು ಕಾಲ ತೋರಿಸಿದ್ದಕ್ಕಾಗಿ ಸಾಕಷ್ಟು ಮಂದಿ ಅಪಹಾಸ್ಯ ಮಾಡಲು ಪ್ರಾರಂಭಿಸಿದ್ದರು. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಮನು ಭಾಕರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ಟ್ರೋಲ್ ಮಾಡಿದ ಕೆಲವರಿಗೆ ಟಾಂಗ್ ಕೊಟ್ಟಿದ್ದಾರೆ.
ಹೌದು, ತಮ್ಮ ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡ ಫೋಟೋದಲ್ಲಿ ಮನು ಅವರು ತಮ್ಮ ಇಡೀ ಜೀವನದಲ್ಲಿ ಶೂಟರ್ನಲ್ಲಿ ಗೆದ್ದುಕೊಂಡಿದ್ದ ಎಲ್ಲಾ ಪದಕಗಳನ್ನು ಇಟ್ಟುಕೊಂಡು ಪೋಸ್ ಕೊಟ್ಟಿದ್ದಾರೆ. ಇದರ ಜೊತೆಗೆ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್, ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದರೂ, ಅವರು ಇನ್ನೂ ಒಂದು ದಿನ ಒಲಿಂಪಿಕ್ ಚಿನ್ನದ ಪದಕವನ್ನು ಗೆಲ್ಲುವ ಕನಸು ಕಾಣುತ್ತಿದ್ದಾರೆ.
ಇದನ್ನೂ ಓದಿ: ನೀರಜ್ ಬಗ್ಗೆ ಕೇಳ್ತಿದ್ದಂತೆ ನಾಚಿಕೊಂಡ ಮನು ಭಾಕರ್.. ಪ್ರೀತಿ, ಮದುವೆ ಬಗ್ಗೆ ಮೌನ ಮುರಿದ ಅಥ್ಲೀಟ್..!
ಈ ಬಗ್ಗೆ ಇನ್ಸ್ಟಾ ಪೇಜ್ನಲ್ಲಿ ಬರೆದುಕೊಂಡ ಅವರು, ನಾನು ಶೂಟಿಂಗ್‌ನಲ್ಲಿ ನನ್ನ ಪ್ರಯಾಣವನ್ನು ಪ್ರಾರಂಭಿಸಿದಾಗ 14 ವರ್ಷ, ನನ್ನ ವೃತ್ತಿಜೀವನದಲ್ಲಿ ಇಷ್ಟು ದೂರ ತಲುಪುತ್ತೇನೆ ಮತ್ತು ನಾನು ಹೊಂದಿರುವಷ್ಟು ಸಾಧಿಸುತ್ತೇನೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಒಮ್ಮೆ ನೀವು ಏನನ್ನಾದರೂ ಪ್ರಾರಂಭಿಸಿದರೆ, ರಸ್ತೆ ಎಷ್ಟೇ ಕಠಿಣವಾಗಿದ್ದರೂ ಅದನ್ನು ಪೂರ್ಣಗೊಳಿಸಲು ಮತ್ತು ನಿಮ್ಮ ಕನಸುಗಳನ್ನು ಪಟ್ಟುಬಿಡದೆ ಬೆನ್ನಟ್ಟಲು ನಿಮ್ಮ ಶಕ್ತಿಯಿಂದ ನೀವು ಎಲ್ಲವನ್ನೂ ಮಾಡುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಏಕಾಗ್ರತೆಯಿಂದ ಇರಿ, ಚಾಲಿತರಾಗಿರಿ ಮತ್ತು ನಿಮ್ಮ ಉತ್ಸಾಹವು ನಿಮ್ಮ ಪ್ರಯಾಣಕ್ಕೆ ಉತ್ತೇಜನ ನೀಡಲಿ. ಪ್ರತಿ ಸಣ್ಣ ಹೆಜ್ಜೆಯೂ ನಿಮ್ಮನ್ನು ಶ್ರೇಷ್ಠತೆಗೆ ಹತ್ತಿರ ತರುತ್ತದೆ. ನೀವು ಊಹಿಸುವುದಕ್ಕಿಂತ ಹೆಚ್ಚಿನದನ್ನು ನೀವು ಸಮರ್ಥರಾಗಿದ್ದೀರಿ. ನನ್ನ ದೇಶಕ್ಕಾಗಿ ಒಲಿಂಪಿಕ್ ಚಿನ್ನ ಗೆಲ್ಲುವ ನನ್ನ ಕನಸು ಮುಂದುವರಿಯುತ್ತದೆ ಅಂತ ಬರೆದುಕೊಂಡಿದ್ದಾರೆ.
ಸದ್ಯ ಮನು ಅವರು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇವರು ಬಗ್ಗೆ ಟ್ರೋಲ್ ಮಾಡಿದ ಕೆಲವರಿಗೆ ಟಾಂಗ್ ಕೊಟ್ಟಂತೆ ಪೋಸ್ಟ್ ಶೇರ್ ಮಾಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಜೊತೆಗೆ 2028ರ ಚಿನ್ನದ ಪದಕದ ಮೇಲೆ ತನ್ನ ದೃಷ್ಟಿಯನ್ನು ದೃಢವಾಗಿ ಹೊಂದಿದ್ದಾರೆ. ಮುಂದಿನ ಒಲಿಂಪಿಕ್ಗಾಗಿ ತನ್ನ ಪ್ರಯಾಣವನ್ನು ಶೀಘ್ರದಲ್ಲೇ ಪ್ರಾರಂಭಿಸುವ ಸಾಧ್ಯತೆಯಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ