ಕೇವಲ ಕಂಪ್ಯೂಟರ್​ ಸೈನ್ಸ್​ ಮಾತ್ರವಲ್ಲ.. ಇಂಜಿನಿಯರಿಂಗ್​​ನಲ್ಲಿ ಇವೆ ಸಾಕಷ್ಟು ಸ್ಪೆಷಲ್​ ಕೋರ್ಸ್​ಗಳು

author-image
Bheemappa
SSLC, ITI ಮುಗಿಸಿದವ್ರಿಗೆ ಸರ್ಕಾರಿ ಉದ್ಯೋಗ.. 9 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ
Advertisment
  • CS ಹೊರತಾಗಿ ಇರೋ ಯೂನಿಕ್​​ ಕೋರ್ಸ್​​ಗಳು ಯಾವು ಗೊತ್ತಾ?
  • ಯಾವ ಕೋರ್ಸ್​ ಸೇರಬೇಕು ಎಂಬ ಚಿಂತೆಯಲ್ಲಿ ಸ್ಟೂಡೆಂಟ್ಸ್​​
  • ಇಂಜಿನಿಯರಿಂಗ್​ ಓದಬೇಕು ಅನ್ನೋರಿಗೆ ಇದೆ ಹಲವು ಕೋರ್ಸ್

ಇತ್ತೀಚೆಗಷ್ಟೇ 2025ರ PUC Results ಅನೌನ್ಸ್​ ಆಗಿದೆ. ಈ ಬೆನ್ನಲ್ಲೇ ಸಿಇಟಿ ಎಕ್ಸಾಂಗೆ ತಯಾರಿ ಕೂಡ ನಡೆಯುತ್ತಿದೆ. ಇದು ಸೈನ್ಸ್​​ ಬ್ಯಾಗ್ರೌಂಡ್​ನಿಂದ ಬಂದಿರೋ ವಿದ್ಯಾರ್ಥಿಗಳಿಗೆ ನಡೆಯಲಿರೋ ಎಕ್ಸಾಂ ಆಗಿದೆ. ಪಿಯುಸಿ ಸೈನ್ಸ್ ಬಳಿಕ ಬಹುತೇಕ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕೋರ್ಸ್​ ಸೇರುತ್ತಾರೆ. ಅದಕ್ಕೂ ಮುನ್ನ ಸಿಇಟಿ, ಜೆಇಇ, ಸಿಯುಇಟಿ ಮತ್ತು ಕಾಮೆಡ್ ಕೆ ಪ್ರವೇಶ ಪರೀಕ್ಷೆಗಳು ಬರೆಯಲಿದ್ದಾರೆ. ಈ ಎಂಟ್ರೇನ್ಸ್​​ ಎಕ್ಸಾಂಗಳಲ್ಲಿ RANK ಪಡೆದವರು ದೇಶದ ಟಾಪ್ ಐಐಟಿ ಮತ್ತು ಎನ್‌ಐಟಿಗಳಲ್ಲಿ ಪ್ರವೇಶ ಪಡೆಯಲು ಕಾಯುತ್ತಿದ್ದಾರೆ. ಈ ಪೈಕಿ ಅನೇಕರು ಇಂಜಿನಿಯರಿಂಗ್ ಕೋರ್ಸ್‌ಗೆ ಸೇರುತ್ತಾರೆ. ಅದರಲ್ಲೂ ಹೆಚ್ಚಿನವರು ಕಂಪ್ಯೂಟರ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್ ಮತ್ತು ಕೆಮಿಕಲ್ ಇಂಜಿನಿಯರಿಂಗ್ OPT ಮಾಡಿಕೊಳ್ಳುತ್ತಾರೆ. ಆದರೆ ಈ ಕೋರ್ಸುಗಳ ಹೊರತಾಗಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಹಲವು Unique ಕೋರ್ಸ್​​ಗಳು ಇವೆ. ಈ ಕೋರ್ಸ್‌ ಮಾಡಿದವರಿಗೆ ಉದ್ಯೋಗಾವಕಾಶಗಳು ಹೆಚ್ಚೇ ಇವೆ. ಆ ಕೋರ್ಸ್​​ಗಳು ಯಾವುವು ಗೊತ್ತಾ?.

publive-image

ಇಂಜಿನಿಯರಿಂಗ್​​ನಲ್ಲಿ ಹಲವು Unique ಕೋರ್ಸ್​​ಗಳು ಯಾವುವು?

Marine Engineering
ಮೆರೈನ್ ಎಂಜಿನಿಯರಿಂಗ್​​. ಈ ಕೋರ್ಸ್​ ಮಾಡಿದವರು ಹಡಗುಗಳಲ್ಲಿ ಕೆಲಸ ಮಾಡುತ್ತಾರೆ. ಸ್ಟೀರಿಂಗ್ ಮತ್ತು ಹಡುಗು ಕಂಟ್ರೋಲ್​​ ಮಾಡೋ ಆನ್ ಬೋರ್ಡ್ ಸಿಸ್ಟಮ್ ಡಿಸೈನ್​ ಮಾಡೋದು ಮರೈನ್​​ ಇಂಜಿನಿಯರ್​ಗಳ ಕೆಲಸ. ಜತೆಗೆ ಸಮುದ್ರದಲ್ಲಿ ನ್ಯಾವಿಗೇಟ್ ಮಾಡಲು ಮತ್ತು ಹುಡುಕಲು ಬಳಸುವ ಹಡಗುಗಳನ್ನು ಕೂಡ ಡಿಸೈನ್​ ಮಾಡುತ್ತಾರೆ. ನೌಕಾ ರಕ್ಷಣಾ, ಪರಿಸರ ಸಂಶೋಧನೆ, ಅಂತರಾಷ್ಟ್ರೀಯ ವ್ಯಾಪಾರ ಮತ್ತು ಸಂಪನ್ಮೂಲ ಹೊರತೆಗೆಯುವ ಪ್ರಮುಖ ಕಾರ್ಯಾಚರಣೆ ಲೀಡ್​ ಮಾಡುತ್ತಾರೆ.

Artificial Intelligence ಮತ್ತು Machine Learning

Artificial Intelligence ಮತ್ತು Machine Learning ಇಜಿನಿಯರಿಂಗ್​​. ಈ ಕೋರ್ಸ್​ಗೆ ಹಾಟ್​ ಸೆಲ್ಲಿಂಗ್​ ಕೇಕ್​ ಎನ್ನಬಹುದು. ಸದ್ಯ ಅತೀ ಹೆಚ್ಚು ಡಿಮ್ಯಾಂಡ್​ ಇರೋ ಕೋರ್ಸ್​ ಇದು. AI and ML ಕೋರ್ಸ್​ ಕಲಿತವರು mathematics, cognitive science, electronics ಕ್ಷೇತ್ರದಲ್ಲಿ ಕೆಲಸ ಮಾಡಬಹುದು. ಡಾಟಾ ಕಲೆಕ್ಷನ್​​, ಸ್ಟ್ರಾಟಜಿ ಮಾಡುವುದು, ಅನಲೈಸಿಂಗ್​​ ಇವ್ರ ಕೆಲಸ.

Data Science Engineering

ಡೇಟಾ ಸೈನ್ಸ್ ಇಂಜಿನಿಯರಿಂಗ್​ ಹೆಚ್ಚು ಡಿಮ್ಯಾಂಡ್​ ಇರೋ ಕೋರ್ಸ್​​. ಇದು ವಿದ್ಯಾರ್ಥಿಗಳಿಗೆ ಡೇಟಾ ಬಳಸಲು ಸುಲಭವಾದ ಮಾರ್ಗಗಳನ್ನು ಕಲಿಸುತ್ತದೆ. ಜತೆಗೆ ಡೇಟಾವನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿಸುತ್ತದೆ. ಕಂಪ್ಯೂಟರ್ ವಿಜ್ಞಾನ, ವ್ಯವಹಾರ ವಿಶ್ಲೇಷಣೆ, ಯಂತ್ರ ಕಲಿಕೆಯಂತಹ ಅನೇಕ ಕಾನ್ಸೆಪ್ಟ್​ಗಳ ಬಗ್ಗೆ ಓದಬಹುದು. Amazon, Wipro ಮತ್ತು HCL ನಂತಹ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಡೇಟಾ ಆರ್ಕಿಟೆಕ್ಟ್, ಡೇಟಾ ಇಂಜಿನಿಯರ್ ಮತ್ತು ಡೇಟಾಬೇಸ್ ಅಡ್ಮಿನಿಸ್ಟ್ರೇಟರ್ ಹುದ್ದೆಗಳಲ್ಲಿ ಕೆಲಸ ಮಾಡಲು ಅವಕಾಶಗಳಿವೆ.

publive-image

ಕೃಷಿ ಇಂಜಿನಿಯರಿಂಗ್

ಕೃಷಿ ಇಂಜಿನಿಯರಿಂಗ್ ಈ ಬೆಸ್ಟ್​ ಕೋರ್ಸ್​. ಇತ್ತೀಚಿನ ದಿನಗಳಲ್ಲಿ ಭಾರೀ ಬೇಡಿಕೆ ಇರೋ ಕೋರ್ಸ್ ಇದು​. ಕೃಷಿಗೆ ಬಳಸಬಹುದಾದ ಅತ್ಯಾಧುನಿಕ ಉಪಕರಣಗಳು, ಈಕ್ಷೇತ್ರದ ಸುಧಾರಣೆ ಮತ್ತು ಅಭಿವೃದ್ಧಿಗೆ ಅಗತ್ಯವಿರೋ ವಿಷಯಗಳ ಬಗ್ಗೆ ಕಲಿಯಬಹುದು. ಈ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದವರಿಗೆ ಉದ್ಯೋಗಾವಕಾಶ ಹೆಚ್ಚಾಗಿವೆ.

ಪೆಟ್ರೋಲಿಯಂ ಇಂಜಿನಿಯರಿಂಗ್

ಎಷ್ಟೋ ದೇಶಗಳು ಅನ್‌ಶೋರ್ ಮತ್ತು ಆಫ್‌ಶೋರ್ ಪೆಟ್ರೋಲಿಯಂ ಘಟಕಗಳನ್ನು ಅಭಿವೃದ್ಧಿ ಪಡಿಸುತ್ತಿವೆ. ಅಲ್ಲದೇ ಇಡೀ ಜಗತ್ತಿನಾಂದ್ಯಂತ ಹಲವು ಕಂಪನಿಗಳು ಪೆಟ್ರೋಲಿಯಂ ಇಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗ ನೀಡಲು ಮುಂದಾಗಿವೆ. ಈ ಕೋರ್ಸ್​ ಮಾಡಿದವರಿಗೆ ಡ್ರಿಲ್ಲಿಂಗ್ ಮತ್ತು ಜಿಯೋಲಾಜಿಕಲ್ ಡಾಟಾ ಅನಾಲಿಸಿಸ್ ಬಗ್ಗೆ ತರಬೇತಿ ನೀಡಲಾಗುತ್ತದೆ.

ಜೆನೆಟಿಕ್ಸ್ ಇಂಜಿನಿಯರಿಂಗ್

ಇದು ಹೈಬ್ರೀಡ್ ಪ್ರೋಫೇಶನ್ ಕೋರ್ಸ್​ ಎನ್ನಬಹುದು. ಈ ಕೋರ್ಸ್​ನಲ್ಲಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ಎರಡನ್ನು ಜೊತೆ ಜೊತೆಯಲ್ಲೇ ಕಲಿಯಬಹುದು. ಮಾನವ ಮತ್ತು ಸಸ್ಯ ಎರಡರ ಜೆನೆಟಿಕ್ಸ್ ಬಗ್ಗೆ ಇಲ್ಲಿ ಅಧ್ಯಯನ ಮಾಡಬಹುದು. ಡಿಎನ್‌ಎ ಬದಲಾವಣೆಗಳೊಂದಿಗೆ ಸಸ್ಯ ಮತ್ತು ಜೀವಿಗಳ ಗುಣಗಳನ್ನು ಬದಲಾಯಿಸೋ ಟೆಕ್ನಾಲಜಿ ತಿಳಿದುಕೊಳ್ಳಬಹುದು.

ಸೌಂಡ್ ಇಂಜಿನಿಯರಿಂಗ್

ಸೌಂಡ್​ ಇಂಜಿನಿಯರಿಂಗ್​ ಕೂಡ ONE OF THE BEST ಕೋರ್ಸ್​​. ಬ್ರಾಡ್‌ಕಾಸ್ಟಿಂಗ್ ಕ್ಷೇತ್ರಕ್ಕೆ ಬೇಕಾದ ಉಪಕರಣಗಳು ಮತ್ತು ಇತರೆ ಟೆಕ್ನಿಕಲ್ ಅವಶ್ಯಕತೆಗಳಿಗೆ ಸೌಂಡ್ ಇಂಜಿನಿಯರಿಂಗ್ ಅಗತ್ಯ. ಡಿಜಿಟಲ್ ಇಂಡಸ್ಟ್ರಿ ಇಂದು ಹೆಚ್ಚು ಗಮನ ಸೆಳೆಯುತ್ತಿದ್ದು, ಇಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಇವೆ.

ಇದನ್ನೂ ಓದಿ:ವಿವಿಧ ವ್ಯವಸ್ಥಾಪಕ ಹುದ್ದೆಗಳ ನೇಮಕಾತಿ.. ಎಷ್ಟು ಉದ್ಯೋಗಗಳು ಖಾಲಿ ಇವೆ?

publive-image

ಎನರ್ಜಿ ಇಂಜಿನಿಯರಿಂಗ್

ಇಂದು ಸಾಂಪ್ರದಾಯಿಕ ಇಂಧನ ಮೂಲಗಳು ಕಡಿಮೆ ಆಗುತ್ತಿವೆ. ಹಾಗಾಗಿ ಎನರ್ಜಿ ಇಂಜಿನಿಯರಿಂಗ್ ಪದವೀಧರರ ಅವಶ್ಯಕತೆ ಹೆಚ್ಚಿದೆ. ವಿದ್ಯಾರ್ಥಿಗಳು ಇಂಧನಗಳ ಬಳಕೆ ಕಡಿಮೆ ಮಾಡುವುದು ಹೇಗೆ? ಎಂದು ಕಲಿಯಬಹುದು. ಜೊತೆಗೆ ಹೊಸ ಇಂಧನ ಮೂಲಗಳನ್ನು ಗುರುತಿಸುವ ಬಗ್ಗೆಯೂ ಅರ್ಥ ಮಾಡಿಕೊಳ್ಳಬಹುದು. ಎಲ್ಲಾ ಎಂಜಿನಿಯರಿಂಗ್ ಪದವಿಗಳಿಗಿಂತಲೂ ಇದಕ್ಕೆ ಹೆಚ್ಚು ಡಿಮ್ಯಾಂಡ್​ ಇದೆ.

ಸ್ಪೋರ್ಟ್ಸ್ ಟೆಕ್ನಾಲಜಿ ಇಂಜಿನಿಯರಿಂಗ್

ಇದು ಕಂಪ್ಯೂಟರ್ ಟೆಕ್ನಾಲಜಿ ಪರಿಚಯಿಸೋ ವೃತ್ತಿಪರ ಕೋರ್ಸ್​. ಸ್ಪೋರ್ಟ್ಸ್ ಟೆಕ್ನಾಲಜಿ ಇಂಜಿನಿಯರಿಂಗ್ ಕ್ಷೇತ್ರ MOST SUCCESSFUL SECTOR. ವಿದ್ಯಾರ್ಥಿಗಳು ಕಂಪ್ಯೂಟರ್ ನಲ್ಲಿ ವೈವಿಧ್ಯಮಯ ಕ್ರೀಡಾ ಉಪಕರಣಗಳನ್ನು ಡಿಸೈನ್ ಮಾಡುವ ಬಗ್ಗೆ ತರಬೇತಿ ಪಡೆಯುತ್ತಾರೆ. ಕ್ರೀಡಾ ಉಪಕರಣಗಳನ್ನು ತಯಾರಿಸುವ ಕಂಪನಿಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಿವೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment