ಇತಿಹಾಸ ಕಂಡು ಕೇಳರಿಯದ ಭಯಾನಕ ಅಗ್ನಿ ನರ್ತನ, ಸಿಕ್ಕಿದ್ದೆಲ್ಲವೂ ಸುಟ್ಟು ಭಸ್ಮ, 11 ಜನರ ದುರಂತ ಅಂತ್ಯ

author-image
Gopal Kulkarni
Updated On
ಲಾಸ್ ಎಂಜೆಲ್ಸ್ ಬೆಂಕಿಗೆ ಸೆಲೆಬ್ರೆಟಿಗಳ ಭವ್ಯ ಬಂಗಲೆಗಳು ಭಸ್ಮ; ಐಷಾರಾಮಿ ಮನೆಗಳು ಸುಟ್ಟು ಕರಕಲು
Advertisment
  • ನೂರಾರು ಅವಾಂತರ ಸೃಷ್ಟಿಸಿದ ಕ್ಯಾಲಿಫೋರ್ನಿಯಾದ ಕಾಡ್ಗಿಚ್ಚು
  • ಹಲವಾರು ಸೆಲೆಬ್ರೆಟಿಗಳ ಮನೆ ಸುಟ್ಟು ಭಸ್ಮ, 11 ಜನರ ದುರಂತ ಅಂತ್ಯ
  • ಹೆಲಿಕಾಪ್ಟರ್​ಗಳ ಮೂಲಕ ಬೆಂಕಿ ನಂದಿಸುವ ಮಹಾಕಾರ್ಯ ಜಾರಿ

ಕ್ಯಾಲಿಫೋರ್ನಿಯಾದ ಕಾಡ್ಗಿಚ್ಚಿನಿಂದ ಹಾಲಿವುಡ್‌ ಕಲಾವಿದರು ಮನೆ ಕಳೆದುಕೊಂಡಿದ್ದಾರೆ. ಪ್ಯಾರಿಸ್ ಹಿಲ್ಟ್, ಡೈರೆಕ್ಟರ್ ಮೆಲ್ ಗಿಬ್ಸನ್, ಹಾಸ್ಯ ನಟ ಬಿಲ್ಲಿ ಕ್ರಿಸ್ಟಲ್ ಕೂಡ ಮನೆ ಕಳೆದುಕೊಂಡಿದ್ದು, ತಮ್ಮ ಆಸೆಯ ಮನೆಗಳ ಬಗ್ಗೆ ಹಾಲಿವುಡ್‌ನ ಹೆಸರಾಂತ ನಟರು ಬೇಸರ ವ್ಯಕ್ತಪಡಿಸಿದ್ದಾರೆ..

ಹಾಲಿವುಡ್​​​ನ ಹತ್ತಾರು ಸೆಲಬ್ರಿಟಿಗಳ ಮನೆಗಳು ಭಸ್ಮ
ಯಾರ ಊಹೆಗೂ ಸಿಗದಷ್ಟು.. ಯಾರೂ ಅಳತೆ ಮಾಡದಷ್ಟು. ಯಾರೂ ಮರೆಯಲಾರದಷ್ಟು. ಇದು ಇತಿಹಾಸವೇ ಕಂಡು ಕೇಳರಿಯದ ಭಯಾನಕ ಅಗ್ನಿ ನರ್ತನ. ಸಿಕ್ಕಿದ್ದೆಲ್ಲವೂ ಸುಟ್ಟು ಭಸ್ಮವಾಗಿದೆ. ಲಾಸ್ ಏಂಜಲೀಸ್‌ನ ಅಲ್ಟಾಡೆನಾ, ಪಸಾಡೆನಾ ಮತ್ತು ಪೆಸಿಫಿಕ್ ಪಾಲಿಸೇಡ್ಸ್‌ನ ಹಾಲಿವುಡ್ ಹಿಲ್ಸ್‌ ಅನ್ನ ಈ ಭೀಕರ ಕಾಡ್ಗಿಚ್ಚು ಆವರಿಸಿದೆ. ಬೆಂಕಿ ಕೆನ್ನಾಲಿಗೆಯನ್ನ 11 ಮಂದಿ ಸುಟ್ಟು ಕರಕಲಾಗಿದ್ದಾರೆ.
ಸಾಂತಾ ಅನಾ ಎಂದು ಕರೆಯಲಾದ ಶಕ್ತಿಶಾಲಿ ಒಣ ಹವೆಯಿಂದ ಸೃಷ್ಟಿಯಾದ ಬೆಂಕಿಯು ತನ್ನ ಕೆನ್ನಾಲಿಗೆಗಳನ್ನ ಚಾಚಿ ಮನೆಗಳು ಹಾಗೂ ಕಟ್ಟಡಗಳನ್ನ ಆಹುತಿ ಪಡೆದಿದೆ. ಪಾಲಿಸೇಡ್ಸ್​​ನಲ್ಲಿ 19 ಸಾವಿರದ 978 ಎಕರೆ.. ಈಟನ್​ನಲ್ಲಿ 13 ಸಾವಿರದ 956 ಎಕರೆ.. ಕೆನ್ನೆತ್​ನಲ್ಲಿ 906 ಎಕರೆ.. ಹರ್ಸ್ಟ್​ನಲ್ಲಿ 771 ಎಕರೆ. ಲಿಡಿಯಾದಲ್ಲಿ 394 ಎಕರೆ ಭೂಮಿಯನ್ನ ಕಾಡ್ಗಿಚ್ಚು ನುಂಗಿ ಹಾಕಿದೆ. ಸುಮಾರು 10,000ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ. 600ಕ್ಕೂ ಹೆಚ್ಚು ಕ್ಯಾಲಿಫೋರ್ನಿಯಾ ನ್ಯಾಷನಲ್ ಗಾಡ್​ರ್ೞ. 1,059 ಅಗ್ನಿಶಾಮಕ ಯಂತ್ರ. 143 ನೀರಿನ ಟ್ಯಾಂಕರ್ಸ್. 116 ಬುಲ್ಡೋಜರ್‌.. ಹೆಲಿಕಾಪ್ಟರ್‌ಗಳು ಮತ್ತು ಏರ್ ಟ್ಯಾಂಕರ್‌ಗಳು ಬೆಂಕಿ ನಂದಿಸುವ ಮಹಾ ಹೋರಾಟಕ್ಕಿಳಿದಿವೆ.

ಈ ದುರದೃಷ್ಟಕರ ದುರಂತದಲ್ಲಿ ಅನೇಕ ಹಾಲಿವುಡ್‌ ಕಲಾವಿದರ ಕನಸಿನ ಮನೆಗಳು ಸುಟ್ಟು ಕರಲಾಗಿವೆ. ಪ್ರೀತಿಯಿಂದ ಕಷ್ಟಪಟ್ಟು ಕಟ್ಟಿದ ಮನೆಗಳು ಭಸ್ಮಗೊಂಡಿವೆ. ಸ್ಟಾರ್ ನಟ ಬಿಲ್ಲಿ ಕ್ರಿಸ್ಟಲ್ 46 ವರ್ಷದಿಂದ ವಾಸವಿದ್ದ ಮನೆ ಸುಟ್ಟು ನೆಲಸಮವಾಗಿದೆ.ಅಪೋಕ್ಯಾಲಿಪ್ಟೋ ಚಿತ್ರದ ಡೈರೆಕ್ಟರ್ ಮೆಲ್ ಗಿಬ್ಸನ್ ಮನೆ ಕೂಡ ನಾಶ ಆಗಿದೆ. ಮ್ಯಾಡ್ ಮ್ಯಾಕ್ಸ್ ಚಿತ್ರದ ನಟ ಗಿಬ್ಸನ್ ಈ ಘಟನೆ ನಡೆದಾಗ ಊರಲ್ಲಿ ಇರಲಿಲ್ಲ..
ನಟಿ ಪ್ಯಾರಿಸ್ ಹಿಲ್ಟನ್ ಮನೆ ಕೂಡ ಭಸ್ಮ ಆಗಿದೆ. ಈ ದುರಂತವನ್ನ ಟಿವಿಯಲ್ಲಿ ಲೈವ್ ಆಗಿಯೇ ನೋಡಿದ ಪ್ಯಾರಿಸ್ ಹಿಲ್ಟನ್​, ಕಣ್ಣಂಚಲ್ಲಿ ನೀರು ತುಂಬ್ಕೊಂಡ್ರು.

ಕ್ಯಾಲಿಫೋರ್ನಿಯಾದಲ್ಲಿರೋ ಕಲಾವಿದರಾದ ಕ್ಯಾರಿ ಎಲ್ವೆಸ್, ಮ್ಯಾಂಡಿ ಮೂರ್ ಮನೆಗಳೂ ಭಸ್ಮ ಆಗಿವೆ.. ಹಾಲಿವುಡ್‌ನ ಹೆಸರಾಂತ ನಟ ಜೆಫ್ ಬ್ರಿಡ್ಜಸ್ ಮನೆ ಕೂಡ ಸುಟ್ಟು ಹೋಗಿದೆ. ಸಾಂತಾ ಅನಾ ಎಂಬ ಶಕ್ತಿಶಾಲಿ ಒಣಹವೆ ಇವರೆಲ್ಲರ ಮನೆ ಮಠಗಳನ್ನ ಭಸ್ಮಾಸುರನಂತೆ ನುಂಗಿ ಹಾಕಿದೆ.. ಸದ್ಯಕ್ಕೆ ಕಾಡ್ಗಿಚ್ಚು ಆರಿಲ್ಲದ ಕಾರಣ ಅನಾಹುತ ಸರಣಿ ಮುಂದುವರೆಯುವ ಭೀತಿ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment