newsfirstkannada.com

ವಿಶ್ವದಲ್ಲೇ ಇದೇ ಮೊದಲು.. ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಭಾರತ; ಓದಲೇಬೇಕಾದ ಸ್ಟೋರಿ!

Share :

Published June 3, 2024 at 2:08pm

Update June 3, 2024 at 2:17pm

  ದೇಶದಲ್ಲಿ ಒಟ್ಟು 64.2 ಕೋಟಿ ಮತದಾರರು ಮತ ಚಲಾಯಿಸಿದ್ದಾರೆ

  31 ಕೋಟಿಗೂ ಹೆಚ್ಚಿನ ಮಹಿಳೆಯರು ಚುನಾವಣೆಯಲ್ಲಿ ಮತದಾನ

  ಲೋಕಸಭಾ ಚುನಾವಣೆಯ ಸಾರ್ವಕಾಲಿಕ ದಾಖಲೆಯ ವಿವರ ಇಲ್ಲಿದೆ

ನವದೆಹಲಿ: ವಿಶ್ವದ ಅತಿದೊಡ್ಡ ಸಾರ್ವತ್ರಿಕ ಚುನಾವಣೆ ಈ ಬಾರಿ ಭಾರತದಲ್ಲಿ ನಡೆದಿದೆ. 2024ರ ಲೋಕಸಭಾ ಚುನಾವಣೆಯ ಮತದಾನ ಮುಕ್ತಾಯವಾಗಿದ್ದು, ನಾಳೆ ಇಡೀ ವಿಶ್ವವೇ ಕಾಯುತ್ತಿರುವ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದೆ.

ಇದನ್ನೂ ಓದಿ: ಚುನಾವಣೋತ್ತರ ಲೆಕ್ಕಾಚಾರ; ಬಿಜೆಪಿ ನೇತೃತ್ವದ ಎನ್​ಡಿಎ 400 ಸೀಟು ಗೆಲ್ಲೋದು ಗ್ಯಾರಂಟಿ! 

ಮತದಾನ ಮುಗಿದ ಬಳಿಕ ಕೇಂದ್ರ ಚುನಾವಣಾ ಆಯೋಗ ಮಹತ್ವದ ಸುದ್ದಿಗೋಷ್ಟಿ ನಡೆಸಿದೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು ಈ ಬಾರಿ ನಡೆದ ಲೋಕಸಭಾ ಚುನಾವಣೆಯ ಸಾರ್ವಕಾಲಿಕ ದಾಖಲೆಯ ವಿವರಗಳನ್ನು ಹಂಚಿಕೊಂಡಿದ್ದಾರೆ.

ಸುದ್ದಿಗೋಷ್ಟಿಯ ಹೈಲೈಟ್ಸ್‌ ಏನು?

 • ಮತದಾನದಲ್ಲಿ ಭಾರತ ವಿಶ್ವದಾಖಲೆ ನಿರ್ಮಾಣ ಮಾಡಿದೆ
 • ದೇಶದಲ್ಲಿ ಒಟ್ಟು 64.2 ಕೋಟಿ ಮತದಾರರು ಮತ ಚಲಾಯಿಸಿದ್ದಾರೆ
 • ವಿಶ್ವದ ಯಾವುದೇ ದೇಶದಲ್ಲೂ ಇಷ್ಟೊಂದು ಮತದಾನ ಆಗಿಲ್ಲ
 • G20 ದೇಶಗಳ ಒಂದೂವರೆ ಪಟ್ಟು ಮತದಾನ ಆಗಿದೆ
 • ಮತ ಚಲಾಯಿಸಿದ ಮತದಾರರಿಗೆ ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವಿಸಿದ ಸಿಇಸಿ
 • 31 ಕೋಟಿಗೂ ಹೆಚ್ಚಿನ ಮಹಿಳೆಯರು ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ
 • ವಿಶ್ವದಲ್ಲೇ ಭಾರತದಲ್ಲಿ ಹೆಚ್ಚಿನ ಮಹಿಳೆಯರು ಮತ ಚಲಾಯಿಸಿದ್ದಾರೆ
 • ಮಹಿಳೆಯರ ಬಗ್ಗೆ ಅಗೌರವಯುತವಾಗಿ ಮಾತನಾಡಬೇಡಿ ಎಂದು ರಾಜಕೀಯ ಪಕ್ಷಗಳಿಗೆ ಹೇಳಿದ್ದೇವು
 • ಐತಿಹಾಸಿಕ ಚುನಾವಣೆಯನ್ನು ನಡೆಸಿದ್ದಕ್ಕೆ ನಮಗೆ ಖುಷಿ ಇದೆ
 • ಚುನಾವಣಾ ಸಿಬ್ಬಂದಿಯನ್ನು ನಾವು ಶ್ಲಾಘಿಸುತ್ತೇವೆ
 • ಚುನಾವಣೆಗಾಗಿ 135 ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿತ್ತು
 • ಜಮ್ಮು ಕಾಶ್ಮೀರದಲ್ಲಿ ಶೇ. 58.58ರಷ್ಟು ಮತ ಚಲಾವಣೆಯಾಗಿದೆ
 • ನಾವು ಕಾಶ್ಮೀರದ ವಲಸಿಗರ ಮನಸ್ಥಿತಿಯನ್ನು ಬದಲಾಯಿಸಿದ್ದೇವೆ
 • ಇದು ದೇಶದ ನಿಜವಾದ ಸಕ್ಸಸ್ ಸ್ಟೋರಿ ಎಂದ ಸಿಇಸಿ ರಾಜೀವ್ ಕುಮಾರ್
 • ಗ್ರೇಟ್ ನಿಕೋಬಾರ್‌ನಲ್ಲಿ ಮೊದಲ ಬಾರಿಗೆ ಶೋಂಪೇನ್ ಬುಡಕಟ್ಟು ಸಮುದಾಯ ಮತ ಚಲಾಯಿಸಿದೆ
 • ಛತ್ತೀಸ್‌ಗಢ ರಾಜ್ಯದ ಸರಗುಜಾ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯ ಮೊದಲ ಬಾರಿಗೆ ಮತದಾನ
 • 23 ವಿದೇಶಗಳ ನಿಯೋಗಗಳು ಭಾರತಕ್ಕೆ ಭೇಟಿ ನೀಡಿ ಚುನಾವಣಾ ಪ್ರಕ್ರಿಯೆ ಅಧ್ಯಯನ ಮಾಡಿವೆ
 • ಚುನಾವಣೆಯಲ್ಲಿ ಬರೋಬ್ಬರಿ 10 ಸಾವಿರ ಕೋಟಿ ಫ್ರೀಬಿ, ಮದ್ಯ, ನಗದು, ಡ್ರಗ್ಸ್ ವಶಕ್ಕೆ
 • 1,054 ಕೋಟಿ ರೂ ನಗದು, 898 ಕೋಟಿ ರೂ ಲಿಕ್ಕರ್, 1,459 ಕೋಟಿ ಚಿನ್ನಾಭರಣ , 2198 ಕೋಟಿ ರೂಪಾಯಿ ಫ್ರೀಬಿ ವಶಕ್ಕೆ
 • ಕೇಂದ್ರ ಸಚಿವರು ಸೇರಿದಂತೆ ಎಲ್ಲರ ಹೆಲಿಕಾಪ್ಟರ್ ತಪಾಸಣೆ ಮಾಡಲಾಗಿದೆ
 • ದೇಶದಲ್ಲಿ ಚುನಾವಣಾ ಹಿಂಸಾಚಾರದ ದೊಡ್ಡ ಘಟನೆ ನಡೆದಿಲ್ಲ
 • ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಶೇ.90ರಷ್ಟು ದೂರು ಇತ್ಯರ್ಥ
 • 6 ಮುಖ್ಯಮಂತ್ರಿಗಳ ಕಚೇರಿಯ ಅಧಿಕಾರಿಗಳನ್ನ ವರ್ಗಾವಣೆ ಮಾಡಿದ್ದೇವೆ
 • ರಾಜಕೀಯ ನಾಯಕರ ಸಂಬಂಧಿಗಳನ್ನು ವರ್ಗಾವಣೆ ಮಾಡಿದ್ದೇವೆ
 • ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿಗಳ ಮೇಲೆ ಅಮಿತ್ ಶಾ ಪ್ರಭಾವ ಬೀರಿದ್ದಾರೆ ಎಂಬ ಆರೋಪ
 • ಯಾರು ಪ್ರಭಾವ ಬೀರಿದ್ದಾರೆ ಎಂದು ಹೇಳಿ, ನಾವು ಅವರಿಗೆ ಶಿಕ್ಷೆ ನೀಡುತ್ತೇವೆ ಎಂದ ರಾಜೀವ್ ಕುಮಾರ್
 • ಪಕ್ಷಗಳ ಏಜೆಂಟ್‌ಗಳು ಎಲ್ಲವನ್ನೂ ಸೂಕ್ತವಾಗಿ ಪರಿಶೀಲಿಸಲಿ, ನಾವು ಕೂಡ ಇದನ್ನು ಹೇಳುತ್ತಿದ್ದೇವೆ
 • ಯಾವುದೇ ಕ್ಷೇತ್ರದಲ್ಲೂ ಯಾವುದೇ ಅಭ್ಯರ್ಥಿಯನ್ನು ಬಲವಂತದಿಂದ ಹಿಂದೆ ಸರಿಸಬಾರದು
 • ಬ್ಯಾಲೆಟ್‌ನಿಂದ ಬುಲೆಟ್ ಮೇಲೆ ಗೆಲುವು ಸಾಧಿಸುವುದು ನಡೆದಿದೆ
 • ಆಂಧ್ರ, ಬಂಗಾಳದಲ್ಲಿ ಸೆಂಟ್ರಲ್ ಪೋರ್ಸ್ ನಿಯೋಜನೆ ಮಾಡಲಾಗಿತ್ತು
 • ಜಮ್ಮು ಕಾಶ್ಮೀರದಲ್ಲಿ ಅತಿ ಶೀಘ್ರದಲ್ಲೇ ವಿಧಾನಸಭಾ ಚುನಾವಣೆ ನಡೆಸುತ್ತೇವೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಶ್ವದಲ್ಲೇ ಇದೇ ಮೊದಲು.. ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಭಾರತ; ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2024/06/Indian-Election-Press-Meet.jpg

Load More