ಕೊಪ್ಪಳದಲ್ಲಿ 98 ಜನರಿಗೆ ಜೀವಾವಧಿ ಶಿಕ್ಷೆ ನೀಡಿದ ಕೋರ್ಟ್​; ಏನಿದು ಮರಕುಂಬಿ ಪ್ರಕರಣ? ಇಲ್ಲಿದೆ ಮಾಹಿತಿ​

author-image
AS Harshith
Updated On
ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 97 ಮಂದಿಗೆ ಜಾಮೀನು; ಕೊಪ್ಪಳದ ಮರಕುಂಬಿ ಕೇಸ್‌ಗೆ ಹೊಸ ಟ್ವಿಸ್ಟ್‌!
Advertisment
  • ದೇಶದ ಮಟ್ಟಿಗೆ ಅತಿದೊಡ್ಡ ಶಿಕ್ಷೆ ಪ್ರಮಾಣ
  • 101 ಜನರ ಪೈಕಿ 98 ಜನರಿಗೆ ಜೀವಾವಧಿ ಶಿಕ್ಷೆ ಪ್ರಕಟ
  • 117 ಮಂದಿ ಪೈಕಿ 16 ಆರೋಪಿಗಳು ಮೃತಪಟ್ಟಿದ್ದಾರೆ

ದೇಶದ ಇತಿಹಾಸದಲ್ಲಿಯೇ ಅತಿದೊಡ್ಡ ತೀರ್ಪು ಕೊಪ್ಪಳದಲ್ಲಿ ಹೊರಬಿದ್ದಿದೆ. ದಲಿತರನ್ನ ನಿಂದಿಸಿದ್ದ ಪ್ರಕರಣದಲ್ಲಿ ಮೊದಲ ಮಹತ್ವದ ತೀರ್ಪನ್ನ ನ್ಯಾಯಾಲಯ ನೀಡಿದೆ. ದಲಿತರ ಮೇಲೆ ಹಲ್ಲೆ, ದೌರ್ಜನ್ಯ ಕೇಸ್‌ನಲ್ಲಿ ಅತಿದೊಡ್ಡ ಜಯ ಸಿಕ್ಕಿದೆ. ದೇಶವೇ ತಿರುಗಿ ನೋಡುವಂತ ತೀರ್ಪನ್ನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೀಡಿದೆ.

98 ಜನರಿಗೆ ಜೀವಾವಧಿ ಶಿಕ್ಷೆ

ಇಡೀ ದೇಶವೇ ತಿರುಗಿ ನೋಡುವಂತ ತೀರ್ಪೊಂದು ಕೊಪ್ಪಳದ ಕೋರ್ಟ್​​ ನೀಡಿದೆ. ಮರಕುಂಬಿ ಗ್ರಾಮದಲ್ಲಿ ದಲಿತರ ಮೇಲೆ ಹಲ್ಲೆ ಪ್ರಕರಣದಲ್ಲಿ ಮಹತ್ವದ ತೀರ್ಪು ಪ್ರಕಟಗೊಂಡಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮರಕುಂಬಿಯ 101 ಅಪರಾಧಿಗಳ ಪೈಕಿ 98 ಮಂದಿಗೆ 9 ವರ್ಷಗಳ ಬಳಿಕ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್​ ತೀರ್ಪು ಪ್ರಕಟಿಸಿದೆ.

publive-image

ನ್ಯಾಯಧೀಶರಾದ ಚಂದ್ರಶೇಖರ್‌ರಿಂದ ಮಹತ್ವದ ತೀರ್ಪು

ಅಟ್ರಾಸಿಟಿ ಕೇಸ್‌ನಲ್ಲಿ 101 ಜನರ ಪೈಕಿ 98 ಜನರಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. ತಲಾ 5 ಸಾವಿರ ರೂಪಾಯಿ ದಂಡವನ್ನ ಕೊಪ್ಪಳದ ಸತ್ರ ನ್ಯಾಯಾಲಯ ವಿಧಿಸಿ ಆದೇಶ ಹೊರಡಿಸಿದೆ. ಉಳಿದ ಮೂವರಿಗೆ ಕಠಿಣ ಶಿಕ್ಷೆ, ತಲಾ 2 ಸಾವಿರ ದಂಡ ವಿಧಿಸಿದೆ. 117 ಮಂದಿಯ ಪೈಕಿ 16 ಆರೋಪಿಗಳು ಮೃತಪಟ್ಟಿದ್ದಾರೆ. 101 ಆರೋಪಿಗಳ ವಿರುದ್ಧ ಇರುವ ದಾಖಲೆ ಪರಿಶೀಲನೆ ಮಾಡಲಾಗಿದ್ದು. ಅಕ್ಟೋಬರ್ 21ರಂದು ಆರೋಪಿಗಳ ವಿರುದ್ಧದ ಆರೋಪ ಸಾಬೀತಾಗಿದೆ. ನ್ಯಾಯಧೀಶರಾದ ಚಂದ್ರಶೇಖರ್‌ರಿಂದ ಮಹತ್ವದ ತೀರ್ಪು ನೀಡಿದ್ದಾರೆ. ತಡರಾತ್ರಿ ಬಿಗಿ ಬಂದೋಬಸ್ತ್​ನಲ್ಲಿ ಎಲ್ಲಾ ಅಪರಾಧಿಗಳನ್ನ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.

ಇದನ್ನೂ ಓದಿ: ಇಂದು ಹಿತಶತ್ರುಗಳ ಕಾಟ ಹೆಚ್ಚಾಗಬಹುದು, ತುಂಬಾ ಶ್ರಮ ಪಡಬೇಕಾದ ದಿನ; ಇಲ್ಲಿದೆ ಇಂದಿನ ಭವಿಷ್ಯ!

publive-image

ಏನಿದು ಮರಕುಂಬಿ ಪ್ರಕರಣ?​

ಆಗಸ್ಟ್ 28, 2014ರಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಸವರ್ಣೀಯರು, ದಲಿತರ ಮೇಲೆ ಹಲ್ಲೆ ನಡೆಸಿ, ಮನೆಗಳನ್ನ ಧ್ವಂಸಗೊಳಿಸಲಾಗಿತ್ತು. ದಲಿತರ ಮೇಲಿನ ಈ ದೌರ್ಜನ್ಯ ಪ್ರಕರಣ ರಾಜ್ಯದಲ್ಲಿ ಭಾರೀ ಸದ್ದು ಮಾಡಿತ್ತು. ಗಂಗಾವತಿ ಪೊಲೀಸ್ ಠಾಣೆಯಲ್ಲಿ 117 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಬರೋಬ್ಬರಿ ಒಂಭತ್ತು ವರ್ಷಗಳ ನಂತರ ಜಿಲ್ಲಾ ಸತ್ರ ನ್ಯಾಯಧೀಶರು ತೀರ್ಪು ಪ್ರಕಟಿಸಿದ್ದಾರೆ. ಇತಿಹಾಸದಲ್ಲಿಯೇ ದೊಡ್ಡ ತೀರ್ಪು ನೀಡಿ ಕೊಪ್ಪಳ ಕೋರ್ಟ್​ ಆದೇಶ ಹೊರಡಿಸಿದೆ.

ಇದನ್ನೂ ಓದಿ: 25 ಕೆಜಿ ಅಕ್ಕಿ ಚೀಲದಲ್ಲಿ ₹15 ಲಕ್ಷ ಹಣ.. ಕಂತೆ, ಕಂತೆ ನೋಟು ನೋಡಿ ಉಲ್ಟಾ ಹೊಡೆದ ಗ್ರಾಹಕ; ಆಮೇಲೇನಾಯ್ತು?

publive-image

ಒಟ್ಟಾರೆ, ದಲಿತರನ್ನ ಅವಮಾನಿಸಿದ್ರೆ ತಕ್ಕ ಶಿಕ್ಷೆ ಆಗೋದು ಪಕ್ಕಾ ಅನ್ನೋದು ಈ ಕೇಸ್‌ನಿಂದ ಗೊತ್ತಾಗಿದೆ. ಸುಖಾ ಸುಮ್ನನೆ ಅಮಾಯಕರನ್ನ ನಿಂದಿಸಿದ್ರೆ ಜೈಲುವಾಸ ಕಟ್ಟಿಟ್ಟ ಬುತ್ತಿ ಎಂಬ ನ್ಯಾಯವನ್ನ ಕೋರ್ಟ್ ಎತ್ತಿಹಿಡಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment