/newsfirstlive-kannada/media/post_attachments/wp-content/uploads/2025/03/IAS-OFFICERS.jpg)
ಯುಪಿಎಸ್ಸಿ ಎಂಬ ಪರೀಕ್ಷೆ ಸಾಮಾನ್ಯರಿಗಲ್ಲ. ಶ್ರದ್ಧೆಯನ್ನ, ಜೀವನವನ್ನ, ವಿದ್ಯೆಯನ್ನ ಸಂಪೂರ್ಣವಾಗಿ ನಮ್ಮ ಸಮಯವನ್ನೇ ಅದಕ್ಕೆ ಮುಡುಪಿಡಬೇಕಾಗುತ್ತದೆ. ಇದು ದೇಶದಲ್ಲಿಯೇ ಅತ್ಯಂತ ಕಠಿಣ ಪರೀಕ್ಷೆಗಳಲ್ಲೊಂದು ಎಂದು ಹೇಳಲಾಗುತ್ತದೆ. ಪರೀಕ್ಷೆ ಬರೆದ ಲಕ್ಷಾಂತರ ಆಕಾಂಕ್ಷಿಗಳಲ್ಲಿ ಬೆರಳೆಣಿಕೆಯಷ್ಟು ಅಭ್ಯರ್ಥಿಗಳು ಮಾತ್ರ ಐಎಎಸ್ ಅಧಿಕಾರಿಯಾಗುವ ಅವಕಾಶ ಪಡೆದುಕೊಳ್ಳುತ್ತಾರೆ. ಆದರೆ ಒಂದು ವಿಷಯ ನಿಮಗೆ ಗೊತ್ತಾ. ಭಾರತದ ಯಾವ ಕಾಲೇಜ್ ಅಥವಾ ಯುನಿವರ್ಸಿಟಿಯಿಂದ ಅತಿಹೆಚ್ಚು ಐಎಎಸ್ ಅಧಿಕಾರಿಗಳು ಆಗಿದ್ದಾರೆ ಎಂದು. ಈ ಕಾಲೇಜ್ ಹಾಗೂ ಯುನಿವರ್ಸಿಟಿಗಳನ್ನು ಯುಪಿಎಸ್ಸಿ ಫ್ಯಾಕ್ಟರಿ ಎಂದೇ ಕರೆಯುತ್ತಾರೆ.
ಈ ವಿಶ್ವವಿದ್ಯಾಲಯದಿಂದ ಅತಿಹೆಚ್ಚು ಐಎಎಸ್ ಅಧಿಕಾರಿಗಳು
ನಿಮಗೆ ದೆಹಲಿ ವಿಶ್ವವಿದ್ಯಾಲಯದ ಬಗ್ಗೆ ಗೊತ್ತಿರಬಹುದು. ದೇಶದ ಅತ್ಯುನ್ನತ ವಿಶ್ವವಿದ್ಯಾಲಯಗಳಲ್ಲಿ ಅದು ಕೂಡ ಒಂದು. ಮಾಧ್ಯಮಗಳು ಮಾಡಿರುವ ವರದಿಯ ಪ್ರಕಾರ ಈ ಒಂದು ವಿಶ್ವವಿದ್ಯಾಲಯದಿಂದ 1975 ರಿಂದ 2014ರವರೆಗೆ ಒಟ್ಟು 4 ಸಾವಿರ ಅಭ್ಯರ್ಥಿಗಳು ಯುಪಿಎಸ್ಸಿ ಪಾಸ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅತಿಹೆಚ್ಚು ಐಎಎಸ್ ಆಫೀಸರ್ಸ್ಗಳನ್ನು ದೇಶಕ್ಕೆ ಕೊಟ್ಟ ಗೌರವವನ್ನು ಸಂಪಾದಿಸಿದೆ.
ಇದನ್ನೂ ಓದಿ:ಭಾರತದ ಈ ರಾಜ್ಯದಲ್ಲಿದ ನಾಗಲೋಕ.. ಇಲ್ಲಿ ಎಷ್ಟು ಪ್ರಬೇಧದ ಸರ್ಪಗಳಿವೆ ಗೊತ್ತಾ?
ದೆಹಲಿ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಕೆಲವು ಕಾಲೇಜ್ಗಳು ಕೂಡ ದೇಶಕ್ಕೆ ಅತಿಹೆಚ್ಚು ಐಎಎಸ್ ಅಧಿಕಾರಿಗಳನ್ನು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿವೆ. ಇವುಗಳಲ್ಲಿ ಮಿರಾಂಡ್ ಹೌಸ್ ಕಾಲೇಜ್, ಲೇಡಿ ಶ್ರೀರಾಮ್ ಮಹಿಳಾ ಕಾಲೇಜ್ ಮತ್ತು ಹಿಂದೂ ಕಾಲೇಜ್ನಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ಐಎಎಸ್ ಅಧಿಕಾರಿಗಳಾಗಿ ಆ ಕಾಲೇಜುಗಳಿಗೆ ಹೆಮ್ಮೆಯನ್ನು ತಂದಿದ್ದಾರೆ.
ಇದನ್ನೂ ಓದಿ: ಭಾರತೀಯ ರಾಷ್ಟ್ರೀಯ ತರಕಾರಿ ಯಾವುದು.. ಬಹುತೇಕ ಜನರಿಗೆ ಇದರ ಬಗ್ಗೆ ಗೊತ್ತೇ ಇಲ್ಲ!
ಇನ್ನು ಜೆಎನ್ಯು, ಜವಹಾರಲಾಲ್ ವಿಶ್ವವಿದ್ಯಾಲಯವೂ ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ ಯುಪಿಎಸ್ಸಿಯಂತ ಪರೀಕ್ಷೆಯನ್ನು ಸುಲಭವಾಗಿ ಪಾಸ್ ಮಾಡಿ ಸಿವಿಲ್ ಸರ್ವಿಸ್ ಸೇರಿಕೊಳ್ಳುವ ವಿದ್ಯಾರ್ಥಿಗಳು ಇಲ್ಲಿಂದ ಕಲಿತು ಆಚೆ ಬಂದವರಲ್ಲೂ ಹೆಚ್ಚಿದ್ದಾರೆ. ವರದಿಗಳ ಪ್ರಕಾರ 2014ರವರೆಗೂ ಈ ವಿಶ್ವವಿದ್ಯಾಲಯದಿಂದ ಸುಮಾರು 1375 ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಸಿವಿಲ್ ಸರ್ವಿಸ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇನ್ನು ಇದೇ ವಿಚಾರದಲ್ಲಿ ಜನಪ್ರಿಯತೆ ಪಡೆದ ಮತ್ತಷ್ಟು ಶಿಕ್ಷಣ ಸಂಸ್ಥೆಗಳು ಅಂದ್ರೆ ಐಐಟಿ ದೆಹಲಿ, ಐಐಟಿ ಕಾನ್ಪುರ್, ಬನಾರಸ್ ಹಿಂದೂ ವಿಶ್ವವಿದ್ಯಾಲಯ ಹಾಗೂ ಅಲಹಾಬಾದ್ ಯುನಿವರ್ಸಿಟಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ