Advertisment

ಮಾನ್ಯತಾ ಟೆಕ್ ಪಾರ್ಕ್ ಅಲ್ಲ ಫಾಲ್ಸ್‌.. ಒಂದೇ ದಿನದ ಮಳೆಗೆ ಜಲಾವೃತ; ಟಾಪ್ 10 ಫೋಟೋಗಳು ಇಲ್ಲಿದೆ

author-image
admin
Updated On
ಮಾನ್ಯತಾ ಟೆಕ್ ಪಾರ್ಕ್ ಅಲ್ಲ ಫಾಲ್ಸ್‌.. ಒಂದೇ ದಿನದ ಮಳೆಗೆ ಜಲಾವೃತ; ಟಾಪ್ 10 ಫೋಟೋಗಳು ಇಲ್ಲಿದೆ
Advertisment
  • ಸಿಲಿಕಾನ್ ಸಿಟಿಯ ಮಾನ್ಯತಾ ಟೆಕ್ ಪಾರ್ಕ್ ಪ್ರವಾಹದಲ್ಲಿ ಮುಳುಗಡೆ
  • ಮಾನ್ಯತಾ ಟೆಕ್ ಫಾಲ್ಸ್‌ನ ಪ್ರವಾಹದ ವಿಡಿಯೋ ಸಿಕ್ಕಾಪಟ್ಟೆ ವೈರಲ್‌!
  • ಐಟಿ ಬಿಟಿ ಕಂಪನಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚನೆ

ಮಳೆ, ಮಳೆ, ಮಳೆ.. ಭರ್ಜರಿ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರು ತೇಲುವ ದೋಣಿಯಂತೆ ಕಾಣುತ್ತಿದೆ. ಒಂದೇ ದಿನ ನಿರಂತರ ಸುರಿದ ವರ್ಷಧಾರೆಗೆ ರಸ್ತೆಗಳೆಲ್ಲಾ ನದಿಯಾಗಿದೆ. ವಾಹನ ಸವಾರರಂತೂ ಹೈರಾಣಾಗಿ ಹೋಗಿದ್ದಾರೆ.

Advertisment

publive-image

ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಅಂತು ಪ್ರವಾಹದಲ್ಲಿ ಮುಳುಗಡೆಯಾಗಿದೆ.

publive-image

ಮಾನ್ಯತಾ ಟೆಕ್ ಪಾರ್ಕ್‌ನ ರಸ್ತೆಗಳಂತೂ ನದಿಯಾಗಿದ್ದು ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

publive-image

ಮಾನ್ಯತಾ ಟೆಕ್ ಪಾರ್ಕ್‌ನ ಈ ದೃಶ್ಯಗಳನ್ನು ನೋಡಿದ ನೆಟ್ಟಿಗರು ಇದು ಟೆಕ್ ಪಾರ್ಕ್ ಅಲ್ಲ ಟೆಕ್ ಫಾಲ್ಸ್ ಎಂದು ವ್ಯಂಗ್ಯವಾಡುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಭರ್ಜರಿ ಮಳೆ; ನಾಳೆಯಿಂದ ಐಟಿ-ಬಿಟಿ ಉದ್ಯೋಗಿಗಳಿಗೆ ವರ್ಕ್​​ ಫ್ರಮ್​​ ಹೋಮ್​​! 

Advertisment

publive-image

ಬಂಗಾಳ ಕೊಲ್ಲಿಯಲ್ಲಿ ಉಂಟಾದ ಹವಾಮಾನ ವೈಪರೀತ್ಯಕ್ಕೆ ಮಳೆಯ ಆರ್ಭಟ ಜೋರಾಗಿದೆ. ರಾಜ್ಯದ ಹಲವೆಡೆ ಇಂದು ಬೆಳಗ್ಗೆಯಿಂದ ಒಂದೇ ಸಮನೆ ಮಳೆಯಾಗುತ್ತಿದ್ದು ಹಲವೆಡೆ ಅನಾಹುತಗಳು ಸಂಭವಿಸಿದೆ.

publive-image

ಬೆಂಗಳೂರು ನಗರದಲ್ಲಿ ನಿರಂತರ ಮತ್ತು ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್‌ ಹೊರಡಿಸಿದೆ.

publive-image

ಇದರ ಬೆನ್ನಲ್ಲೇ ಮುಂಜಾಗ್ರತಾ ಕ್ರಮವಾಗಿ ನಾಳೆಯಿಂದ ಐಟಿ ಬಿಟಿ ಮತ್ತು ಖಾಸಗಿ ಕಂಪನಿಗಳಿಗೆ ಮನೆಯಿಂದಲೇ ಕೆಲಸ ಮಾಡಿ ಎಂದು ಘೋಷಿಸಲಾಗಿದೆ.

Advertisment

publive-image

ಬೆಂಗಳೂರಿನಲ್ಲಿರುವ ಐಟಿ, ಬಿಟಿ ಮತ್ತು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಎಲ್ಲಾ ಉದ್ಯೋಗಿಗಳ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ನಾವು ಆದ್ಯತೆ ನೀಡುತ್ತಿದ್ದೇವೆ. ಪ್ರವಾಹ, ಜಲಾವೃತ ಮತ್ತು ಸಂಚಾರ ದಟ್ಟಣೆಯಿಂದಾಗಿ ಸಾರಿಗೆ ವ್ಯವಸ್ಥೆಗಳು ಅಸ್ತವ್ಯಸ್ತವಾಗಬಹುದು, ಕಚೇರಿ ಆವರಣಕ್ಕೆ ಪ್ರಯಾಣಿಸುವುದು ಅಪಾಯವನ್ನು ಉಂಟು ಮಾಡುತ್ತದೆ.

publive-image

ಮುನ್ನೆಚ್ಚರಿಕೆ ಕ್ರಮವಾಗಿ, IT, Bt ಮತ್ತು ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ 16ನೇ ಅಕ್ಟೋಬರ್ 2024ರಂದು ಮನೆಯಿಂದ ಕೆಲಸ ಮಾಡಲು (WFH) ಅನುಮತಿ ನೀಡುವಂತೆ ಶಿಫಾರಸು ಮಾಡಲಾಗಿದೆ.

publive-image

ಮತ್ತೊಂದು ಕಡೆ ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಮಕ್ಕಳಿಗೆ ಶಾಲೆಗೆ ಬರಲು ಕಷ್ಟ ಎದುರಾಗಿದೆ. ಹೀಗಾಗಿ ರಾಜಧಾನಿಯ ಶಾಲೆಗಳಿಗೆ ರಜೆ ನೀಡಲು ಬೆಂಗಳೂರು ನಗರ ಡಿಸಿ ಜಗದೀಶ್ ಅವರು ಸೂಚನೆ ನೀಡಿದ್ದಾರೆ. ನಾಳೆ ಬೆಂಗಳೂರು ವ್ಯಾಪ್ತಿಯ ಶಾಲಾ ಕಾಲೇಜಿಗಳಿಗೆ ರಜೆ ಘೋಷಿಸಿ ಬೆಂಗಳೂರು ಜಿಲ್ಲಾಡಳಿತ ಆದೇಶ ನೀಡಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment