ಮಧ್ಯಾಹ್ನ ಒಂದು ಸಣ್ಣ ನಿದ್ದೆಗೆ ಜಾರುವುದರಿಂದ ಆರೋಗ್ಯಕ್ಕೆ ಎಷ್ಟು ಒಳ್ಳೆಯದು?

author-image
Gopal Kulkarni
Updated On
ಮಧ್ಯಾಹ್ನ ಒಂದು ಸಣ್ಣ ನಿದ್ದೆಗೆ ಜಾರುವುದರಿಂದ ಆರೋಗ್ಯಕ್ಕೆ ಎಷ್ಟು ಒಳ್ಳೆಯದು?
Advertisment
  • ಮಧ್ಯಾಹ್ನ ನಿದ್ದೆ ಮಾಡುವುದರಿಂದ ಆಗುವ ಪ್ರಯೋಜನಗಳೇನು?
  • ಯಾವ ಸಮಯದಲ್ಲಿ ಎಷ್ಟು ಗಂಟೆಗಳ ಕಾಲ ಮಲಗುವುದು ಒಳ್ಳೆಯದು
  • ಮಧ್ಯಾಹ್ನದ ಈ ಅಲ್ಪಾವಧಿ ನಿದ್ದೆಯಿಂದ ಯಾವೆಲ್ಲಾ ಸಮಸ್ಯೆಗಳು ದೂರ

ಮನುಷ್ಯನ ದೇಹಕ್ಕೆ ಸರಿಯಾದ ಊಟ, ಸರಿಯಾದ ನೀರು ಹಾಗೂ ಸರಿಯಾದ ನಿದ್ದೆ ಸಿಗಲೇಬೇಕು. ಅದರಲ್ಲೂ ನಿದ್ದೆ ಕನಿಷ್ಠ ದಿನಕ್ಕೆ 8 ಗಂಟೆಯಾದರೂ ಮಾಡಬೇಕು. ಇದರಿಂದ ದೇಹ ಹಾಗೂ ಮನಸ್ಸು ಸರಿಯಾಗಿ ಕಾರ್ಯನಿರ್ವಹಿಸುತ್ತವೆ. ಆದರೇ ಈಗ ಗಡಿಯಾದ ಸುತ್ತಲೇ ಸುತ್ತತ್ತಲಿದ್ದೇವೆ ಎಲ್ಲರೂ. ದುಡಿತ, ಆದಾಯ, ಕೆಲಸ ಹೀಗೆ ಹಲವು ಸುಳಿಗಳಲ್ಲಿ ಬದುಕು ಸಾಗುತ್ತಿದೆ. ಇದು ಮನುಷ್ಯರನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಹೈರಾಣು ಮಾಡಿ ಹಾಕುತ್ತಿದೆ. ಹೀಗಾಗಿ ನಡುವೆ ಒಂದು ಸಣ್ಣ ನಿದ್ದೆಯನ್ನು ಮಾಡುವುದರಿಂದ ಈ ಒಂದು ಸಮತೋಲನ ಕಾಪಾಡಿದಂತೆ ಆಗುತ್ತದೆ.

ಇದನ್ನೂ ಓದಿ:ಬೇಯಿಸಿದ ಮೊಟ್ಟೆ, ಆಮ್ಲೆಟ್​; ಎರಡರಲ್ಲಿ ಯಾವುದು ಉತ್ತಮ? ಈ ಬಗ್ಗೆ ಆಹಾರ ತಜ್ಞರು ಹೇಳುವುದೇನು?

ಮಧ್ಯಾಹ್ನ 30 ರಿಂದ 90 ನಿಮಿಷಗಳ ಕಾಲ ಒಂದು ಸಣ್ಣ ನಿದ್ದೆಗೆ ಜಾರಿ ಎದ್ದರೆ ಮೆದುಳಿಗೆ ಹಲವು ಉಪಯೋಗಗಳಿವೆ ಎಂದು ಹೇಳುತ್ತದೆ ಜಾನ್ಸ್ ಹಾಪ್ಕಿನ್ ಮೆಡಿಸಿನ್. ಮಧ್ಯಾಹ್ನ ಮಲಗುವುದರಿಂದ ದೈಹಿಕ ಹಾಗೂ ಮಾನಸಿಕದ ಆರೋಗ್ಯ ತುಂಬಾ ಸುಧಾರಿಸುತ್ತದೆ ಎಂದು ಹೇಳುತ್ತಾರೆ ವೈದ್ಯರು ಕೇವಲ ಇದೊಂದೇ ಲಾಭವಲ್ಲ. ಅನೇಕ ಆರೋಗ್ಯದ ಲಾಭಗಳು ನಾವು ಮಧ್ಯಾಹ್ನದ ನಿದ್ದೆಯಿಂದ ಪಡೆಯಬಹುದು.

ಹಲವು ಆರೋಗ್ಯ ಸಮಸ್ಯೆಗಳು ಕಡಿಮೆ

ಮಧ್ಯಾಹ್ನದ ಒಂದು ಸಣ್ಣ ನಿದ್ದೆಯನ್ನು ಪವರ್ ನ್ಯಾಪ್ ಎಂದು ಕರೆಯುತ್ತಾರೆ. ಕನಿಷ್ಠ 20 ನಿಮಿಷದ ನಿದ್ದೆಯೂ ಕೂಡ ಒಳ್ಳೆಯದೇ. ದೀರ್ಘವಾದ ನಿದ್ದೆಯನ್ನು ಮಾಡಿದರೆ ಅದು ರಾತ್ರಿಯ ನಿದ್ರೆಯ ಗುಣಮಟ್ಟವನ್ನು ಹಾಳು ಮಾಡುತ್ತದೆ. ಹೀಗಾಗಿ ಒಂದು ಸಣ್ಣ ನ್ಯಾಪ್ ತೆಗೆದುಕೊಳ್ಳುವುದರಿಂದ ದೇಹದಲ್ಲಿ ಸೆರೊಟೊನಿನ್ ಮತ್ತು ಡೊಪಾಮಿನ್ ಎನ್ನುವ ಹಾರ್ಮೋನ್ಸ್​ಗಳು ದೇಹದಲ್ಲಿ ಬಿಡುಗಡೆ ಆಗುತ್ತವೆ. ಇದು ಒತ್ತಡವನ್ನು ನಿರ್ವಹಣೆ ಮಾಡಲು ತುಂಬಾ ಸಹಾಯಕ.ನಿದ್ದೆ ಸರಿಯಾದ ಪ್ರಮಾಣ ಮಾಡಿದಲ್ಲಿ ಅದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ಹೃದಯ ಆರೋಗ್ಯವು ಸದೃಢವಾಗಿರುತ್ತದೆ.

ಮೆದುಳಿನ ಆರೊಗ್ಯ
ಮಧ್ಯಾಹ್ನದ ಒಂದಿಷ್ಟ ನಿಮಿಷಗಳ ಕಾಲದ ನಿದ್ದೆ, ಮೈಂಡ್​ನ್ನು ಫ್ರೆಶ್ ಮಾಡುತ್ತದೆ ಮತ್ತು ಅಷ್ಟೇ ಕ್ರಿಯಾಶೀಲವಾಗಿಸುತ್ತದೆ. ಜೊತೆಗೆ ನೆನಪಿನ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಅಲ್ಪಾವಧಿ ಹಾಗೂ ದೀರ್ಘಾವಧಿಯ ನೆನಪುಗಳನ್ನ ಹಾಗೂ ಮಾಹಿತಿಗಳನ್ನ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತದೆ.

ಸರಿಯಾದ ನಿರ್ವಹಣೆ ಬೇಕು
ಮಧ್ಯಾಹ್ನ ಮಲಗುವುದರಿಂದ ಅನೇಕ ಆರೋಗ್ಯಕರ ಲಾಭಗಳಿವೆ ಎಂದು ಈಗಾಗಲೇ ಹೇಳಲಾಗಿದೆ, ಆದ್ರೆ ನಾವು ಮಧ್ಯಾಹ್ನ ಎಷ್ಟು ಗಂಟೆ ಮಲಗಬೇಕು ಎನ್ನುವುದು ಕೂಡ ಪ್ರಾಮುಖ್ಯತೆ ಪಡೆಯುತ್ತದೆ. ಮಧ್ಯಾಹ್ನ 10 ರಿಂದ 30 ನಿಮಿಷದ ಅಲ್ಪಾವಧಿ ನಿದ್ದೆ ತುಂಬಾ ಉತ್ತಮ ಎನ್ನುತ್ತಾರೆ ತಜ್ಞರು. ಇದರಿಂದ ನಮ್ಮಲ್ಲಿ ಆವರಿಸಿರುವ ಜಡತ್ವ ಹಾಗೂ ಆಲಸ್ಯತನವು ಹೋಗುತ್ತದೆ.

30 ನಿಮಿಷಕ್ಕಿಂತ ಜಾಸ್ತಿ ನಿದ್ದೆ ಮಾಡದಿರುವುದು ತುಂಬಾ ಒಳ್ಳೆಯದು. ಒಂದು ವೇಳೆ ತುಂಬಾ ಹೊತ್ತು ಮಲಗಿದರೆ ನಿಮ್ಮ ರಾತ್ರಿ ನಿದ್ರೆಯ ಪ್ಯಾಟರ್ನ್​ ತಪ್ಪಿ ಹೋಗುತ್ತದೆ. ಒಂದು ಅಧ್ಯಯನ ಹೇಳುವ ಪ್ರಕಾರ ಮಧ್ಯಾಹ್ನ 1 ರಿಂದ 3 ಗಂಟೆಯೊಳಗೆ ನಿದ್ರಿಸುವುದು ಒಳ್ಳೆಯದಂತೆ ಹೀಗಾಗಿ ಮಧ್ಯಾಹ್ನದ ಈ ಸಮಯದಲ್ಲಿ ಮಾಡುವ ನಿದ್ದೆ ನಿಮ್ಮನ್ನು ಆರೋಗ್ಯವಾಗಿಯೂ ಹಾಗೆ ಚಟುವಟಿಕೆಯಿಂದಲೂ ಇಡುತ್ತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment